ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಯಾಗುತ್ತಿದೆ. ಈ ಮಧ್ಯೆ ಕಾಳಿ ಆರಾಧಕರಾದ ರಿಷಿಕುಮಾರ ಸ್ವಾಮೀಜಿ ಕೋಳಿಯನ್ನು ಕತ್ತರಿಸಿರುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ಆಯುರ್ ಆಶ್ರಮದ ಸಂತೋಷ್ ಗುರೂಜಿ ಪ್ರತಿಕ್ರಿಯಿಸಿದ್ದಾರೆ.
ನಗರದ ಬ್ಯಾಡರಹಳ್ಳಿ ಬಳಿಯಿರುವ ಆಯುರ್ ಆಶ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾಮಿಗಳು ಕಾವಿ ಧರಿಸಿ ಕೋಳಿ ಕಟ್ ಮಾಡಬಾರದಿತ್ತು. ದೇವಿಗೆ ಆರತಿ ಮಾಡಿ ಕೋಳಿಗೆ ಆರತಿ ಮಾಡಿದ್ದಾರೆ. ಅದಕ್ಕೆ ಸಮಜಾಯಿಶಿ ಕೂಡ ನೀಡಿರುವುದು ಬೇಸರ ತಂದಿದೆ ಎಂದು ಹೇಳಿದರು.
ಕೋಳಿಯನ್ನು ಅವರೇ ಕಟ್ ಮಾಡುವ ಬದಲು ಶಿಷ್ಯಂದರಿರ ಕೈಯಲ್ಲಿ ಕಟ್ ಮಾಡಿಸಬಹುದಿತ್ತು. ಆದರೆ ಹಲಾಲ್ ಕಟ್ ಬೇಡ. ಹಲಾಲ್ ಕಟ್ ಮಾಡಿದರೆ ನಮ್ಮ ದೇವರಿಗೆ ಅದು ಸಲ್ಲಿಕೆಯಾಗುವುದಿಲ್ಲ ಎಂದು ಸಂತೋಷ್ ಗುರೂಜಿ ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: ಹಲಾಲ್ ವಿರುದ್ಧ ಅಭಿಯಾನ ಆರಂಭಿಸಿದ ರಿಷಿಕುಮಾರ ಸ್ವಾಮೀಜಿ