ETV Bharat / city

ಏರ್​​ಪೋರ್ಟ್ ಸಂಪರ್ಕಿಸುವ ಹೈವೇಯಲ್ಲಿ ಹೆಚ್ಚಾಗ್ತಿವೆ ಅಪಘಾತ : ಒಂದೇ ತಿಂಗಳಲ್ಲಿ 15 ಮಂದಿ ಸಾವು, 64 ಜನರಿಗೆ ಗಾಯ - ಕೆಂಪೇಗೌಡ ವಿಮಾನ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ

ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ವರ್ಷ ಜನವರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 15 ಜನರು ಮೃತಪಟ್ಟರೆ, 64 ಜನರು ಗಾಯಗೊಂಡಿದ್ದಾರೆ..

road accidents at Bengaluru airport highway
ಏರ್​​ಪೋರ್ಟ್ ಸಂಪರ್ಕಿಸುವ ಹೈವೆಯಲ್ಲಿ ಹೆಚ್ಚಾಗ್ತಿದೆ ಅಪಘಾತ
author img

By

Published : Feb 12, 2022, 5:51 PM IST

ಬೆಂಗಳೂರು : ನಗರದಿಂದ ಬೆಂಗಳೂರು ಏರ್​​ಪೋರ್ಟ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯು ಇತ್ತೀಚಿನ ದಿನಗಳಲ್ಲಿ ಅಪಘಾತದ‌ ಕೂಪವಾಗಿ ಪರಿಣಮಿಸುತ್ತಿದೆ. ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆಯಲ್ಲಿ ಮಿತಿ ಮೀರಿದ ವೇಗದ ಚಾಲನೆಯಿಂದ ದಿನೇದಿನೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೆಬ್ಬಾಳದಿಂದ ಯಲಹಂಕ, ಕೊಗೀಲು, ಚಿಕ್ಕಜಾಲಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದ್ದು, ಈ ಹೈವೇಯಲ್ಲಿ ಕಳೆದ ಜನವರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 15 ಜನರು ಮೃತಪಟ್ಟರೆ 64 ಜನರು ಗಾಯಗೊಂಡಿದ್ದಾರೆ.

ಅದೇ ರೀತಿ 2021ರಲ್ಲಿ 210 ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳಲ್ಲಿ 305 ಮಂದಿ ಗಾಯಗೊಂಡರೆ, ಹೆಬ್ಬಾಳ ಮತ್ತು ಕೆಐಎ ನಡುವೆ ಸಂಭವಿಸಿದ 54 ಅಪಘಾತಗಳಲ್ಲಿ 59 ಜನರು ಸಾವನ್ನಪ್ಪಿದ್ದಾರೆ.

2020ರಲ್ಲಿ 55 ಅಪಘಾತಗಳಲ್ಲಿ 62 ಜನರು ಸಾವನ್ನಪ್ಪಿದ್ದಾರೆ. 181 ಮಾರಣಾಂತಿಕವಲ್ಲದ ಅಪಘಾತಗಳಲ್ಲಿ 226 ಮಂದಿ ಗಾಯಗೊಂಡಿದ್ದಾರೆ. 2019 ರಲ್ಲಿ 77 ಮತ್ತು 2018 ರಲ್ಲಿ 84 ಜನರನ್ನು ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ‌.

ಹೈವೇಯಲ್ಲಿ ಹೆಚ್ಚಾಗುತ್ತಿರುವ ರಸ್ತೆ ಅಪಘಾತ ಪ್ರಕರಣ ತಗ್ಗಿಸಲು ಹಾಗೂ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ನಗರ ಸಂಚಾರ ವಿಭಾಗದ ಟ್ರಾಫಿಕ್‌ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡ ಅವರು ರಾಷ್ಟ್ರೀಯ ಹೆದ್ದಾರಿ‌ ಪ್ರಾಧಿಕಾರ (ಎನ್ಎಚ್ಎ) ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಹೈವೇಯಲ್ಲಿ ಅಪಘಾತ ಕಡಿಮೆ ಮಾಡುವ ದೃಷ್ಟಿಯಿಂದ ಸೂಕ್ತ ಜಾಗದಲ್ಲಿ ಆಟೋಮ್ಯಾಟಿಕ್ ನಂಬರ್‌ ಪ್ಲೇಟ್ ರೆಕಗ್ನೈಜ್​, ಸಿಸಿಟಿವಿ ಕ್ಯಾಮೆರಾ (ಎಎನ್​ಪಿಆರ್) ಅಳವಡಿಕೆಯ ಸಲಹೆಗೆ ಎನ್‌ಹೆಚ್ಐ ಅಧಿಕಾರಿಗಳು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಕ್ಯಾಮೆರಾ ಅಳವಡಿಕೆಯಾಗಲಿದೆ‌ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈವೇಯಲ್ಲಿ ಅಪಘಾತ ಹೆಚ್ಚಳ ಯಾಕೆ?

ನಗರದ ಪ್ರದೇಶಗಳಿಗೆ ಹೋಲಿಸಿಕೊಂಡರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದೆ.‌ ವೇಗದ ಚಾಲನೆ, ಚಾಲಕರ ನಿರ್ಲಕ್ಷ್ಯತನ, ಸಂಚಾರಿ ನಿಯಮ ಪಾಲನೆ ಮಾಡದಿರುವುದೇ‌ ಆ್ಯಕ್ಸಿಡೆಂಟ್​​ಗೆ ಪ್ರಮುಖ ಕಾರಣವಾಗಿದೆ. ಬೆಂಗಳೂರು ಏರ್​​ಪೋರ್ಟ್ ನ್ಯಾಷನಲ್‌ ಹೈವೇಯಲ್ಲಿ ಗರಿಷ್ಠ ಮಿತಿ 80 ಇದ್ದು ಬಹುತೇಕ ಚಾಲಕರು 80ಕ್ಕಿಂತ ಹೆಚ್ಚು ಸ್ಪೀಡ್‌ನಲ್ಲಿ ತೆರಳಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿದ್ದಾರೆ. ಇಂಟರ್ಸೆಪ್ಟರ್ ವಾಹನದ ಕಾರ್ಯಾಚರಣೆ ತ್ವರಿತಗತಿಯಲ್ಲಿ ಮಾಡಬೇಕಾಗಿದೆ.

ಎಎನ್‌ಪಿರ್ ಕ್ಯಾಮೆರಾ ಅಳವಡಿಕೆಯ ಪ್ರಯೋಜನವೇನು?

ಆ್ಯಕ್ಸಿಡೆಂಟ್‌ ಬ್ಲಾಕ್ ಸ್ಪಾಟ್​​ಗಳಲ್ಲಿ ಎಎನ್​ಪಿಆರ್ ಕ್ಯಾಮೆರಾ ಅಳವಡಿಕೆಯಿಂದ‌ ನಿಗದಿಗಿಂತ ವೇಗವಾಗಿ ಹೋಗುವ ವಾಹನಗಳ ನಂಬರ್ ಅನ್ನು ಸ್ವಯಂಪ್ರೇರಿತವಾಗಿ ಸೆರೆ ಹಿಡಿಯಲಿದೆ. ಈ‌ ಮಾಹಿತಿ‌ ಆಧರಿಸಿ ವಾಹನದ ಚಾಲಕನಿಗೆ ಸಂಚಾರ‌ ಪೊಲೀಸರು ನೋಟಿಸ್​ ನೀಡಿ ಎಚ್ಚರಿಸಬಹುದಾಗಿದೆ‌.

ಇದನ್ನೂ ಓದಿ: ಹಾವೇರಿಯಲ್ಲಿ ಸೇತುವೆ ಮೇಲಿಂದ ಕೆಳಗೆ ಬಿದ್ದ ವಿಆರ್​ಎಲ್​ ಬಸ್​...ಇಬ್ಬರ ಸಾವು, 15 ಜನರಿಗೆ ಗಾಯ!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.