ಬೆಂಗಳೂರು: ಕೇವಲ ಸಚಿವರ ಮನೆ ರಸ್ತೆಗಳು ಗುಂಡಿ ಮುಕ್ತವಾದರೆ ಸಾಲದು, ಬಡವರ ಮನೆ ಬಳಿಯ ರಸ್ತೆಗಳು ಸರಿಯಾಗಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಗುಣಮಟ್ಟದ ಕಾಮಗಾರಿ ನಡೆಸಲು ಹೈಕೋರ್ಟ್ ತಾಕೀತು ಮಾಡಿದ್ದು, ಮುಚ್ಚಿದ ಗುಂಡಿಗಳು 2- 3 ತಿಂಗಳಲ್ಲಿ ಮತ್ತೆ ಗುಂಡಿ ಬೀಳುತ್ತಿವೆ. ಪದೇಪದೆ ಗುಂಡಿಯಾಗದಂತೆ ಕಾಮಗಾರಿ ನಡೆಸಿ ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ತಾಕೀತು ಮಾಡಿದೆ.
ಸೆಪ್ಟೆಂಬರ್ 6 ರಂದು ಬೆಂಗಳೂರಲ್ಲಿ 1138 ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ನಂತರ ಸೆಪ್ಟೆಂಬರ್ 21 ರಂದು ಎಲ್ಲಾ ಗುಂಡಿಗಳನ್ನು ಮುಚ್ಚಿದ್ದು, 194 ರಸ್ತೆ ಗುಂಡಿಗಳು ಮಾತ್ರ ಬಾಕಿ ಇವೆ ಎಂದು ಲೆಕ್ಕ ನೀಡಿದ್ದಾರೆ.
(ರಸ್ತೆ ಗುಂಡಿ ಮುಚ್ಚುವಲ್ಲಿ ಲೋಪ: ಸರಿಪಡಿಸಿಕೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ)