ETV Bharat / city

ನಾಳೆ ಸಾಲುಮರದ ತಿಮ್ಮಕ್ಕಗೆ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ - ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕರ ಸೊಂಟದ ಮೂಳೆ ಸಣ್ಣದಾಗಿ ಕ್ರ್ಯಾಕ್ ಆಗಿರುವುದರಿಂದ ನಾಳೆ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ.

saalu marada thimmaka
ಸಾಲು ಮರದ ತಿಮ್ಮಕ್ಕ
author img

By

Published : Dec 8, 2020, 6:14 PM IST

ಬೆಂಗಳೂರು: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಗರದ ಜಯನಗರ ಆಸ್ಪತ್ರೆಯಲ್ಲಿ ನಿನ್ನೆ ದಾಖಲಾಗಿದ್ದು, ಭಾನುವಾರ ಮನೆಯಲ್ಲಿ ಬಿದ್ದ ಪರಿಣಾಮ ಸೊಂಟದ ಮೂಳೆ ಮುರಿದಿದೆ.‌

ಹೀಗಾಗಿ ಹೆಚ್ಚಿನ‌ ಚಿಕಿತ್ಸೆಗಾಗಿ ಅಪೋಲೊ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. 108 ವರ್ಷದ ಸಾಲುಮರದ ತಿಮ್ಮಕ್ಕರ ಸೊಂಟದ ಮೂಳೆ ಸಣ್ಣದಾಗಿ ಕ್ರ್ಯಾಕ್ ಆಗಿರುವುದರಿಂದ ನಾಳೆ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಅವರ ಮಗ ಉಮೇಶ್ ಮಾಹಿತಿ ನೀಡಿದ್ದು, ಸರ್ಜರಿ ನಾಳೆ ನಡೆಯಲಿದೆ. ಸದ್ಯ ಎಲ್ಲರೊಂದಿಗೂ ಅಮ್ಮ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.