ETV Bharat / city

ಹಾಡಹಗಲೇ ಗನ್‌ ತೋರಿಸಿ ದರೋಡೆಗೆ ಯತ್ನಿಸಿದರು.. ತಪ್ಪಿಸಿಕೊಳ್ಳುವಾಗ ಓರ್ವ ಸ್ಥಳೀಯರಿಗೆ ತಗ್ಲಾಕೊಂಡ..

ಕಳ್ಳರು ಸಿಕ್ಕಿ ಬೀಳುವ ಆತಂಕದಿಂದ ಕೈಯಲ್ಲಿದ್ದ ಚಿನ್ನಾಭರಣ ಬಿಟ್ಟು ಎಸ್ಕೇಪ್‌ ಆಗಿದ್ದು, ಈ ಪೈಕಿ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಆತನನ್ನು ಥಳಿಸಿ‌‌ ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ..

author img

By

Published : Mar 15, 2022, 7:32 PM IST

robbery-case-in-bengaluru-accused-arrested
ಹಾಡಹಗಲೇ ಗನ್‌ ತೋರಿಸಿ ದರೋಡೆಗೆ ಯತ್ನ: ಎಸ್ಕೇಪ್ ಆಗುವಷ್ಟರಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಆರೋಪಿ

ಬೆಂಗಳೂರು : ಹಾಡಹಗಲೇ ಗನ್‌ ತೋರಿಸಿ ದರೋಡೆಗೆ ಯತ್ನಿಸಿರುವ ಘಟನೆ ರಾಜಧಾನಿಯಲ್ಲಿ ವರದಿಯಾಗಿದೆ. ದರೋಡೆಗೆ ಬಂದ ಮೂವರ ಪೈಕಿ‌‌ ಓರ್ವನನ್ನು ಸ್ಥಳೀಯರು ಹಿಡಿದು ಯಶವಂತಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯಶವಂತಪುರದ ಬಾಂಬೆ ಡೈಯಿಂಗ್ ರಸ್ತೆಯ ಇಂಡಿಯನ್‌ ಪೆಟ್ರೋಲ್ ಬಂಕ್ ಬಳಿ ಇರುವ ಮನೆಯೊಂದಕ್ಕೆ ಏಕಾಏಕಿ ಮೂವರು ಅಪರಿಚಿತ ಕಳ್ಳರು ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಇಬ್ಬರು ವೃದ್ದೆಯರು ಹಾಗೂ ಓರ್ವ ಯುವತಿಯನ್ನು ಗನ್ ತೋರಿಸಿ ಬೆದರಿಸಿದ್ದಾರೆ.

ಬಳಿಕ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದು ಪರಾರಿಯಾಗುವಾಗ ಮನೆಯವರು ಕಿರುಚಾಡಿದ್ದಾರೆ‌. ಮನೆಯವರ ಕೂಗಾಟ ಕೇಳಿ ನೆರಹೊರೆ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ.‌

ಹಾಡಹಗಲೇ ಗನ್‌ ತೋರಿಸಿ ದರೋಡೆಗೆ ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಥಳಿಸಿದ ಸ್ಥಳೀಯರು..

ಕಳ್ಳರು ಸಿಕ್ಕಿ ಬೀಳುವ ಆತಂಕದಿಂದ ಕೈಯಲ್ಲಿದ್ದ ಚಿನ್ನಾಭರಣ ಬಿಟ್ಟು ಎಸ್ಕೇಪ್‌ ಆಗಿದ್ದು, ಈ ಪೈಕಿ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಆತನನ್ನು ಥಳಿಸಿ‌‌ ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಓದಿ : ದೇಶದಲ್ಲಿ 5.3 ಲಕ್ಷಕ್ಕೂ ಅಧಿಕ ಪೊಲೀಸ್​ ಹುದ್ದೆಗಳು ಖಾಲಿ: ಅತಿ ಹೆಚ್ಚು ಖಾಲಿ ಇರೋದು ಎಲ್ಲಿ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.