ETV Bharat / city

ಸಿದ್ದರಾಮಯ್ಯ ಭೇಟಿಯಾದ ರಕ್ಷಾ ರಾಮಯ್ಯ : ತಮ್ಮ ಪರ ಲಾಬಿ ನಡೆಸಲು ಮನವಿ? - ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ನಾಳೆ ತಮ್ಮ ಆಪ್ತರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಲಿರುವ ಸಿದ್ದರಾಮಯ್ಯ, ಈ ವಿಚಾರವನ್ನು ಸಹ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ. ಈ ಹಿಂದೆ ಮೊಹಮ್ಮದ್ ನಲಪಾಡ್ ಅವರನ್ನು ಯಾವ ಕಾರಣಕ್ಕೆ ಅನರ್ಹಗೊಳಿಸಲಾಗಿತ್ತೋ ಆ ಕಾರಣ ಈವರೆಗೂ ಇತ್ಯರ್ಥವಾಗಿಲ್ಲ. ಅವರ ಮೇಲಿನ ಆರೋಪ ಈಗಲೂ ವಿಚಾರಣೆ ಹಂತದಲ್ಲೇ ಇದೆ..

Raksha Ramaiah meets Siddaramaiah
ಸಿದ್ದರಾಮಯ್ಯ ಭೇಟಿಯಾದ ರಕ್ಷಾ ರಾಮಯ್ಯ
author img

By

Published : Jul 18, 2021, 2:26 PM IST

ಬೆಂಗಳೂರು : ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಕ್ಷಾ ರಾಮಯ್ಯ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮುಂದಿನ ಮೂರು ವರ್ಷಕ್ಕಿದ್ದ ತಮ್ಮ ಅಧ್ಯಕ್ಷೀಯ ಅವಧಿಯನ್ನು ಪಕ್ಷದ ಹೈಕಮಾಂಡ್ ಒಂದು ವರ್ಷಕ್ಕೆ ಮೊಟಕುಗೊಳಿಸಿದ ಹಿನ್ನೆಲೆ ತೀವ್ರ ಬೇಸರಿಸಿಕೊಂಡಿರುವ ರಕ್ಷಾ ರಾಮಯ್ಯ, ಈ ವಿಚಾರವನ್ನು ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ಮೂರು ವರ್ಷಗಳ ಅವಧಿಗೆ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದ ಹೈಕಮಾಂಡ್, ಈಗ ಏಕಾಏಕಿ ಒಂದು ವರ್ಷಕ್ಕೆ ಸೀಮಿತಗೊಳಿಸಿ ಉಳಿದ ಎರಡು ವರ್ಷದ ಕಾಲಾವಧಿಯನ್ನು ಮೊಹಮ್ಮದ್ ನಲಪಾಡ್​ಗೆ ನೀಡಿದೆ. 69 ಸಾವಿರ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದ ಮೊಹಮ್ಮದ್ ನಲಪಾಡ್ ಆಯ್ಕೆಯನ್ನು ಅನರ್ಹಗೊಳಿಸಿದ ಪಕ್ಷದ ಹೈಕಮಾಂಡ್, 2ನೇ ಅತಿಹೆಚ್ಚು ಮತಗಳನ್ನು ಪಡೆದಿದ್ದ ರಕ್ಷಾ ರಾಮಯ್ಯ ಅವರನ್ನ ಅಧ್ಯಕ್ಷರೆಂದು ಘೋಷಿಸಿತ್ತು.

ಆದರೆ, ಇದನ್ನು ಪ್ರಶ್ನಿಸಿ ಹೈಕಮಾಂಡ್ ನಾಯಕರ ಬಳಿ ತೆರಳಿದ ನಲಪಾಡ್, ಇದೀಗ ಎರಡು ವರ್ಷಗಳ ಅಧಿಕಾರಾವಧಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲವನ್ನು ಆಧರಿಸಿ ಅಧ್ಯಕ್ಷ ಸ್ಥಾನ ಪಡೆದಿದ್ದ ರಕ್ಷಾ ರಾಮಯ್ಯ, ಇದೀಗ ನಿರಾಸೆಗೊಳಗಾಗಿದ್ದಾರೆ. ಮೊಹಮ್ಮದ್ ನಲಪಾಡ್ ಪರವಾಗಿ ಕಾರ್ಯನಿರ್ವಹಿಸಿದ್ದ ಡಿ ಕೆ ಶಿವಕುಮಾರ್ ಕೊನೆಗೂ ಯಶಸ್ವಿಯಾಗಿದ್ದಾರೆ.

ನಾಳೆ ತಮ್ಮ ಆಪ್ತರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಲಿರುವ ಸಿದ್ದರಾಮಯ್ಯ, ಈ ವಿಚಾರವನ್ನು ಸಹ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ. ಈ ಹಿಂದೆ ಮೊಹಮ್ಮದ್ ನಲಪಾಡ್ ಅವರನ್ನು ಯಾವ ಕಾರಣಕ್ಕೆ ಅನರ್ಹಗೊಳಿಸಲಾಗಿತ್ತೋ ಆ ಕಾರಣ ಈವರೆಗೂ ಇತ್ಯರ್ಥವಾಗಿಲ್ಲ. ಅವರ ಮೇಲಿನ ಆರೋಪ ಈಗಲೂ ವಿಚಾರಣೆ ಹಂತದಲ್ಲೇ ಇದೆ.

ಈ ಹಿನ್ನೆಲೆ ಪಕ್ಷದ ಹೈಕಮಾಂಡ್ ಹೊರಡಿಸಿರುವ ಆದೇಶವನ್ನು ಮತ್ತೊಮ್ಮೆ ತಡೆಹಿಡಿಯುವಂತೆ ಮನವಿ ಮಾಡುವಂತೆ ರಕ್ಷಾ ರಾಮಯ್ಯ, ಸಿದ್ದರಾಮಯ್ಯನವರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ರಾಜಕೀಯವಾಗಿ ಬೆಳೆಯಲು ತಮಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಾಕಷ್ಟು ಸಹಾಯ ಮಾಡಲಿದೆ. ಈ ಹಿನ್ನೆಲೆ ಹಿಂದೆ ಘೋಷಿಸಿದಂತೆ ಮುಂದಿನ ಮೂರು ವರ್ಷಕ್ಕೆ ತಾವೇ ಅಧ್ಯಕ್ಷರಾಗಿ ಮುಂದುವರಿಯುವಂತೆ ಪ್ರಯತ್ನ ಮಾಡುವಂತೆ ಸಿದ್ದರಾಮಯ್ಯಗೆ ರಕ್ಷಾ ರಾಮಯ್ಯ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.