ETV Bharat / city

ಲಾಕ್​ಡೌನ್​ ಹಿನ್ನೆಲೆ ಮನೆಯಲ್ಲಿದ್ದ ರೌಡಿ ಶೀಟರ್​ ಬುಜ್ಜು ಬರ್ಬರ ಹತ್ಯೆ, ಹಳೇ ದ್ವೇಷ ಶಂಕೆ - bangalore crime news

ಬುಜ್ಜು (30) ಹತ್ಯೆಯಾದ ರೌಡಿ ಶೀಟರ್. ಈತ ಕೆ.ಜಿ.ಹಳ್ಳಿಯ ನ್ಯೂ ಬಾಗಲೂರು ಲೇಔಟ್​ನಲ್ಲಿ ವಾಸವಾಗಿದ್ದು,ಲಾಕ್​ಡೌನ್​ ಹಿನ್ನೆಲೆ ಮನೆಯಲ್ಲಿಯೇ ಇದ್ದ. ಇದನ್ನ ಗಮನಿಸಿದ ಆತನ ವಿರೋಧಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ,ಕೊಲೆಗೈದಿದ್ದಾರೆ. ಹಳೆಯ ದ್ವೇಷ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Rowdy Sheetar Assassination In Bangalore
ಲಾಕ್​ಡೌನ್ ನಡುವೆಯೇ ಸಿಲಿಕಾನ್​ ಸಿಟಿಯಲ್ಲಿ ಹರಿಯಿತು ನೆತ್ತರು..ರೌಡಿ ಶೀಟರ್ ಬರ್ಬರ ಹತ್ಯೆ
author img

By

Published : May 3, 2020, 8:58 AM IST

ಬೆಂಗಳೂರು: ಲಾಕ್​ಡೌನ್​ ನಡುವೆಯೂ ಸಿಲಿಕಾನ್​ ಸಿಟಿಯ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್​ ಒಬ್ಬನ ಬರ್ಬರ ಹತ್ಯೆ ನಡೆದಿದೆ.

ಬುಜ್ಜು (30) ಹತ್ಯೆಯಾದ ರೌಡಿ ಶೀಟರ್. ಈತ ಕೆ.ಜಿ.ಹಳ್ಳಿಯ ನ್ಯೂ ಬಾಗಲೂರು ಲೇಔಟ್​ನಲ್ಲಿ ವಾಸವಾಗಿದ್ದು,ಲಾಕ್​ಡೌನ್​ ಹಿನ್ನೆಲೆ ಮನೆಯಲ್ಲಿಯೇ ಇದ್ದ. ಇದನ್ನ ಗಮನಿಸಿದ ಆತನ ವಿರೋಧಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ,ಕೊಲೆಗೈದಿದ್ದಾರೆ. ಹಳೆಯ ದ್ವೇಷ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು,ಈ ಹಿಂದೆ ರೌಡಿ ಡ್ಯಾನಿಯಲ್ ಸಂಬಂಧಿ ಸ್ಟಾಲಿನ್ ಹತ್ಯೆಯಲ್ಲಿ ಬುಜ್ಜು ಭಾಗಿಯಾಗಿದ್ದ. ಸ್ಟಾಲಿನ್ ಹತ್ಯೆ ಬಳಿಕ ಆತನ ಸಹಚರರು ಬುಜ್ಜು ಸಹೋದರ ವಿನೋದ್​​ನನ್ನು ಹತ್ಯೆಗೈದಿದ್ದರು. ಬಳಿಕ ಎರಡು ಕಡೆ ಒಂದೊಂದು ಹತ್ಯೆಯಾಗಿದೆ. ಹೀಗಾಗಿ ಇಬ್ಬರೂ ಸಂಧಾನ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ರೌಡಿ ಶೀಟರ್ ಬುಜ್ಜು ಹತ್ಯೆಯಾಗಿದ್ದು, ಡ್ಯಾನಿಯಲ್ ಸಹಚರರಿಂದಲೇ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಕೆಜಿ ಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ತನಿಖೆ ಬಳಿಕವಷ್ಟೇ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.