ಬೆಂಗಳೂರು: ಕೊರೊನಾ ತಡೆಗಟ್ಟಲು ಲಾಕ್ಡೌನ್ ಜಾರಿ ಮಾಡಲಾಗಿದೆ. ವಾಹನ ಸಂಚಾರ ಕಡಿಮೆ ಇದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ಸಾವಿನ ಪ್ರಮಾಣವೂ ಕೂಡಾ ಹೆಚ್ಚಾಗಿಯೇ ಇದೆ ಎಂಬ ಮಾಹಿತಿ ರಾಜ್ಯ ಪೊಲೀಸ್ ಇಲಾಖೆಯ ವರದಿಯಲ್ಲಿ ಬಹಿರಂಗವಾಗಿದೆ. ರಾಜ್ಯದ ವಿವಿಧೆಡೆ ನಡೆದ ಅಪಘಾತಗಳ ಮಾಹಿತಿ ಇಲ್ಲಿದೆ.
2020ರ ಮಾರ್ಚ್ನಲ್ಲಿ ನಡೆದ ಅಪಘಾತಗಳು
ಒಟ್ಟು ಅಪಘಾತಗಳು | ರಾಷ್ಟ್ರಿಯ ಹೆದ್ದಾರಿ | ರಾಜ್ಯ ಹೆದ್ದಾರಿ | ಇತರೆ ಅಡ್ಡರಸ್ತೆ |
ಅಪಘಾತ | 238 | 210 | 266 |
ಸಾಮಾನ್ಯ ಅಪಘಾತ | 669 | 571 | 1074 |
ಸಾವು | 281 | 241 | 290 |
ಗಾಯಗೊಂಡವರು | 1130 | 1070 | 1491 |
ಒಟ್ಟು | 1411 | 1311 | 1781 |
ಮಾರ್ಚ್ 2019ರಲ್ಲಿ ಒಟ್ಟು 5288 ಪ್ರಕರಣ ದಾಖಲಾಗಿದ್ದು ಒಟ್ಟು 908 ಮಂದಿ ಪ್ರಾಣ ತೆತ್ತಿದ್ದಾರೆ. ಹಾಗೆಯೇ ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಇತರೆ ಅಡ್ಡ ರಸ್ತೆ ಮೂರು ಸೇರಿ 835 ಅಪಘಾತಗಳು, 2712 ಸಾಮಾನ್ಯ ಅಪಘಾತಗಳ ನಡೆದಿದ್ದು, 4379 ಮಂದಿ ಗಾಯಗೊಂಡಿದ್ದಾರೆ.
2020ರ ಏಪ್ರಿಲ್ನಲ್ಲಿ ನಡೆದ ಅಪಘಾತಗಳು:
ಒಟ್ಟು ಅಪಘಾತಗಳು | ರಾಷ್ಟ್ರಿಯ ಹೆದ್ದಾರಿ | ರಾಜ್ಯ ಹೆದ್ದಾರಿ | ಇತರೆ ಅಡ್ಡರಸ್ತೆ |
ಅಪಘಾತ | 49 | 56 | 94 |
ಸಾಮಾನ್ಯ ಅಪಘಾತ | 142 | 138 | 387 |
ಸಾವು | 48 | 67 | 211 |
ಗಾಯಗೊಂಡವರು | 217 | 254 | 885 |
ಒಟ್ಟು | 265 | 321 | 510 |
ಏಪ್ರಿಲ್ 2019ರಲ್ಲಿ ಒಟ್ಟು 5592 ಅಪಘಾತ ಪ್ರಕರಣಗಳು ದಾಖಲಾಗಿದ್ದವು. 887 ಮಂದಿ ಸಾವನ್ನಪ್ಪಿದ್ದರು. ರಾಷ್ಟ್ರೀಯ, ರಾಜ್ಯ, ಇತರೆ ಅಡ್ಡರಸ್ತೆಗಳ ಬಳಿ ನಡೆದ ಅಪಘಾತದಲ್ಲಿ 827ಗಳು ನಡೆದಿವೆ.
ಮೇ 2020ರಲ್ಲಿ ನಡೆದ ಅಪಘಾತಗಳು
ಒಟ್ಟು ಅಪಘಾತಗಳು | ರಾಷ್ಟ್ರಿಯ ಹೆದ್ದಾರಿ | ರಾಜ್ಯ ಹೆದ್ದಾರಿ | ಇತರೆ ಅಡ್ಡರಸ್ತೆ |
ಅಪಘಾತ | 161 | 162 | 249 |
ಸಾಮಾನ್ಯ ಅಪಘಾತ | 494 | 428 | 772 |
ಸಾವು | 171 | 172 | 253 |
ಗಾಯಗೊಂಡವರು | 741 | 738 | 1137 |
ಒಟ್ಟು | 912 | 910 | 1390 |
ಮೇ 2019ರಲ್ಲಿ ಒಟ್ಟು 5826 ಪ್ರಕರಣಗಳು ದಾಖಲಾಗಿದ್ದು, ಒಟ್ಟು 917 ಮಂದಿ ಪ್ರಾಣ ತೆತ್ತಿದ್ದಾರೆ. ಹಾಗೆ ರಾಷ್ಟ್ರೀಯ ,ರಾಜ್ಯ ಹೆದ್ದಾರಿಗಳಲ್ಲಿ 840 ಅಪಘಾತಗಳು ಸಂಭವಿಸಿವೆ.
ಬೆಂಗಳೂರು ಮಾತ್ರ ನೋಡುವುದಾದರೆ ಜನವರಿಯಿಂದ ಜೂನ್ವರೆಗೆ 291 ರಸ್ತೆ ಅಪಘಾತಗಳು ನಡೆದಿದ್ದು, 1415 ಮಂದಿ ಗಾಯಗೊಂಡಿದ್ದಾರೆ. ಜೊತೆಗೆ 309 ಮಂದಿ ಸಾವನ್ನಪ್ಪಿದ್ದಾರೆ.
2019ಕ್ಕೆ ಹೋಲಿಸಿದರೆ 2020ರಲ್ಲಿ ಪ್ರಕರಣ ಕಡಿಮೆ ಇದ್ದರೂ ಕೂಡ ಲಾಕ್ಡೌನ್ ವೇಳೆ ಅಪಘಾತ ಸಂಭವಿಸಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.