ಬೆಂಗಳೂರು: ಮಾಸ್ಕ್ ಧರಿಸದಿವುರುದಕ್ಕೆ ವಿಧಿಸಲಾಗುತ್ತಿರುವ ದಂಡ ಕುರಿತಂತೆ ಸಾರ್ವಜನಿಕರ ಅಸಮಾಧಾನ ಮುಂದುವರೆದಿದ್ದು, ಇಂದು ಮಾಸ್ಕ್ ಧರಿಸದ ಬೈಕ್ ಸವಾರನೊಬ್ಬ ಮಾರ್ಷಲ್ಸ್ ಜೊತೆ ಅರ್ಧಗಂಟೆಗೂ ಹೆಚ್ಚುಕಾಲ ವಾಗ್ವಾದಕ್ಕಿಳಿದಿದ್ದರು.
ಸ್ಥಳಕ್ಕೆ ಮಾರ್ಷಲ್ ಸೂಪರ್ ವೈಸರ್ ಹಾಗೂ ಪೊಲೀಸರು ಬಂದರೂ ಸುಮ್ಮನಾಗದ ಸವಾರ, ನಾನು ಯಾವುದೇ ಕಾರಣಕ್ಕೂ ದಂಡ ಕಟ್ಟುವುದಿಲ್ಲ. ಸರ್ಕಾರಕ್ಕೆ ದುಡ್ಡಿಲ್ಲ, ಅದಕ್ಕೆ ನಮ್ಮ ಹತ್ತಿರ ದಂಡ ವಸೂಲಿಗಿಳಿದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾರ್ಷಲ್ಸ್ ಹಾಗೂ ಪೊಲೀಸರು- ನಮಗೆ ಹೇಳಿದ ಕೆಲಸ ಮಾಡಲು ಬಂದಿದ್ದೇವೆ. ದಂಡ ಕೊಡಿ ಎಂದು ಕೇಳಿದರೂ ಯಾವುದೇ ಕಾರಣಕ್ಕೂ ದಂಡ ಕಟ್ಟೋದಿಲ್ಲ. ಸಂವಿಧಾನ ಗೊತ್ತಾ ನಿಮಗೆ, ವೈರಸ್ ಬಗ್ಗೆ ಗೊತ್ತಾ ನಿಮಗೆ, ನಾನು ಐಎಎಸ್ ಓದಿದ್ದೇನೆ ಎಂದು ವಾಗ್ವಾದಕ್ಕಿಳಿದಿದ್ದರು.
ಈ ವೀಡಿಯೋವನ್ನು ಮಾರ್ಷಲ್ಸ್ ರೆಕಾರ್ಡ್ ಮಾಡಿ ಬಿಬಿಎಂಪಿಗೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಸಾವಿರದಿಂದ 250ಕ್ಕೆ ದಂಡದ ಪ್ರಮಾಣ ಇಳಿಸಿದ್ರೂ ಮಾಸ್ಕ್ ಹಾಕೋದಿಲ್ಲ. ದಂಡವನ್ನು ಕಟ್ಟೋದಿಲ್ಲ ಎಂದು ಸಾರ್ವಜನಿಕರು ವಾದಕ್ಕಿಳಿಯುತ್ತಿದ್ದಾರೆ.