ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದಾನೆ.
ಇತ್ತೀಚೆಗೆ ಸುಬ್ರಮಣ್ಯಪುರ ಪೊಲೀಸರು ಎನ್ಡಿಪಿಎಸ್ ಪ್ರಕರಣದಲ್ಲಿ ಪ್ರದೀಪ್ ಆಲಿಯಾಸ್ ಲಿಂಗ ಹಾಗೂ ಧೀರಯ್ಯ ಎಂಬುವರನ್ನು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಸೈಕಲ್ ರವಿ ಸಹ ಭಾಗಿಯಾಗಿ ತಲೆಮರೆಸಿಕೊಂಡು ಒಡಾಡುತ್ತಿದ್ದ.
ಎನ್ಡಿಪಿಎಸ್ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೈಕಲ್ ರವಿ ವಿರುದ್ಧ ಜಾಮೀನುರಹಿತ ವಾರೆಂಟ್ (Non-Bailable Warrant) ಹೊರಡಿಸಿತ್ತು. ಈ ಸಂಬಂಧ ಇಂದು ಕೋರ್ಟ್ ಮುಂದೆ ಹಾಜರಾಗಿದ್ದಾನೆ. ಬಳಿಕ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಟ್ಟು ಮೂರು ಸಕ್ರಿಯ ಪ್ರಕರಣಗಳಲ್ಲಿ ಬೇಕಾಗಿದ್ದ ಸೈಕಲ್ ರವಿ, ಜಯನಗರ ಪೊಲೀಸರಿಗೂ ಡ್ರಗ್ಸ್ ಕೇಸ್ನ ವಿಚಾರಣೆಗೆ ಬೇಕಾಗಿದ್ದ. ಜೊತೆಗೆ, ಕೆ.ಜಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ದೀಪು ಎಂಬಾತನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತನಿಗಾಗಿ ದಕ್ಷಿಣ ವಿಭಾಗದ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಹುಡುಕಾಡುತ್ತಿದ್ದರು.