ETV Bharat / city

ನನ್ನ ಮೇಲೆ ಕೆ.ಜೆ.ಜಾರ್ಜ್​ ಹಲ್ಲೆ: ಹೈಕೋರ್ಟ್​ಗೆ ರಿಟ್​ ಸಲ್ಲಿಸಿದ ಸುಧಾಕರ್​​ - ಹೈಕೋರ್ಟ್‌ಗೆ ರಿಟ್ ಅರ್ಜಿ

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ಹೋದಾಗ ನನ್ನ ಮೇಲೆ ಮಾಜಿ ಸಚಿವ ಜಾರ್ಜ್ ಸೇರಿದಂತೆ ಕಾಂಗ್ರೆಸ್ ಕೆಲ ನಾಯಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅನರ್ಹ ಶಾಸಕ ಸುಧಾಕರ್​ ಅವರು ಹಿರಿಯ ವಕೀಲ ಅಮೃತೇಶ್ ಅವರಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

Disqualify MLA Sudhakar
author img

By

Published : Aug 6, 2019, 6:05 PM IST

ಬೆಂಗಳೂರು: ಅನರ್ಹ ಶಾಸಕ ಡಾ.ಕೆ.‌‌ಸುಧಾಕರ್‌ ಅವರ ಪರ ಹೈಕೋರ್ಟ್‌ಗೆ ಹಿರಿಯ ವಕೀಲ ಅಮೃತೇಶ್ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ಹೋದಾಗ ಸುಧಾಕರ್ ಮೇಲೆ ಮಾಜಿ ಸಚಿವ ಜಾರ್ಜ್ ಹಾಗೂ ಕಾಂಗ್ರೆಸ್ ಕೆಲ ನಾಯಕರು ಹಲ್ಲೆ ನಡೆಸಿದ್ದಾರೆ. ಅಂದು ಸುಧಾಕರ್ ಅವರನ್ನ ಒತ್ತಾಯ ಪೂರ್ವಕವಾಗಿ ಜಾರ್ಜ್ ಕೊಠಡಿಯಲ್ಲಿ ಕಾಂಗ್ರೆಸ್ ನಾಯಕರು ಬಂಧನ ಮಾಡಿದ್ರು. ಈ ವೇಳೆ ಕೂಡ ಹಲ್ಲೆಯಾಗಿದೆ.

ಅಂದಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ ವಿಧಾನಸೌಧ ಪುಲ್ ಖಾಕಿ ಕಣ್ಗಾವಲು ಇಡಲಾಗಿತ್ತು. ಹಲ್ಲೆಯಾದ ಸಂದರ್ಭದಲ್ಲಿ ಪೊಲೀಸರು ಸುಧಾಕರ್ ಸುತ್ತಲೂ ನೆರೆದಿದ್ದರು. ನಂತರ ಘಟನೆ ಬಗ್ಗೆ ವಿಧಾನಸೌಧ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ ಪೊಲೀಸರು ದೂರು ದಾಖಲಿಸಿಕೊಳ್ಳಲೇ ಇಲ್ಲ. ಹೀಗಾಗಿ ಪೊಲೀಸರು ಕಾನೂನು ಚೌಕಟ್ಟನ್ನು ಮೀರಿ ಅನ್ಯಾಯ ಮಾಡಿದ್ದಾರೆ.

ಹೀಗಾಗಿ ಕೂಡಲೇ ವಿಧಾನಸೌಧ ಪೊಲೀಸರು ಎಫ್​​ಐಆರ್ ದಾಖಲಿಸುವಂತೆ ನೋಟಿಸ್ ನೀಡಿ ಎಂದು ಅರ್ಜಿಯಲ್ಲಿ ಕೋರಿಕೆ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.

Intro:ಮಾಜಿ ಸಚಿವ ಜಾರ್ಜ್ ಅವ್ರಿಂದ ತಮ್ಮ ಮೇಲೆ ಹಲ್ಲೆ.
ಡಾ ಸುಧಾಕರ್ ರಿಂದ ಹೈಕೋರ್ಟ್ಗೆ ರಿಟ್..

ಅನರ್ಹ ಶಾಸಕ ಡಾ. ಕೆ.‌‌ ಸುಧಾಕರ್‌ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇದ್ದ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಲು ಸ್ಪೀಕರ್ ಕಚೇರಿಗೆ ತೆರಳಿದ್ದಾಗ ನನ್ನ ಮೇಲೆ ಮಾಜಿ ಸಚಿವ ಜಾರ್ಜ್ ಹಾಗೂ ಕಾಂಗ್ರೆಸ್ ಕೆಲ ನಾಯಕರು ಹಲ್ಲೆ ಮಾಡಿದ್ದಾರೆ..

ರಾಜ್ಯ ರಾಜಕೀಯ ಬೆಳವಣಿಗೆಗಳ ಸಂಧರ್ಭ ಹಿನ್ನೆಲೆ ವಿಧಾನ ಸೌಧ ಪುಲ್ ಖಾಕಿ ಕಣ್ಗಾವಲು ಇಡಲಾಗಿತ್ತು. ಹಲ್ಲೆಯಾದ ಸಂದರ್ಭದಲ್ಲಿ ಪೊಲೀಸರು ತನ್ನ ಸುತ್ತಲೂ ನೆರೆದಿದ್ದರು ಅಲ್ಲದೇ, ತನ್ನನ್ನು ಒತ್ತಾಯ ಪೂರ್ವಕವಾಗಿ ಮಾಜಿ ಸಚಿವ ಜಾರ್ಜ್ ಕೊಠಡಿಯಲ್ಲಿ ಕಾಂಗ್ರೆಸ್ ನಾಯಕರು ಬಂಧನ ಮಾಡಿದ್ರು.ಈ ವೇಳೆ ಕೂಡ ತನ್ನ ಮೇಲೆ ಹಲ್ಲೆಯಾಗಿದೆ.

ನಂತ್ರ ಘಟನೆ ಬಗ್ಗೆ ವಿಧಾನಸೌಧ ಪೊಲೀಸರಿಗೆ ದೂರು ನೀಡಿದಾಗ
ಪೊಲೀಸರು ದಾಖಲು ಮಾಡದೇ ಪ್ರಥಮ ವರ್ತಮಾನ ವರದಿಯನ್ನೂ ಸಿದ್ದಪಡಿಸಿಲ್ಲ. ಹೀಗಾಗಿ ಪೊಲೀಸರು ಕಾನೂನು ಚೌಕಟ್ಟನ್ನು ಮೀರಿ ನನಗೆ ಅನ್ಯಾಯ ಮಾಡಿದ್ದಾರೆ . ಹೀಗಾಗಿ
ಕೂಡಲೇ ವಿಧಾನಸೌಧ ಪೊಲೀಸರಿಗೆ ನೋಟಿಸ್ ನೀಡಿ ಎಂದು ಅರ್ಜಿಯಲ್ಲಿ ಕೋರಿಕೆ ಮಾಡಿದ್ದಾರೆ .ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆBody:KN_BNG_04_SUDAKAR_7204498Conclusion:KN_BNG_04_SUDAKAR_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.