ETV Bharat / city

ರೆಡ್ ಸ್ಯಾಂಡಲ್ ಜಪ್ತಿ ಮಾಡಿದ ಆರು ತಿಂಗಳ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು!

ಅಕ್ಟೋಬರ್​ನಲ್ಲಿ ಜಪ್ತಿ ಮಾಡಿಕೊಂಡಿದ್ದ ಮರದ ತುಂಡುಗಳನ್ನು ನೋಡಿದ ಪೊಲೀಸರು ಅದನ್ನು ರಕ್ತ ಚಂದನ ಎಂದು ಖಾತರಿ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರು ತಿಂಗಳ ಬಳಿಕ ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

red sandal smuggling case registered after 6 months
ರೆಡ್ ಸ್ಯಾಂಡಲ್ ಜಪ್ತಿ ಮಾಡಿದ ಆರು ತಿಂಗಳ ಬಳಿಕ ಪ್ರಕರಣ ದಾಖಲು
author img

By

Published : Mar 23, 2022, 1:21 PM IST

ಬೆಂಗಳೂರು: ರಕ್ತ ಚಂದನ ಮಾರಾಟ ಆರೋಪ ಪ್ರಕರಣ ಸಂಬಂಧ ಆರು ತಿಂಗಳ ಬಳಿಕ ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಕಳೆದ ಅಕ್ಟೋಬರ್​ನಲ್ಲಿ ರಾಮಮೂರ್ತಿನಗರ ಠಾಣೆಯ ಎರಡು ಪೊಲೀಸ್ ವಿಶೇಷ ತಂಡಗಳು ಬೆಳ್ತಂಗಡಿಯಲ್ಲಿ ಗಾಂಜಾ ಮಾರಾಟ ಪ್ರಕರಣ ಸಂಬಂಧ ಕಾರ್ಯಾಚರಣೆ ಕೈಗೊಂಡಿತ್ತು. ಆ ವೇಳೆ‌, ಆರೋಪಿಗಳು ತಪ್ಪಿಸಿಕೊಂಡಿದ್ದರು. ಬಚ್ಚಿಟ್ಟಿದ್ದ ಅಲ್ಪ ಪ್ರಮಾಣದ ಗಾಂಜಾ ಹಾಗೂ 16 ರಕ್ತಚಂದನ ತುಂಡುಗಳನ್ನು ಅಂದು ಜಪ್ತಿ ಮಾಡಿಕೊಂಡಿದ್ದರು.

ಆದರೆ, ಈ ಬಗ್ಗೆ ಪೊಲೀಸರು ಕಳೆದ ಆರು ತಿಂಗಳಿನಿಂದ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ.‌ ಇತ್ತೀಚೆಗೆ ಠಾಣೆಯ ಸ್ಟೋರ್ ರೂಮ್ ಶುಚಿಗೊಳಿಸುವಾಗ ಮರದ ತುಂಡುಗಳು ನೋಡಿದ ಇನ್ಸ್​​​ಪೆಕ್ಟರ್​ ಆ ಮರದ ತುಂಡುಗಳನ್ನು ರಕ್ತ ಚಂದನ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿ ಆರು ತಿಂಗಳು ಬಳಿಕ‌ ರೆಡ್ ಸ್ಯಾಂಡಲ್‌ ದೊರೆತಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಓಪನ್: ಈ ವಾರದಲ್ಲೇ ಎಲ್ಲ ಕೆಲಸ ಮುಗಿಸಿಕೊಳ್ಳಿ

ಕೆಲ ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಮಮೂರ್ತಿನಗರ ಪೊಲೀಸರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ, 80 ಲಕ್ಷ ರೂ. ಮೌಲ್ಯದ ರಕ್ತಚಂದನ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆ ಇಲಾಖಾ ತನಿಖೆಗೆ‌ ಆಯುಕ್ತ ಕಮಲ್ ಪಂತ್ ಸೂಚಿಸಿದ್ದರು. ಇದೀಗ ಈ ವಿಚಾರವಾಗಿ ಎಫ್ಐಆರ್ ದಾಖಲು ಮಾಡಿರುವ ಪೊಲೀಸರು ನಾಪತ್ತೆಯಾಗಿರುವ ಸುದರ್ಶನ್ ಹಾಗೂ ಶರವಣ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.