ETV Bharat / city

ಚುನಾವಣೆ ಮೂಡ್​ನಲ್ಲಿದ್ದ ರೌಡಿಶೀಟರ್ ಕುಣಿಗಲ್ ಗಿರಿ ಅರೆಸ್ಟ್​ - Kunigal Giri Arrest

ಈ ಹಿಂದೆ ಸಹ ಕುಣಿಗಲ್ ಗಿರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ರು. ಈತನ ಮೇಲೆ ಹಪ್ತಾ ವಸೂಲಿ, ಕೊಲೆ ಯತ್ನ, ದರೋಡೆ, ಡಕಾಯಿತಿ ಸೇರಿದಂತೆ ಹಲವಾರು ಪ್ರಕರಣಗಳಿವೆ..

Kunigal Giri
ಕುಣಿಗಲ್ ಗಿರಿ
author img

By

Published : Dec 7, 2020, 10:14 AM IST

ಬೆಂಗಳೂರು : ಚುನಾವಣೆ ಮೂಡ್​ನಲ್ಲಿದ್ದ ರೌಡಿಶೀಟರ್​ ಕುಣಿಗಲ್ ಗಿರಿ​ಗೆ ಬೆಂಗಳೂರು ಪೊಲೀಸರು ಶಾಕ್ ನೀಡಿದ್ದಾರೆ.

ಗ್ರಾಪಂ ಚುನಾವಣೆ ಹಿನ್ನೆಲೆ ಇಂದು ನಾಮಪತ್ರ ಸಲ್ಲಿಸಲು ಕುಖ್ಯಾತ ರೌಡಿಶೀಟರ್ ಕುಣಿಗಲ್ ಗಿರಿ ತಯಾರಿ ನಡೆಸಿದ್ದ. ಆದರೆ, ಈತ ಕಾಮಾಕ್ಷಿಪಾಳ್ಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸರು ಇಂದು ಗಿರೀಶ್​ನನ್ನು ಬಂಧಿಸಿದ್ದಾರೆ.

ಕಳೆದ ತಿಂಗಳು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮಂಜುನಾಥ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣದ ಹಿನ್ನೆಲೆ ಕೆಲವರನ್ನು ಬಂಧಿಸಿ, ವಿಚಾರಣೆ ಮಾಡಿದಾಗ ಕೇಸ್​ನಲ್ಲಿ ಕುಣಿಗಲ್ ಗಿರಿ ಹೆಸರು ಕೇಳಿ ಬಂದಿತ್ತು. ಹೀಗಾಗಿ ಪೊಲೀಸರು ಗಿರಿಯನ್ನು ಇಂದು ಬಂಧಿಸಿದ್ದು, ಆತನ ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿಂದೆ ಸಹ ಕುಣಿಗಲ್ ಗಿರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ರು. ಈತನ ಮೇಲೆ ಹಪ್ತಾ ವಸೂಲಿ, ಕೊಲೆ ಯತ್ನ, ದರೋಡೆ, ಡಕಾಯಿತಿ ಸೇರಿದಂತೆ ಹಲವಾರು ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.