ರಾಮನಗರ: ಒಂದು ಲೀಟರ್ ಪ್ಲಾಸ್ಟಿಕ್ ನೀರಿನ ಬಾಟಲಿ ಮೇಲೆ 1829 ಬಾರಿ 'ಡೋಂಟ್ ಯೂಸ್ ಪ್ಲಾಸ್ಟಿಕ್' ಮತ್ತು ‘ಇಂಡಿಯಾ' ಪದ ಬರೆಯುವ ಮೂಲಕ ಚನ್ನಪಟ್ಟಣದ ಯುವಕ ನೊಬೆಲ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾನೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಯುವಕ ಶಿವಕುಮಾರ್ ಎಂಬಾತನೇ ಈ ಸಾಧಕ. ನೀರಿನ ಬಾಟಲಿ ಮೇಲೆ ಇಂಗ್ಲಿಷ್ ಅಕ್ಷರಗಳಲ್ಲಿ ಬರೋಬ್ಬರಿ 1,829 ಬಾರಿ "ಡೋಂಟ್ ಯೂಸ್ ಪ್ಲಾಸ್ಟಿಕ್" ಎಂದು ಹಾಗೂ 595 ಸಲ "ಇಂಡಿಯಾ" ಹಾಗೂ 292 ಬಾರಿ "ವರ್ಲ್ಡ್" ಎಂದು ಬರೆದು ದಾಖಲೆ ಮಾಡಿದ್ದಾನೆ.
ಒಂದು ಪ್ಲಾಸ್ಟಿಕ್ ಬಾಟಲಿ ಮೇಲೆ ಒಟ್ಟಾರೆ 30 ಸಾವಿರ ಅಕ್ಷರಗಳನ್ನು ಬರೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾನೆ. ಇವರ ಈ ಸಾಧನೆ 2020ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿತ್ತು.
ಇದೀಗ ನೊಬೆಲ್ ವಿಶ್ವ ದಾಖಲೆಗೂ ಸೇರ್ಪಡೆಯಾಗಿದೆ. ಯೋಗ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಶಿವಕುಮಾರ್ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.
ನೊಬೆಲ್ ವರ್ಲ್ಡ್ ರೆಕಾರ್ಡ್ಸ್ 2020ರಲ್ಲಿ ಆರಂಭವಾಗಿದ್ದು, ಗಿನ್ನೆಸ್ ನಂತರ ಜಗತ್ತಿನ ಎರಡನೇ ಅತಿದೊಡ್ಡ ರೆಕಾರ್ಡ್ ಬುಕ್ ಕಂಪನಿಯಾಗಿದೆ.