ETV Bharat / city

ರಾಗಿಣಿ, ಸಂಜನಾ‌ ಸೇರಿದಂತೆ‌ 12 ಮಂದಿ ಆರೋಪಿಗಳಿಂದ ಡ್ರಗ್ಸ್ ಸೇವನೆ ದೃಢ - actress ragini dwivedi

ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯ (FSL)​​ ನೀಡಿದ ವರದಿಯಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಅವರು ಮಾದಕವಸ್ತು ಸೇವಿಸಿರುವುದು ದೃಢಪಟ್ಟಿದೆ.

Sandalwood Drug Case updates
ಸ್ಯಾಂಡಲ್​ವುಡ್ ಡ್ರಗ್​ ಕೇಸ್​: ರಾಗಿಣಿ, ಸಂಜನಾ ಮಾದಕವಸ್ತು ಸೇವಿಸಿರುವುದು ದೃಢ
author img

By

Published : Aug 24, 2021, 10:39 AM IST

Updated : Aug 24, 2021, 12:47 PM IST

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸ್ಯಾಂಡಲ್​​​ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಬಂಧಿತರಾಗಿ ಜಾಮೀನಿನ ಮೇರೆಗೆ ಹೊರಗಿರುವ ನಟಿಯರಾದ ರಾಗಿಣಿ ದ್ವಿವೇದಿ‌, ಸಂಜನಾ ಸೇರಿದಂತೆ ಇನ್ನಿತರ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ.

ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆರೋಪಿಗಳ ಕೂದಲು ಸ್ಯಾಂಪಲ್ ಸಂಗ್ರಹಿಸಿ ಕಳೆದ ವರ್ಷ ಡಿಸೆಂಬರ್​​ನಲ್ಲಿ ನ್ಯಾಯಾಲಯದಿಂದ ಅನುಮತಿ‌ ಪಡೆದು ಸಿಸಿಬಿ‌ ಪೊಲೀಸರು ಕಳುಹಿಸಿದ್ದರು. ಸ್ಯಾಂಪಲ್ ಕಳುಹಿಸಿ 9 ತಿಂಗಳ ಬಳಿಕ ವರದಿಯು ಅಧಿಕಾರಿಗಳ ‌ಕೈ ಸೇರಿದ್ದು, ಸ್ಯಾಂಪಲ್ ತೆಗೆದುಕೊಂಡಿದ್ದ ಎಲ್ಲಾ ಆರೋಪಿಗಳು ಡ್ರಗ್ಸ್ ತೆಗೆದುಕೊಂಡಿರುವುದಾಗಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್​​​ನಲ್ಲಿ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ಪೈಕಿ ರಾಗಿಣಿ, ಸಂಜನಾ, ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಸೇರಿದಂತೆ 12 ಮಂದಿಯ ಕೂದಲು ಮಾದರಿ ಸಂಗ್ರಹಿಸಿ ಹೈದರಾಬಾದ್​​ನಲ್ಲಿರುವ ಎಫ್ಎಸ್ಎಲ್ ಕಳುಹಿಸಲಾಗಿತ್ತು. ಇದೀಗ ವರದಿ ಬಂದ ಬಳಿಕ ನ್ಯಾಯಾಲಯಕ್ಕೆ ತನಿಖಾಧಿಕಾರಿ ಪುನೀತ್ ಎಪ್​ಎಲ್ಎಲ್ ವರದಿ ಸಲ್ಲಿಕೆ ಮಾಡಿದ್ದಾರೆ.

ರಾಗಿಣಿ, ಸಂಜನಾ ಕುತ್ತಿಗೆಗೆ ಸಿಸಿಬಿ ಉರುಳು ಬಿದ್ದಿದ್ದು ಹೇಗೆ?

ನಗರದಲ್ಲಿ ತಡರಾತ್ರಿ ವೇಳೆ ನಡೆಯುವ ಹೈ ಹ್ಯಾಂಡ್ ಪಾರ್ಟಿಗಳ ಮೇಲೆ ಸಿಸಿಬಿ ಕಣ್ಣು ಇಟ್ಟಿತ್ತು. ತಿಂಗಳಗಟ್ಟಲೆ ಕಾದರೂ ಸಹ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ದೆಹಲಿ ಮೂಲದ ವಿರೇನ್ ಖನ್ನ ಬಹುತೇಕ ಪಾರ್ಟಿಗಳನ್ನ ಆಯೋಜನೆ ಮಾಡುತ್ತಿದ್ದ. ಪಾರ್ಟಿಗಳು ಮೇಲ್ನೋಟಕ್ಕೆ ಮದ್ಯದ ಪಾರ್ಟಿ ರೀತಿ ಇರುತ್ತಿದ್ದವು. ಆದರೆ ರೆಸಾರ್ಟ್ ನ ರೂಮ್ ಒಳಭಾಗದಲ್ಲಿ ಬಾಗಿಲು ಹಾಕಿ ಡ್ರಗ್ಸ್ ಸೇವನೆ ನಡೆಯುತ್ತಿತ್ತು.

ಪಾರ್ಟಿಯಲ್ಲಿ ಸರ್ವ್ ಮಾಡುವ ಕೆಲಸಗಾರರಿಗೂ ಅನುಮಾನ ಬಾರದಂತೆ ಡ್ರಗ್ಸ್ ಸೇವನೆ ನಡೆಯುತ್ತಿತ್ತು. ಉದ್ಯಮಿಗಳ ಮಕ್ಕಳು, ಸೆಲೆಬ್ರಿಟಿಗಳು ಕೆಲ ಸಾಫ್ಟ್‌ವೇರ್ ಉದ್ಯಮಿಗಳು ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು. ಈ ಕುರಿತ ಖಚಿತ ಮಾಹಿತಿ ಆಧರಿಸಿ ರಾಗಿಣಿ ಆಪ್ತ ರವಿಶಂಕರ್, ಸಂಜನಾ ಆಪ್ತ ರಾಹುಲ್‌ ಬಂಧನವಾಗಿತ್ತು. ಬಳಿಕ ಹಂತ-ಹಂತವಾಗಿ ರಾಗಿಣಿ, ಸಂಜನಾ, ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಸೇರಿದಂತೆ 15ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಮೂತ್ರ ಸ್ಯಾಂಪಲ್‌ ಕಳುಹಿಸಲಾಗುತ್ತದೆ. ಡ್ರಗ್ಸ್ ಸೇವಿಸಿ ಒಂದೆರಡು ದಿನ ಆಗಿದರೆ ಮಾತ್ರ ಪಾಸಿಟಿವ್ ಬರುತಿತ್ತು. ಕೆಲವು ಪ್ರಕರಣದಲ್ಲಿ ಆರೋಪಿಯನ್ನು ತಡವಾಗಿ ಅರೆಸ್ಟ್ ಮಾಡಿದ್ದರಿಂದ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆ ಪತ್ತೆ ಮಾಡುವುದು ಕಷ್ಟ ಆಗುತಿತ್ತು.

'ಸಿಸಿಬಿ ಸಿಕ್ಕ ದೊಡ್ಡ ಜಯ'

ಡ್ರಗ್ಸ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಕಮಲ್‌ ಪಂತ್, ಹೈದರಾಬಾದ್ ಎಫ್ಎಸ್ಎಲ್​​ನಿಂದ ವರದಿ ಬಂದಿದೆ. ಈ ವರದಿಯಲ್ಲಿ ಎಲ್ಲಾ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ. ಎಲ್ಲಾ ಆರೋಪಿಗಳ ರಿಪೋರ್ಟ್ ಪಾಸಿಟಿವ್ ಬಂದಿದೆ‌. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಕೂದಲು ಸಂಗ್ರಹಿಸಿ ಎಫ್ಎಸ್ಎಲ್​ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಎಲ್ಲಾ ಆರೋಪಿಗಳು ರಿಪೋರ್ಟ್ ಪಾಸಿಟಿವ್ ಬಂದಿದೆ. ಇದು ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ‌ ಮಾಡಿದ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕ ಜಯವಾಗಿದೆ ಎಂದರು.

Last Updated : Aug 24, 2021, 12:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.