ETV Bharat / city

ಕೋವಿಡ್ ಸಂದರ್ಭದಲ್ಲಿ ದಾಖಲೆ ಮಟ್ಟದ ಆಹಾರ ಉತ್ಪಾದನೆ: ಸಚಿವ ಬಿ.ಸಿ. ಪಾಟೀಲ

ಕೋವಿಡ್ ಸಂದರ್ಭದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದ್ದು ಈ ವರ್ಷ 136.41ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಬಿಸಿ ಪಾಟೀಲ್
ಬಿಸಿ ಪಾಟೀಲ್
author img

By

Published : Feb 18, 2021, 9:52 PM IST

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಹೆಚ್ಚು ಯುವಕರು ನಗರಗಳಿಂದ ಹಳ್ಳಿಗಳತ್ತ ಹೋಗಿ ಕೃಷಿಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದ್ದು ಈ ವರ್ಷ 136.41ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಉದ್ಯಮಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಕೃಷಿ ಸಚಿವರು, ಕೃಷಿಯಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳದಿದ್ದರೆ ಬದಲಾವಣೆ ಕಾಣಲು ಅಸಾಧ್ಯ. ಹೀಗಾಗಿ ಎಫ್​ಕೆಸಿಸಿಐನೊಂದಿಗೆ ಕೃಷಿ ಇಲಾಖೆ ಜೊತೆಗೂಡಿ ರೈತರಿಗೆ ತಾಂತ್ರಿಕ ವಿಷಯಗಳ ಕುರಿತು ಮಾಹಿತಿ ನೀಡುವ ಕೆಲಸ ಆಗಬೇಕಿದೆ ಎಂದರು.

ಎಫ್​ಕೆಸಿಸಿಐ ಸದಸ್ಯೆ ಪೂಜಾ ನಾರಾಯಣ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಆಹಾರ ಸಂಸ್ಕರಣೆ ಶೇ 3ರಷ್ಟಿದೆ. ಇದನ್ನು ಕನಿಷ್ಠ 10ಕ್ಕಾದರೂ ಏರಿಸಬೇಕು. ತಂತ್ರಜ್ಞಾನಗಳ ತಿಳುವಳಿಕೆ ಕೊರತೆಯಿಂದ ಹಿಂದೆ ಬಿದ್ದಿದ್ದೇವೆ. ಇದಕ್ಕೆ ಸರ್ಕಾರ ಮತ್ತು ಆಡಳಿತ ಅಧಿಕಾರಿಗಳ ಸಹಕಾರ ಬೇಕು. ಗ್ರಾಮೀಣ ಆರ್ಥಿಕತೆಗೆ ಇದು ಹೆಚ್ಚು ಕೊಡುಗೆ ನೀಡಲಿದೆ ಎಂದರು.

ಆಹಾರ ಸಂಸ್ಕರಣೆಗೆ 1000 ಕೋಟಿ ರೂ. ಮೀಸಲಿಡಿ; ಉದ್ಯಮಿಗಳ ಮನವಿ
ರಾಜ್ಯದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದ್ದು ಇದರ ಸಂಸ್ಕರಣೆಗೆ ಪಕ್ಕದ ರಾಜ್ಯಗಳಿಗೆ ಹೋಗುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ಸಿಗುವ ಲಾಭ ಉದ್ಯಮಿಗಳಿಗಾಗುತ್ತಿದೆ. ರಾಜ್ಯದಲ್ಲಿ ಕೈಗಾರಿಕೋದ್ಯಮಿಗಳು ಹೆಚ್ಚು ಪರಿಣಿತರಿದ್ದು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಬ್ಬು ಬೆಳೆ ಸೇರಿದಂತೆ ಕೆಲವೇ ಕೆಲವು ಬೆಳೆಗಳಿಗೆ ಮಾತ್ರ ಕೈಗಾರಿಕೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇತರೆ ಬೆಳೆಗಳಲ್ಲಿಯೂ ಕೈಗಾರಿಕೆ ಬರಬೇಕು. ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ 3 ನೀತಿಗಳನ್ನು ಜಾರಿಗೆ ತಂದರೂ ಅವು ದಾಖಲೆಗಳಿಗೆ ಮಾತ್ರ ಸೀಮಿತವಾಗಿವೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಉದ್ಯಮಿಗಳು ಸಚಿವ ಬಿ.ಸಿ. ಪಾಟೀಲ ಅವರಿಗೆ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.