ETV Bharat / city

ದಿನಸಿ ಹಂಚಲು ಹೋಗುತ್ತಿದ್ದ ಆರ್​ಎಸ್​ಎಸ್ ಕಾರ್ಯಕರ್ತನ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ - ಆರ್​ಎಸ್​ಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ

ಲಾಕ್​ಡೌನ್ ಹಿನ್ನೆಲೆ ಅನಗತ್ಯವಾಗಿ ಓಡಾಡುವವರ ಮೇಲೆ ಖಾಕಿ ಕಣ್ಣಿಟ್ಟಿದ್ದು, ನಿನ್ನೆ ದಿನಸಿ ಹಂಚಲು ಹೋಗುತ್ತಿದ್ದ ಆರ್​ಎಸ್​ಎಸ್ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಪೊಲೀಸರಿಂದ ಹಲ್ಲೆ ಆರೋಪ
ಪೊಲೀಸರಿಂದ ಹಲ್ಲೆ ಆರೋಪ
author img

By

Published : Apr 21, 2020, 9:56 AM IST

ಬೆಂಗಳೂರು: ಜನರಿಗೆ ದಿನಸಿ ಹಂಚಲು ಹೋಗುತ್ತಿದ್ದ ಆರ್​ಎಸ್​ಎಸ್ ಕಾರ್ಯಕರ್ತನ ಮೇಲೆ ಹಲಸೂರು ಗೇಟ್ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಲಾಕ್​ಡೌನ್ ಹಿನ್ನೆಲೆ ಅನಗತ್ಯವಾಗಿ ಓಡಾಡುವವರ ಮೇಲೆ ಖಾಕಿ ಕಣ್ಣಿಟ್ಟಿದ್ದು, ತಪಾಸಣೆ ನಡೆಸಿ ನಂತರ ಬಿಟ್ಟು ಕಳುಹಿಸುತ್ತಿದ್ದಾರೆ. ಆರ್​ಎಸ್​ಎಸ್ ಸ್ವಯಂ ಸೇವಕರ ತಂಡ‌ ಲಾಕ್​ಡೌನ್ ಆದ ಮೊದಲ ದಿನದಿಂದಲೂ ಜನರಿಗೆ ದಿನಸಿ ವಿತರಿಸುತ್ತಿದ್ದಾರೆ. ನಿನ್ನೆ ಕಬ್ಬನ್​ಪೇಟೆಯಿಂದ ಸಂಪಂಗಿ, ರಾಮನಗರಕ್ಕೆ ದಿನಸಿ ತೆಗೆದುಕೊಂಡು ಅಮಿತ್, ವಿನಯ್ ಪಾಂಡೆ, ಪ್ರತಾಪ್ ಎನ್ನುವವರು ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಲಸೂರು ಗೇಟ್ ಪೊಲೀಸರು ತಡೆದು ವಿಚಾರಣೆ ನಡೆಸಿದ್ದಾರೆ. ಪಾಸ್ ಇದ್ದರೂ ಸಹ ವಾಹನ ತಡೆದು ಪ್ರತಾಪ್ ಎಂಬುವವರ ಮೇಲೆ ಹಲ್ಲೆ ಮಾಡಿ ಎಂದು ಆರ್​ಎಸ್​ಎಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ‌. ಈ ಸಂಬಂಧ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.