ಬೆಂಗಳೂರು: ಮಾಜಿ ಸಚಿವ ರಾಮದಾಸ್ ವಿರುದ್ಧ ದಾಖಲಾಗಿದ್ದ ಪ್ರೇಮ ಪ್ರಕರಣ ರದ್ದು ಮಾಡುವಂತೆ ಕೋರಿ ರಾಮದಾಸ್, ಹೈಕೊರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮೈಸೂರಿನ ಶಾಸಕ, ಮಾಜಿ ಸಚಿವ ರಾಮದಾಸ್ ಅವರ ವಿರುದ್ಧ ಈ ಹಿಂದೆ ಪ್ರೇಮ ಕುಮಾರಿ ನೀಡಿದ್ದ ದೂರಿನನ್ವಯ ಪ್ರಕರಣವನ್ನು ಸರಸ್ವತಿ ಪುರಂ ಪೊಲೀಸರು ದಾಖಲಿಸಿಕೊಂಡಿದ್ದರು. ನಂತರ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ಹಾಗೂ ಪ್ರೇಮ ಕುಮಾರಿ ಅವರ ಮನವಿ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ. 16 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಇದನ್ನು ರದ್ದು ಕೋರಿ ಹೈಕೊರ್ಟ್ಗೆ ರಾಮದಾಸ್ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣ ಹಿನ್ನೆಲೆ:
ಮಾಜಿ ಸಚಿವ ರಾಮದಾಸ್, ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಪ್ರೇಮ ಕುಮಾರಿ ಎಂಬವರು ಆರೋಪಿಸಿ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.