ನವದೆಹಲಿ: 73ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಇಂಡಿಯಾ ಗೇಟ್ನಿಂದ ರಾಜಪಥವರೆಗೆ ನಡೆದ ಪರೇಡ್ನಲ್ಲಿ ಭಾಗಿಯಾಗಿದ್ದ ಸ್ತಬ್ಧಚಿತ್ರಗಳ ಪೈಕಿ ಕರ್ನಾಟಕದ ಟ್ಯಾಬ್ಲೋಗೆ ಎರಡನೇ ಸ್ಥಾನ ಸಿಕ್ಕಿದೆ. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ತಜ್ಞರ ಸಮಿತಿ ಈ ಘೋಷಣೆ ಹೊರಹಾಕಿದೆ.
ಈ ಸಲದ ಪರೇಡ್ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸ್ತಬ್ಧಚಿತ್ರ ಸೇರಿದಂತೆ 12 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರ ಭಾಗಿಯಾಗಿದ್ದವು. ಇವುಗಳ ಪೈಕಿ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಕಾರಿಡಾರ್ ಕುರಿತು ನಿರ್ಮಾಣಗೊಂಡಿದ್ದ ಸ್ತಬ್ಧಚಿತ್ರಕ್ಕೆ ಮೊದಲ ಸ್ಥಾನ ಸಿಕ್ಕಿದ್ದು, ಮೇಘಾಲಯದ ಮಹಿಳೆಯರ ಸಹಕಾರ ಸಂಘ ಹಾಗೂ ರಾಜ್ಯದ ಸುವರ್ಣ ಮಹೋತ್ಸವ ಸಂಭ್ರಮ ಬಿಂಬಿಸುವ ಸ್ತಬ್ಧಚಿತ್ರಕ್ಕೆ ಮೂರನೇ ಸ್ಥಾನ ಸಿಕ್ಕಿದೆ.
ಕರ್ನಾಟಕದಿಂದ ಕರಕುಶಲ ಕಲೆಯ ವೈಭವ ಸಾರುವ ಸ್ತಬ್ಧಚಿತ್ರ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಎರಡನೇ ಸ್ಥಾನ ಸಿಕ್ಕಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಂದೇ ಭಾರತಮ್ ನೃತ್ಯ ತಂಡಕ್ಕೆ ಬಹುಮಾನ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಕೆಲ ನೃತ್ಯಗಾರರು ಭಾಗಿಯಾಗಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ: ಗಣರಾಜ್ಯೋತ್ಸವ ಪರೇಡ್ 2022ರಲ್ಲಿ 'ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು' ಎಂಬ ಕರ್ನಾಟಕದ ಟ್ಯಾಬ್ಲೋ 2ನೇ ಸ್ಥಾನವನ್ನು ಗೆದ್ದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
-
Proud that Karnataka's tableau at the #RepublicDayParade2022 as the 'Cradle of Traditional Handicrafts' has won the 2nd place.
— Basavaraj S Bommai (@BSBommai) February 4, 2022 " class="align-text-top noRightClick twitterSection" data="
May this presentation incite us all to be #VocalForLocal & bring greater attention to our crafts and their craftsmen and help build #AatmaNirbharBharat. pic.twitter.com/yVtgXVGv5D
">Proud that Karnataka's tableau at the #RepublicDayParade2022 as the 'Cradle of Traditional Handicrafts' has won the 2nd place.
— Basavaraj S Bommai (@BSBommai) February 4, 2022
May this presentation incite us all to be #VocalForLocal & bring greater attention to our crafts and their craftsmen and help build #AatmaNirbharBharat. pic.twitter.com/yVtgXVGv5DProud that Karnataka's tableau at the #RepublicDayParade2022 as the 'Cradle of Traditional Handicrafts' has won the 2nd place.
— Basavaraj S Bommai (@BSBommai) February 4, 2022
May this presentation incite us all to be #VocalForLocal & bring greater attention to our crafts and their craftsmen and help build #AatmaNirbharBharat. pic.twitter.com/yVtgXVGv5D
ಈ ಪ್ರಸ್ತುತಿಯು ನಮ್ಮೆಲ್ಲರನ್ನು ಸ್ಥಳೀಯ ಆದ್ಯತೆ ಆಗಲು ಪ್ರೇರೇಪಿಸಲಿ ಮತ್ತು ನಮ್ಮ ಕರಕುಶಲ ಮತ್ತು ಅವರ ಕುಶಲಕರ್ಮಿಗಳಿಗೆ ಹೆಚ್ಚಿನ ಗಮನವನ್ನು ತರಲಿ ಮತ್ತು ಆತ್ಮ ನಿರ್ಭರ ಭಾರತವನ್ನು ನಿರ್ಮಿಸಲು ಸಹಾಯ ಮಾಡಲಿದೆ ಎಂದಿದ್ದಾರೆ.
-
73 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ದೇಶದ ಗಮನ ಸೆಳೆದ "ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು" ವಿಷಯದ ಸ್ತಬ್ಧಚಿತ್ರ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ.
— Sadananda Gowda (@DVSadanandGowda) February 4, 2022 " class="align-text-top noRightClick twitterSection" data="
ಕರಕುಶಲ ಕರ್ಮಿಗಳ ಅಭ್ಯುದಯಕ್ಕೆ ನಾವೆಲ್ಲರೂ ಶ್ರಮಿಸೋಣ, ಸ್ತಬ್ಧಚಿತ್ರಕ್ಕಾಗಿ ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು. #RepublicDay #Karnataka pic.twitter.com/lgKGUXGi2A
">73 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ದೇಶದ ಗಮನ ಸೆಳೆದ "ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು" ವಿಷಯದ ಸ್ತಬ್ಧಚಿತ್ರ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ.
— Sadananda Gowda (@DVSadanandGowda) February 4, 2022
ಕರಕುಶಲ ಕರ್ಮಿಗಳ ಅಭ್ಯುದಯಕ್ಕೆ ನಾವೆಲ್ಲರೂ ಶ್ರಮಿಸೋಣ, ಸ್ತಬ್ಧಚಿತ್ರಕ್ಕಾಗಿ ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು. #RepublicDay #Karnataka pic.twitter.com/lgKGUXGi2A73 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ದೇಶದ ಗಮನ ಸೆಳೆದ "ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು" ವಿಷಯದ ಸ್ತಬ್ಧಚಿತ್ರ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ.
— Sadananda Gowda (@DVSadanandGowda) February 4, 2022
ಕರಕುಶಲ ಕರ್ಮಿಗಳ ಅಭ್ಯುದಯಕ್ಕೆ ನಾವೆಲ್ಲರೂ ಶ್ರಮಿಸೋಣ, ಸ್ತಬ್ಧಚಿತ್ರಕ್ಕಾಗಿ ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು. #RepublicDay #Karnataka pic.twitter.com/lgKGUXGi2A
ಟ್ವೀಟ್ ಮಾಡಿದ ಸಂದಾನಂದಗೌಡ ಇತರೆ ಮುಖಂಡರು: 73 ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ದೇಶದ ಗಮನ ಸೆಳೆದ "ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು" ವಿಷಯದ ಸ್ತಬ್ಧಚಿತ್ರ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ.ಕರಕುಶಲ ಕರ್ಮಿಗಳ ಅಭ್ಯುದಯಕ್ಕೆ ನಾವೆಲ್ಲರೂ ಶ್ರಮಿಸೋಣ, ಸ್ತಬ್ಧಚಿತ್ರಕ್ಕಾಗಿ ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು ಎಂದು ಮಾಜಿ ಸಚಿವ ಸಂದಾನಂದಗೌಡ ಟ್ವೀಟ್ ಮಾಡಿದ್ದಾರೆ.