ETV Bharat / city

ಸಪ್ನಾ ಬುಕ್​​ಹೌಸ್ ಸಂಸ್ಥಾಪಕ ಸುರೇಶ್ ಶಾ ವಿಧಿವಶ, ಗಣ್ಯರಿಂದ ಸಂತಾಪ - ಖ್ಯಾತ ಪುಸ್ತಕ ಮಳಿಗೆ ಸಪ್ನಾ ಬುಕ್​ಹೌಸ್

84 ವರ್ಷ ವಯಸ್ಸಾಗಿದ್ದ ಸುರೇಶ್ ಅವರು, ವಯೋಸಹಜ ಅನಾರೋಗ್ಯದಿಂದ ಚೇತರಿಸಿಕೊಳ್ಳಲಾಗದೇ ಶೇಷಾದ್ರಿಪುರಂ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬುಧವಾರ ಬೆಳಗ್ಗೆ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ..

sapna-book-house-founder-suresh-shah-dead-news
ಸಪ್ನಾ ಬುಕ್​​ಹೌಸ್ ಸಂಸ್ಥಾಪಕ ಸುರೇಶ್ ಶಾ ವಿಧಿವಶ
author img

By

Published : May 25, 2021, 7:26 PM IST

Updated : May 25, 2021, 9:27 PM IST

ಬೆಂಗಳೂರು : ಖ್ಯಾತ ಪುಸ್ತಕ ಮಳಿಗೆ ಸಪ್ನಾ ಬುಕ್​ಹೌಸ್ ಆರಂಭಿಸಿದ ಸುರೇಶ್ ಶಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 1996ರಲ್ಲಿ ಮೆಜೆಸ್ಟಿಕ್ ಬಳಿ ಸಣ್ಣದಾಗಿ ಆರಂಭಿಸಿದ ಪುಸ್ತಕ ಮಳಿಗೆ ನಂತರ 19 ಶಾಖೆಗಳನ್ನು ಆರಂಭಿಸಿ ಅತಿದೊಡ್ಡ ಪುಸ್ತಕ ಮಳಿಗೆ ಎಂಬ ಖ್ಯಾತಿ ಹೊಂದಿದೆ.

ಓದಿ: ಕರ್ನಾಟಕದಲ್ಲಿ 'ಯಾಸ್' ಚಂಡಮಾರುತದ ಎಫೆಕ್ಟ್: ಬೆಂಗಳೂರಲ್ಲಿ ವರುಣಾರ್ಭಟ

84 ವರ್ಷ ವಯಸ್ಸಾಗಿದ್ದ ಸುರೇಶ್ ಅವರು, ವಯೋಸಹಜ ಅನಾರೋಗ್ಯದಿಂದ ಚೇತರಿಸಿಕೊಳ್ಳಲಾಗದೆ ಶೇಷಾದ್ರಿಪುರಂ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬುಧವಾರ ಬೆಳಗ್ಗೆ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಸಪ್ನ ಬುಕ್​​ಹೌಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಪುಸ್ತಕ ಸಂಸ್ಕೃತಿಗೆ ಗಮನಾರ್ಹ ಕೊಡುಗೆ ಕೊಟ್ಟ ಸುರೇಶ್ ಶಾ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ.

ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕೆ ಸಪ್ನಾ ಬುಕ್​​ಹೌಸ್ ಕೊಟ್ಟ ಕೊಡುಗೆ ದೊಡ್ಡದು. ರಾಜ್ಯದ ಪುಸ್ತಕೋದ್ಯಮಕ್ಕೆ ಹೊಸ ಸಾಧ್ಯತೆಗಳನ್ನು ಪರಿಚಯಿಸಿತು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತನು ನೀಡಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Last Updated : May 25, 2021, 9:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.