ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಡುವಿನ ವಾಕ್ಸಮರ ದಿನೇದಿನೆ ತಾರಕಕ್ಕೇರುತ್ತಿದೆ. ನಿನ್ನೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಮಾಜಿ ಸಿಎಂ ಹೆಚ್ಡಿಕೆ ಮೇಲೆ ಗಂಭೀರ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರು, ಮಹಾಲಕ್ಷ್ಮಿಲೇಔಟ್ನಲ್ಲಿರೋ ರಾಕ್‌ಲೈನ್ ಮನೆ ಮುಂದೆ ಪ್ರತಿಭಟನೆ ಮಾಡಿ, ಕ್ಷಮೆ ಕೇಳುವಂತೆ ಬಿಗಿಪಟ್ಟು ಹಿಡಿದಿದ್ದರು.
ಈ ವೇಳೆ ಮಾತನಾಡಿದ ರಾಕ್‌ಲೈನ್ ವೆಂಕಟೇಶ್, ನನಗೂ ವಾಕ್ ಸ್ವಾತಂತ್ರ್ಯ ಇದೆ. ನಾನು ಮಾತನಾಡಿರೋದ್ರಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ಇಲ್ಲ. ಅಂಬರೀಶ್ ಜೊತೆ ನನಗೆ ಒಳ್ಳೆಯ ಬಾಂಧವ್ಯ ಇದೆ. ಜೊತೆಗೆ ಅವರ ಕುಟುಂಬಕ್ಕೆ ನಾನು ಬೆನ್ನೆಲುಬಾಗಿ ನಿಂತಿದ್ದೇನೆ. ಅಂಬರೀಶ್ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಗೌರವದಿಂದ ಸಪೋರ್ಟ್ ಮಾಡಿದ್ದೇನೆ.
ಕುಮಾರಸ್ವಾಮಿಯನ್ನ ನೋಯಿಸುವ ಉದ್ದೇಶ ಇಲ್ಲ ಎಂದರು.
ರಾಜಕಾರಣ ನನಗೆ ಬೇಡವಾದ ವಿಚಾರ
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲರೂ ರಾಜಕೀಯಕ್ಕೆ ಕರೆದಿದ್ರೂ ನಾನು ಹೋಗಲಿಲ್ಲ. ಎರಡು ವರ್ಷದಿಂದ ವಾಕ್ಸಮರ ನಡೀತಿದೆ. ಈ ಮೊದಲು ನಾನು ಎಲ್ಲೂ ಮಾತಾಡಿಲ್ಲ. ಮಂಡ್ಯ ಜಿಲ್ಲೆಯ ವಿಷಯದಲ್ಲಿ ನಾನು ಎಂಪಿ, ಎಎಂಎಲ್ ಅಲ್ಲ. ನಾನು ರಾಜಕಾರಣ ಮಾಡಬೇಕು ಎಂದಿದ್ರೆ ಮಾಡ್ತಿದ್ದೆ. ಕುಮಾರಸ್ವಾಮಿ ಎಷ್ಟೇ ಕೆಟ್ಟದಾಗಿ ಮಾತಾನಾಡಿದ್ರೂ ಕೂಡ ಈ ಮೊದಲು ನಾನು ಮಾತನಾಡಿರಲಿಲ್ಲ. ಯಾಕಂದ್ರೆ, ಅದು ರಾಜಕೀಯವಾಗಿತ್ತು. ರಾಜಕೀಯ ವೇಳೆ ಸುಮಲತಾ ನೋವಿನಲ್ಲಿದ್ರು. ನಿನ್ನೆ ಅಂಬರೀಶ್ ಸಮಾಧಿ ವಿಚಾರ ಬಂದಾಗ ನಾನು ಮಾತನಾಡಿದ್ದೇನೆ. ಅಂಬರೀಶ್ ನಿಧನರಾದಾಗ ನಾನೇ ವ್ಯವಸ್ಥೆ ಮಾಡಿದ್ದೇನೆ ಎಂದಿದ್ದಾರೆ. ಚಿತ್ರರಂಗಕ್ಕೆ ಸಂಬಂಧಪಟ್ಟ ವಿಷಯ ಮಾತನಾಡಿದ ಹಿನ್ನೆಲೆ ನಾನು ಪ್ರತಿಕ್ರಿಯೆ ನೀಡಿದ್ದೇನೆ.
ರಾಜಕೀಯ ಹೊರತಾಗಿ ನಾನು ಏನೂ ಮಾತಾಡಿಲ್ಲ. ಕುಮಾರಸ್ವಾಮಿಯವರಿಗೆ ಯಾರ್ಯಾರೋ ಬೈದಿದ್ದಾರೆ. ಅವರ ಮನೆ ಮುಂದೆ ಪ್ರತಿಭಟನೆ ಮಾಡೋದು ಬಿಟ್ಟು, ನನ್ನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಅಂಬಿ ಅಭಿಮಾನಿಗಳು ಕೂಡ ಪ್ರತಿಭಟನೆಗೆ ಮುಂದಾಗಿದ್ರು. ಆದ್ರೆ, ನಾನು ಬೇಡ ಎಂದಿದ್ದೆ. ನಾವು ಅಂಬಿ ಮಾರ್ಗದಲ್ಲಿ ನಡೆಯುತ್ತೇವೆ. ನಾನು ಮನಸ್ಸು ಮಾಡಿದ್ರೆ ಎಂಪಿ, ಎಂಎಲ್ಎ ಆಗ್ತಾಯಿದ್ದೆ. ಆದ್ರೆ, ನನಗೆ ರಾಜಕೀಯ ಬೇಡ. ನಾನು ಕುಮಾರಸ್ವಾಮಿಗೆ ನೋವಾಗಿರುವ ಹಾಗೆ ಮಾತನಾಡಿದ್ರೆ ಕ್ಷಮೆ ಕೇಳುತ್ತೇನೆ. ಆದ್ರೆ, ನಾನು ಎಲ್ಲೂ ಹಾಗೆ ಮಾತನಾಡಿಲ್ಲ.
ಬೀದಿಯಲ್ಲಿ ಹೋಗೋ ದಾಸಯ್ಯ ಕೂಡ ಈ ಕೆಲಸ ಮಾಡ್ತಿದ್ರು. ಯಾರೇ ಸಿಎಂ ಆಗಿದ್ರು ಕೂಡ ಅಂಬಿ ಸಂಸ್ಕಾರದ ಕೆಲಸ ಮಾಡುತ್ತಿದ್ದರು. ಅಂಬರೀಶ್ ಬಗ್ಗೆ ಯಾರೇ ಮಾತನಾಡಿದ್ರೂ ನೋವಾಗತ್ತೆ. ಸುಮಲತಾರನ್ನ ಮುಗ್ಧರು ಅಂದುಕೊಂಡಿದ್ರೆ ತಪ್ಪು. ಅವರು ಎಜುಕೇಡೆಟ್, 27 ವರ್ಷ ಅಂಬಿ ಜೊತೆ ಸಂಸಾರ ಮಾಡಿರುವುದೇ ಒಳ್ಳೆ ಶಿಕ್ಷಣ. ಅವರು ಏನಾದರೂ ಸಹಾಯ ಕೇಳಿದ್ರೆ, ನಾವು ಹೋಗಿ ಅವರ ಕೆಲಸ ಮಾಡಿ ಕೊಡುತ್ತೇನೆ. ಸಾವಿನ ವಿಷಯ ಮಾತಾನಾಡಿದಾಗ ಎಲ್ಲರಿಗೂ ನೋವಾಗತ್ತೆ. ಸುಮಲತಾ ಕೂಡ ನೊಂದಿದ್ದಾರೆ. ಆದರೆ, ಅವರು ಮೀಡಿಯಾ ಮುಂದೆ ನೋವು ತೋರಿಸಿಕೊಂಡಿಲ್ಲ ಎಂದರು.