ETV Bharat / city

ರಾಜ್ಯಪಾಲರ‌ ಭಾಷಣ ಸುಳ್ಳಿನ ಕಂತೆ: ‌ಎಸ್.ಆರ್.ಪಾಟೀಲ್ ಟೀಕೆ

ರಾಜ್ಯಪಾಲರು ಮಸಾಲೆ, ಉಪ್ಪು, ಖಾರ ಇಲ್ಲದ ಸಪ್ಪೆ ಭಾಷಣ ಮಾಡಿದ್ದಾರೆ. ಒಗ್ಗರಣೆಯೂ ಇಲ್ಲ, ಹರಸಾಹಸ ಮಾಡಿ ಮ್ಯಾಜಿಕ್‌ ಫಿಗರ್ ರೀಚ್ ಆದರು. ಆದರೆ ಸಿಎಂ ಪ್ರಮಾಣ ವಚನ ಸಹ ವಿಳಂಬವಾಯಿತು. ನಂತರ ಸಂಪುಟಕ್ಕೆ‌ ಸಚಿವರನ್ನು ತೆಗೆದುಕೊಳ್ಳಲು ವಿಳಂಬ ಮಾಡಲಾಯಿತು ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಕಿಡಿಕಾರಿದರು.

S R Patil criticize the Governor's speech
‌ಎಸ್.ಆರ್. ಪಾಟೀಲ್
author img

By

Published : Mar 9, 2020, 4:58 PM IST

ಬೆಂಗಳೂರು: ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದೀರಿ, ನೀವು ಏನೂ ಮಾಡದೇ ರಾಜ್ಯಪಾಲರಿಂದ ಬರೀ ಸುಳ್ಳಿನ ಕಂತೆಯನ್ನು ಹೇಳಿಸಿದ್ದೀರಿ ಎಂದು ರಾಜ್ಯಪಾಲರ ಭಾಷಣವನ್ನು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಟೀಕಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ‌ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರಾಜ್ಯಪಾಲರು ಮಸಾಲೆ, ಉಪ್ಪು, ಖಾರ ಇಲ್ಲದ ಸಪ್ಪೆ ಭಾಷಣ ಮಾಡಿದ್ದಾರೆ. ಒಗ್ಗರಣೆಯೂ ಇಲ್ಲ, ಹರಸಾಹಸ ಮಾಡಿ ಮ್ಯಾಜಿಕ್‌ ಫಿಗರ್ ರೀಚ್ ಆದರು. ಆದರೆ ಸಿಎಂ ಪ್ರಮಾಣ ವಚನ ಸಹ ವಿಳಂಬವಾಯಿತು. ನಂತರ ಸಂಪುಟಕ್ಕೆ‌ ಸಚಿವರನ್ನು ತೆಗೆದುಕೊಳ್ಳಲು ವಿಳಂಬ ಮಾಡಲಾಯಿತು. ನೆರೆಯಲ್ಲಿ ಸಿಎಂ‌ ಒಬ್ಬರೆ ಪ್ರವಾಸ ಮಾಡಿದ್ದರು. ಅವರು ದೈತ್ಯ ಶಕ್ತಿ ಕುರಿತು ನನಗೂ ಗೌರವವಿದೆ, ಆದರೆ ಸಂಪುಟ ಸದಸ್ಯರನ್ನು ನೇಮಿಸಿಕೊಂಡಿದ್ದರೆ ಅನುಕೂಲ‌ ಆಗುತ್ತಿತ್ತು. ಅದನ್ನು ಮಾಡಲಿಲ್ಲ ಎಂದು ನೆರೆ ಸನ್ನಿವೇಶ ಎದುರಿಸಿದ ಪರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ರಚನೆಗೆ ಶಾಸಕರನ್ನು ನಮ್ಮ ಕಡೆಯಿಂದ ಓಡಿಸಿಕೊಂಡು ಹೋದರು. ಬಾಂಬೆಯಲ್ಲಿ ಹೋಟೆಲ್​ನಲ್ಲಿ ಇಟ್ಟು ಬೌನ್ಸರ್​ಗಳನ್ನು ನೇಮಿಸಿದ್ದರು. ಅಲ್ಲಿನ ಸರ್ಕಾರ ಬಳಸಿ ರಕ್ಷಣೆ ಕೊಡಲಾಗಿತ್ತು. ಆದರೂ ಬಿಜೆಪಿಯವರಿಗೆ ಏನೂ ‌ಗೊತ್ತಿಲ್ಲ. ನಂತರ ಹಣ, ಹೆಂಡದ‌ ಹೊಳೆ ಹರಿಸಿಯೋ ಏನೋ ಅವರಲ್ಲಿ 12 ಜನ ಆಯ್ಕೆಯಾದರು. ಆದರೂ ಜನರ ತೀರ್ಪು ಒಪ್ಪುತ್ತೇವೆ. 12 ಜನ ಮರು ದಿನವೇ ಸಚಿವರಾಗುವ ನಿರೀಕ್ಷೆಯಲ್ಲಿದ್ದರು ಆದರೆ ಆಗಲಿಲ್ಲ, ನುಡಿದಂತೆ ನಡೆಯಲಿಲ್ಲ. ನಿಮ್ಮೆಲ್ಲರಿಗೂ ಸಚಿವ ಸ್ಥಾನ ನೀಡುತ್ತೇನೆ ಎಂದಿದ್ದರು. ಆ ಭರವಸೆ ನೀಡಿದ್ದು ಆಮಿಷ ಒಡ್ಡಿದಂತಲ್ಲವೇ? ನುಡಿದಂತೆ ನಡೆಯುವ ಕುರಿತು ಶರಣರ ವಚನ ಚಾಚು ತಪ್ಪದೆ ಪಾಲಿಸಿದ್ದೀರಿ ಎಂದು ವ್ಯಂಗ್ಯವಾಡಿದರು.

ನಿಮಗೆ ಸಮಯವೇ ಸಿಕ್ಕಿಲ್ಲ, ನಿಮ್ಮದೇ ಆದ ಕೊಡುಗೆ ಇಲ್ಲ,‌ ಕೆಲಸ‌ ಕಾರ್ಯ ಮಾಡಲು ನಿಮಗೆ ಸಮಯ ಇಲ್ಲ, ಪ್ರತಿಜ್ಞಾವಿಧಿ‌ ತಡವಾಯ್ತು, ಅದಕ್ಕೆ ಸಮಯ ಮೀಸಲಿಟ್ಟಿರಿ. ವಾಮಮಾರ್ಗದ ಮೇಲೆ ಅಧಿಕಾರಕ್ಕೆ ಬಂದಿರುವಿರಿ ಎಂದರು.

ಇದಕ್ಕೆ ಆಡಳಿತ ಪಕ್ಷ ಆಕ್ಷೇಪ ವ್ಯಕ್ತಪಡಿಸಿತು. ತೇಜಸ್ವಿನಿಗೌಡ ಮೈತ್ರಿ ಸರ್ಕಾರ ಬಿದ್ದಿದ್ದು ವಾಮಮಾರ್ಗದಿಂದ‌, ಬಿಜೆಪಿ ಸರ್ಕಾರ ಬಂದಿದ್ದು ರಾಜ ಮಾರ್ಗದಿಂದ ಎಂದು ಹೇಳಿದರು. ನಂತರ ಮಾತು ಮುಂದುವರೆಸಿದ ಎಸ್.ಆರ್.ಪಾಟೀಲ್, ಹೊಸದಾಗಿ ಸಚಿವರಾದ 10 ಮಂದಿಯಲ್ಲಿ‌ ಹುರುಪು ಕಾಣುತ್ತಿಲ್ಲ, ಬಹಳ ದಿನದ ಕನಸು ನನಸಾಯ್ತು ಎಂದುಕೊಂಡಿದ್ದ ಹುಮ್ಮಸ್ಸು ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ನಿಮ್ಮನ್ನು ಕೈಬಿಟ್ಟಿದ್ದರಲ್ಲ ಎನ್ನುವ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಎಸ್.ಆರ್ ಪಾಟೀಲ್, ಹಿಂದೆ ಸಂಪುಟದಿಂದ ಕೈಬಿಡುವ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಅದನ್ನು ನಾನು ಒಪ್ಪಿಕೊಂಡೆ, ಸಿಎಂ ಪರಮಾಧಿಕಾರ ಅದು, ಅದರಂತೆ ಕೈಬಿಟ್ಟರು, ನಂತರ ಸಿದ್ದರಾಮಯ್ಯ ಸಿಕ್ಕಾಗ ಮಂತ್ರಿಯಾಗಿ ಮೂರು ವರ್ಷಕ್ಕೆ ಮೂರು ಕೋಟಿ ‌ಸಾಲ ಮಾಡಿದ್ದೆ. ಇನ್ನೆರಡು ವರ್ಷ ಇದ್ದರೆ ಇನ್ನೆರಡು ಕೋಟಿ ಸಾಲ ಆಗುತ್ತಿತ್ತು. ಅಷ್ಟರಲ್ಲಿ ನನ್ನ ಕೆಳಗಿಳಿಸಿ‌ ಎರಡು ಕೋಟಿ ಸಾಲ ಕಡಿಮೆ ಮಾಡಿದರು ಎಂದಾಗ ಸದನ ನಗೆಗಡಲಲ್ಲಿ ತೇಲಿತು. ಈ ವೇಳೆ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ, ಈಗ ಹಾಗಿಲ್ಲ ಬಿಡಿ, ಮೇಲಿನ‌ ಶಂಖದಿಂದ‌ ಬಿದ್ದರೆ ಮಾತ್ರ ತೀರ್ಥ, ಇದು ಎಲ್ಲಾ ಪಕ್ಷದ್ದೂ ಅಷ್ಟೇ ಕಥೆ ಎಂದು ಸಂಪುಟ‌ ರಚನೆಗೂ ಹೈಕಮಾಂಡ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಮಾತು ಮುಂದುವರೆಸಿದ ಎಸ್.ಆರ್. ಪಾಟೀಲ್, ರಾಜ್ಯಪಾಲರ‌ ಭಾಷಣ ಸುಳ್ಳಿನ ಕಂತೆ, ಸುಳ್ಳಿನ‌ ಸರಮಾಲೆ ಓದಿದ್ದಾರೆ. ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಬೇಕು‌, ಆದರೆ ಇವರು ಸುಳ್ಳು ಹೇಳಿದ್ದಾರೆ. ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ. ಸುಳ್ಳು ಹೇಳುವುದಕ್ಕೂ ಇತಿಮಿತಿ ಇದೆ, ಸುಳ್ಳಿಗೆ‌ ನೋಬಲ್ ಪಾರಿತೋಷಕ‌ ಇಟ್ಟಿದ್ದರೆ ಅದು ಇವರಿಗೆ ಸಿಕ್ತಾ ಇತ್ತು. ಇದು ಧಮ್ ಇರಲಾರದ ಭಾಷಣ, ತಾಕತ್ ಇಲ್ಲದ ಭಾಷಣ, ಹಾವಿನ ಪೊರೆ ರೀತಿಯ ಭಾಷಣ ಎಂದು ಟೀಕಿಸಿದರು.

ಕಳ್ಳತನ ನಿಲ್ಲಿಸಲು ಕಳ್ಳರ ಕೈಗೆ ಕೀಲಿಕೈ ಕೊಡಬೇಕು ಎಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ‌ ಬಂದಿದೆ ಎಂದು ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಇದು ಸಂವಿಧಾನ ಬಾಹಿರ ಹೇಳಿಕೆ ಎಂದರು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಇದಕ್ಕೆ ಧ್ವನಿಗೂಡಿಸಿ, ಅಂಕಿ ಅಂಶದ‌ ಆಧಾರದಲ್ಲೇ ನಮ್ಮ ಸರ್ಕಾರ ಬಂದಿದೆ. ಈ‌ ರೀತಿಯ ಹೇಳಿಕೆ‌ ಸಲ್ಲದು, ಹೇಳಿಕೆಯನ್ನು ಕಡತದಿಂದ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಆಡಳಿತ ಪಕ್ಷದ ಆಗ್ರಹಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎಸ್.ಆರ್. ಪಾಟೀಲ್, ಭಾಷಣದಲ್ಲಿ ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದರೆ ನಾನೇ ಸೆಲ್ಯೂಟ್ ಮಾಡುತ್ತಿದ್ದೆ, ಆದರೆ ಅದನ್ನು ಮಾಡಿಲ್ಲ. ನೆರೆ ಸಂತ್ರಸ್ತರ ಮನೆ ಕಟ್ಟಲು 5 ಲಕ್ಷ ಕೊಟ್ಟಿದ್ದೀವಿ ಅಂತಾ ಭಾಷಣದಲ್ಲಿ ಹೇಳಿದ್ದಾರೆ. ಒಂದು ಲಕ್ಷ ಕೊಟ್ಟು ಸುಮ್ಮನಾಗಿದ್ದಾರೆ. ಅತಿ ಹೆಚ್ಚು ಪರಿಹಾರ ನಾವು ಕೊಟ್ಟಿದ್ದೇವೆ ಅಂತಾರೆ, ಕೊಡಗಿನಲ್ಲಿ‌ ನಾವು 9 ಲಕ್ಷ ಕೊಟ್ಟಿದ್ದೆವಲ್ಲವೇ, ಇವರು ಬರೀ ಸುಳ್ಳಿನ ಕಂತೆಯನ್ನೇ ಹೇಳಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.