ಯಲಹಂಕ: ಲಾಕ್ಡೌನ್ ನಡುವೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಾರ್ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ಕಾಕೋಳು ಗ್ರಾಮದ ಬಳಿಯಿರುವ ರಚನಾ ಬಾರ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ರಾಜಾನುಕುಂಟೆ ಪೊಲೀಸರು, ದಾಳಿ ನಡೆಸಿ ಬಾರ್ ಮಾಲೀಕ, ಕ್ಯಾಷಿಯರ್, ಸೆಕ್ಯೂರಿಟಿ ಗಾರ್ಡ್ನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಎಂಆರ್ಪಿ ದರಕ್ಕಿಂತ 10 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಆಸಾಮಿಗಳು, ಲಾಕ್ಡೌನ್ ಅವಕಾಶ ಬಳಸಿಕೊಂಡು ಹಣ ದೋಚುತ್ತಿದ್ದರು. ದಾಳಿ ವೇಳೆ 108 ಬಾಟಲ್ ಬಿಯರ್, 12 ಬಾಟಲ್ ವೈನ್, 88 ಟೆಟ್ರಾ ಪಾಕೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.