ETV Bharat / city

ಸದ್ದಿಲ್ಲದೆ ಎಸ್ಐಟಿ ಮುಂದೆ ಹಾಜರಾದ‌ ಮಾಜಿ ಸಚಿವ ರಮೇಶ್ ಜಾರಕಿಹೊಳಿ - ಸಿಡಿ ಪ್ರಕರಣದ ತನಿಖೆ

ಉಪ ಚುನಾವಣೆ ಫಲಿತಾಂಶದ ಬಳಿಕ ಒಮ್ಮೆ ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದ ರಮೇಶ್ ಜಾರಕಿಹೊಳಿ, ಇದೀಗ ಯಾರಿಗೂ ತಿಳಿಯದಂತೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಿದ್ದಾರೆ.

Ramesh Jarakiholi appears before SIT
ಸದ್ದಿಲ್ಲದೆ ಎಸ್ಐಟಿ ಮುಂದೆ ಹಾಜರಾದ‌ ಮಾಜಿ ಸಚಿವ ರಮೇಶ್ ಜಾರಕಿಹೊಳಿ
author img

By

Published : May 9, 2021, 1:50 PM IST

ಬೆಂಗಳೂರು: ವಿಚಾರಣೆಗೆ ಹಾಜರಾಗದೆ ಪ್ರಕರಣ ಹಿಂಪಡೆಯಲು ವಕೀಲರಿಗೆ ಒತ್ತಡ ಹೇರಿದ್ದಾರೆ ಎಂಬ ಸಿಡಿ ಯುವತಿಯ ಆರೋಪ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೌಪ್ಯವಾಗಿ ವಿಚಾರಣೆಗೆ ಹಾಜರಾಗಿದ್ದಾರೆ.

ಮೂರು ದಿನಗಳ ಹಿಂದೆ ಎಸ್ಐಟಿ ಅಧಿಕಾರಿಗಳ ಮುಂದೆ ಜಾರಕಿಹೊಳಿ ಸದ್ದಿಲ್ಲದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಕೊರೊನಾ ಅಲೆಯ ನಿಯಂತ್ರಣಕ್ಕೆ ಕರ್ಫ್ಯೂ ಜಾರಿಗೊಳಿಸಿದ ಬಳಿಕ ಸಿಡಿ ಪ್ರಕರಣದ ತನಿಖೆ ಮರೆಯಾಗಿತ್ತು. ಅಲ್ಲದೇ ಎಸ್‌ಐಟಿಯ ಬಹಳಷ್ಟು ಅಧಿಕಾರಿಗಳನ್ನು ಕರ್ಫ್ಯೂ ಡ್ಯೂಟಿಗೆ ನಿಯೋಜಿಸಲಾಗಿತ್ತು. ಉಪ ಚುನಾವಣೆ ಫಲಿತಾಂಶದ ಬಳಿಕ ಒಮ್ಮೆ ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದ ಜಾರಕಿಹೊಳಿ, ಇದೀಗ ಯಾರಿಗೂ ತಿಳಿಯದಂತೆ ಮತ್ತೊಮ್ಮೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಕ್ಷೇತ್ರದಲ್ಲಿ ಉಲ್ಬಣಿಸಿದ ಕೊರೊನಾ.. 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ‌

ವಿಚಾರಣೆ ನಂತರ ಸಿಎಂ ಭೇಟಿಯಾಗಿ ಬೆಳಗಾವಿಗೆ ಜಾರಕಿಹೊಳಿ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ. "ಕೊರೊನಾ‌ ಪೀಡಿತರಂತೆ ಜಾರಕಿಹೊಳಿ ನಾಟಕವಾಡುತ್ತಿದ್ದಾರೆ. ವಿಚಾರಣೆ ಹಾಜರಾಗದೆ ತಮ್ಮ ವಕೀಲರಿಗೆ‌ ಕೇಸ್ ಹಿಂಪಡೆಯಲು ಹಣದ ಆಮಿಷವೊಡ್ಡಿದ್ದಾರೆ. ಈ ಮೂಲಕ ಪ್ರಕರಣದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾರೆ" ಎಂದು ಸಿಡಿ ಯುವತಿ ಪೊಲೀಸ್​ ಆಯುಕ್ತರಿಗೆ ಹಾಗೂ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.