ETV Bharat / city

ಸರೋಜಿನಿ ಮಹಿಷಿ ಪರಿಷ್ಕೃತ ವರದಿ: ಕೇಂದ್ರಕ್ಕೆ ಸಲ್ಲಿಸಿದ್ದ 14 ಅಂಶಗಳ ಪಟ್ಟಿ ಇಲ್ಲಿದೆ ನೋಡಿ

ಕೇಂದ್ರದ ಮಾಜಿ ಸಚಿವೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ರಾಜ್ಯ ಬಂದ್​​​ಗೆ ಕರೆ ನೀಡಲಾಗಿದೆ.

Sarojini Mahshi Revised Report: complete details
ಸರೋಜಿನಿ ಮಹಿಷಿ ಪರಿಷ್ಕೃತ ವರದಿ
author img

By

Published : Feb 12, 2020, 8:22 PM IST

ಬೆಂಗಳೂರು: ಕೇಂದ್ರದ ಮಾಜಿ ಸಚಿವೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ರಾಜ್ಯ ಬಂದ್​​​ಗೆ ಕರೆ ನೀಡಲಾಗಿದೆ. ಅದರ ಸಾಧಕ-ಬಾಧಕಗಳ ಚರ್ಚೆ ನಡೆದಿರುವ ಸಂದರ್ಭ ವರದಿಯಲ್ಲಿ ಏನಿರಬಹುದು ಎಂಬ ಕುತೂಹಲ ಮೂಡುವುದು ಸಹಜ.

ಸದ್ಯ ಸರೋಜಿನಿ ಮಹಿಷಿ ಪರಿಷ್ಕೃತ ವರದಿಯ ಜಾರಿಗಾಗಿ ಹೋರಾಟದ ಕೂಗು ಕೇಳಿಬರುತ್ತಿದೆ. ನಿರಂತರ 100 ದಿನ ಈ ಸಂಬಂಧ ಪ್ರತಿಭಟನೆ ಧರಣಿ ನಡೆದಿದೆ. ವಿಧಾನಸೌಧ, ಸಿಎಂ ನಿವಾಸದ ಮುತ್ತಿಗೆ ಯತ್ನವೂ ನಡೆದಿದೆ. ಈ ವರದಿಯಿಂದ ಕನ್ನಡಿಗರಿಗೆ ಅನುಕೂಲ ಇದೆ ಎಂದು ಕೆಲವರು ಹೇಳಿದ್ರೆ, ಮತ್ತೆ ಕೆಲವರು ಇದರಿಂದ ನಿರೀಕ್ಷಿತ ಲಾಭವಿಲ್ಲ ಎಂದೂ ಹೇಳುತ್ತಿದ್ದಾರೆ. ಒಟ್ಟಾರೆ ವರದಿಯ ಹಾಗೂ ಸರೋಜಿನಿ ಮಹಿಷಿ ಕುರಿತ ಕಿರು ಮಾಹಿತಿ ಇಲ್ಲಿದೆ.

ವರದಿಗೆ ಮರುಜೀವ:

ಒಂದು ಹಂತದಲ್ಲಿ ವರದಿ ಕಳೆಗುಂದಿ ಮೂಲೆಗುಂಪಾಗಿದ್ದ ವರದಿಗೆ ಮರುಜೀವ ತುಂಬುವ ಯತ್ನ ಮಾಡಿದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು ಸಿಎಂ ಆಗಿದ್ದ ವೇಳೆ ಅಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ನೇತೃತ್ವದ ಪರಿಷ್ಕರಣಾ ಸಮಿತಿ ರಚಿಸಿ ವರದಿ ತರಿಸಿಕೊಂಡರು. ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸಬೇಕಾದ 24 ಶಿಫಾರಸ್ಸುಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ 7 ಸಲಹೆಗಳನ್ನು ಸೇರಿಸಿ 14 ಅಂಶಗಳ ಪರಿಷ್ಕೃತ ವರದಿ ಸಲ್ಲಿಸಿದ್ದರು.

ಅದರ ಮುಖ್ಯಾಂಶಗಳು:

  1. ಖಾಸಗಿ ವಲಯದ ಡಿ ಮತ್ತು ಸಿ ದರ್ಜೆ ಹುದ್ದೆಗಳಿಗೆ ಶೇ.100 ಕನ್ನಡಿಗರನ್ನು ನೇಮಕ ಮಾಡಬೇಕು. ಶೇ.80 ಉನ್ನತ ಹುದ್ದೆಗಳು ಕನ್ನಡಿಗರಿಗೆ ಮೀಸಲಿರಬೇಕು.
  2. ರಾಜ್ಯದ ಎಲ್ಲಾ ಬ್ಯಾಂಕ್ ಗುಮಾಸ್ತರ ಹುದ್ದೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಬೇಕು. 10ನೇ ತರಗತಿಯಲ್ಲಿ ಕನ್ನಡ ಭಾಷೆ ವ್ಯಾಸಂಗ ಮಾಡದವರು ರಾಜ್ಯ ಭಾಷೆ ಪರೀಕ್ಷೆ ಕಡ್ಡಾಯವಾಗಿ ಪಾಸ್ ಮಾಡಬೇಕು.
  3. ರಾಜ್ಯದ ಸರ್ಕಾರಿ ವಲಯದ ಉದ್ಯಮಗಳಿಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಅನ್ಯ ರಾಜ್ಯದವರನ್ನು ನೇಮಕ ಮಾಡಬೇಕಾದ್ರೆ ಸರ್ಕಾರದ ಅನುಮತಿ ಕಡ್ಡಾಯ.
  4. ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ರಾಜ್ಯದಲ್ಲಿ ಎಸ್ಎಸ್ಎಲ್​ಸಿವರೆಗೂ ಓದಿದವರಿಗೆ ಅವಕಾಶ ನೀಡಬೇಕು.
  5. ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಉದ್ಯಮ ಹಾಗೂ ಇಲಾಖೆ ದಿನಗೂಲಿ ನೌಕರರು, ಗುತ್ತಿಗೆ ಆಧಾರದಲ್ಲಿ ನೇಮಿಸಲು ಕಡ್ಡಾಯವಾಗಿ ಕನ್ನಡಿಗರನ್ನೇ ನೇಮಿಸಬೇಕು.
  6. ರಾಜ್ಯದಲ್ಲಿರುವ ಉದ್ಯಮ ಸಂಸ್ಥೆಗಳಲ್ಲಿ ನೌಕರರ ಪ್ರಮಾಣ ನೂರಕ್ಕಿಂತ ಹೆಚ್ಚಿದ್ದಾಗ ಆ ಸಂಸ್ಥೆಯ ನೇಮಕಾತಿ ಆಯ್ಕೆ ಸಮಿತಿಯಲ್ಲಿ ರಾಜ್ಯ ಸರ್ಕಾರದ ಕನ್ನಡ ಪ್ರತಿನಿಧಿ ಕಡ್ಡಾಯವಾಗಿ ಇರಬೇಕು.
  7. ಖಾಸಗಿ ಕೇಂದ್ರ ಸಾರ್ವಜನಿಕ ಉದ್ಯಮಗಳ ನೇಮಕಾತಿ ಪಟ್ಟಿಯನ್ನು ನಿಯಮಿತವಾಗಿ ಪ್ರತಿ ವರ್ಷ ಸಂಬಂಧಪಟ್ಟ ಇಲಾಖೆಗೆ ಕಳುಹಿಸಬೇಕು. ಜೊತೆಗೆ ಕಡ್ಡಾಯವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
  8. ಉದ್ಯೋಗ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡುವ ಹೊಣೆ ನಿರ್ವಹಿಸಲು ಪ್ರತ್ಯೇಕ ತಾಂತ್ರಿಕ ಸಲಹಾ ಮಂಡಳಿಯನ್ನ ಆಯೋಜಿಬೇಕು.
  9. ಕೇಂದ್ರ ಸರ್ಕಾರ ಎಂಪ್ಲಾಯ್​ಮೆಂಟ್ ನ್ಯೂಸ್ ಮಾದರಿಯಲ್ಲಿ ರಾಜ್ಯ ಸರ್ಕಾರ ಉದ್ಯೋಗ ಮಾಹಿತಿಯನ್ನು ಕನ್ನಡದಲ್ಲಿಯೇ ಜಾಹೀರಾತು ನೀಡಬೇಕು. ಅಲ್ಲದೇ ಉದ್ಯೋಗ ಮಾಹಿತಿ ನೀಡುವ ವೆಬ್​ಸೈಟ್ ಪ್ರಾರಂಭಿಸಬೇಕು.
  10. ಸ್ಥಳೀಯರೆಂದು ಪರಿಗಣಿಸಲು ರಾಜ್ಯದಲ್ಲಿ 15 ವರ್ಷ ವಾಸವಿರಬೇಕು. ಕನ್ನಡ ಭಾಷ ಜ್ಞಾನ ಇರಬೇಕು. ಅಲ್ಲದೆ ಎಸ್ಎಸ್ಎಲ್​ಸಿ ಪ್ರಮಾಣ ಪತ್ರ, ಪಡಿತರ ಚೀಟಿ, ಜನ್ಮ ದಾಖಲೆ, ಆಧಾರ್ ಕಾರ್ಡ್ ಯಾವುದಾದರೂ ಒಂದು ದಾಖಲೆ ಹೊಂದಿರಬೇಕು.
  11. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು, ಉದ್ಯಮಗಳು, ಖಾಸಗಿ ವಲಯದ ನಾಮಫಲಕ, ಹೆದ್ಧಾರಿ ಫಲಕಗಳನ್ನ ಕನ್ನಡದಲ್ಲಿ ಕಡ್ಡಾಯವಾಗಿ ಮೊದಲ ಆದ್ಯತೆಯಲ್ಲಿ ಪ್ರದರ್ಶಿಸಬೇಕು.
  12. ಐಸಿಎಸ್​ಸಿ, ಸಿಬಿಎಸ್​ಇ, ಕೇಂದ್ರೀಯ ವಿದ್ಯಾಲಯ, ನವೋದಯ ಇತರ ಆಂಗ್ಲ ಭಾಷೆಯ ಶಿಕ್ಷಣ ಸಂಸ್ಥೆಗಳು 1-10 ತರಗತಿವರೆಗೆ ಕನ್ನಡ ಒಂದು ವಿಷಯವಾಗಿ ಕಡ್ಡಾಯಗೊಳಿಸಬೇಕು.
  13. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಅಥವಾ ಹುದ್ದೆಗಳ ನೇಮಕಾತಿ ನಡೆಸುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಕನ್ನಡದಲ್ಲಿ ಇರಬೇಕು. ಉತ್ತರ ಕನ್ನಡದಲ್ಲಿ ಬರೆಯಲು ರಾಜ್ಯ ಸರ್ಕಾರ ಆಯಾ ಇಲಾಖೆಗಳಿಗೆ ಅಗತ್ಯ ಪದ ಭಂಡಾರ, ಪಠ್ಯ ಸೃಷ್ಟಿಸುವ ಕೆಲಸ ಮಾಡಬೇಕು.
  14. ರಾಜ್ಯ ಸರ್ಕಾರದ ಆಡಳಿತದಲ್ಲಿ ಬಳಸುವ ಎಲ್ಲ ತಂತ್ರಾಂಶಗಳಲ್ಲಿ, ಸಾರ್ವಜನಿಕ ಸಂಪರ್ಕದಲ್ಲಿ ಬಳಸುವ ಎಲ್ಲ ಸಾಧನಗಳಲ್ಲಿ ಖಾಸಗಿ ವಲಯದ ಸಾರ್ವಜನಿಕ ಸಂಪರ್ಕದ ಅಭಿವ್ಯಕ್ತಿ ಮಾಹಿತಿಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.