ETV Bharat / city

ಪ್ರೀತಿಗಾಗಿ ಮನೆ ಬಿಟ್ಟು ಬೆಂಗಳೂರಿಗೆ ಬಂದ ಅಪ್ರಾಪ್ತೆ: ಸಹಾಯದ ನೆಪದಲ್ಲಿ ಅತ್ಯಾಚಾರ ಎಸಗಿದ ಕಾನ್ಸ್​​ಟೇಬಲ್ - ಅಪ್ರಾಪ್ತೆ ಮೇಲೆ ಕಾನ್​ಸ್ಟೇಬಲ್ ಅತ್ಯಾಚಾರ

ಮನೆ ತೊರೆದು ಬಂದಿದ್ದ ಅಪ್ರಾಪ್ತೆ ಮೇಲೆ ಕಾನ್ಸ್​ಟೇಬಲ್​​​ ಅತ್ಯಾಚಾರ ಎಸಗಿರುವ ಆರೋಪ ಬೆಂಗಳೂರಲ್ಲಿ ಕೇಳಿ ಬಂದಿದೆ.

ಕಾನ್​ಸ್ಟೇಬಲ್
ಕಾನ್​ಸ್ಟೇಬಲ್
author img

By

Published : Jul 29, 2022, 3:46 PM IST

Updated : Jul 29, 2022, 4:11 PM IST

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಅಪ್ತಾಪ್ತೆಯನ್ನ‌ ಮನೆಗೆ‌‌ ಕರೆದುಕೊಂಡು ಹೋಗಿ ಆತ್ಯಾಚಾರ ಎಸಗಿರುವುದಾಗಿ ಆರೋಪದಡಿ ಗೋವಿಂದರಾಜನಗರ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​​ನನ್ನು ಬಂಧಿಸಲಾಗಿದೆ. ಪವನ್ ದ್ಯಾವಣ್ಣನವರ್ ಬಂದಿತ ಕಾನ್ಸ್​​ಟೇಬಲ್​​. ಇದೇ ತಿಂಗಳು 27ರಂದು ಘಟನೆ ನಡೆದಿದೆ.

ಅಪ್ರಾಪ್ತೆಯು ಚಾಮರಾಜನಗರ ಮೂಲದ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಹೀಗಾಗಿ ಮನೆ‌ ತೊರೆದು ಬಂದಿದ್ದ ಸಂತ್ರಸ್ತೆ ಜುಲೈ 27ರಂದು ಪಾರ್ಕ್ ಬದಿ ಓಡಾಡುತ್ತಿದ್ದಳು.‌ ಆಗ ಕರ್ತವ್ಯದಲ್ಲಿದ್ದ ಪವನ್, ಅಪ್ರಾಪ್ತೆಯನ್ನು ಪ್ರಶ್ನಿಸಿದಾಗ ಆಕೆ ಚಾಮರಾಜನಗರಕ್ಕೆ ಹೋಗಬೇಕೆಂದು ಹೇಳಿದ್ದರು. ಬಳಿಕ ಡ್ರಾಪ್‌ ಕೊಡುವುದಾಗಿ ನಂಬಿಸಿ ಮನೆಗೆ‌ ಕರೆದೊಯ್ದು ಕಾನ್ಸ್​​ಟೇಬಲ್​​ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಸದ್ಯ ಆರೋಪಿ ಕಾನ್ಸ್​​ಟೇಬಲ್​​​ನನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಅಪ್ರಾಪ್ತೆಯನ್ನು ಕಾನ್ಸ್​​ಟೇಬಲ್​​ ಬಾಡಿಗೆ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಚಾಮರಾಜನಗರ ಬಸ್​ಗೆ ಹತ್ತಿಸಿ ಕಳಿಸಿದ್ದರು. ಮನೆಗೆ ತೆರಳಿದ ಬಳಿಕ ಅಪ್ರಾಪ್ತೆ ವಿಷಯ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

(ಇದನ್ನೂ ಓದಿ: ಪತ್ನಿಯ ಸೌಂದರ್ಯವೇ ಸಂಸಾರಕ್ಕೆ ಕಂಟಕವೆಂದು ಆ್ಯಸಿಡ್ ದಾಳಿ ನಡೆಸಿದ ಪತಿಗೆ ಶಿಕ್ಷೆ ಪ್ರಕಟ)

Last Updated : Jul 29, 2022, 4:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.