ಬೆಂಗಳೂರು: ನಗರದಲ್ಲಿ ಐಎನ್ಟಿಯುಸಿ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆ ಆಚರಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ದೀಪ ಬೆಳಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕೋವಿಡ್ ಬಿಸಿ ಹಿನ್ನೆಲೆ ಪ್ರತಿ ವರ್ಷ ಬೆಂಗಳೂರಿನಿಂದ ಅವರು ಹತ್ಯೆಗೀಡಾದ ಶ್ರೀ ಪೆರಂಬದೂರಿಗೆ ಹೋಗಿ ರಾಜೀವ್ ಗಾಂಧಿ ಸ್ಮಾರಕದ ಹತ್ತಿರ ಪುಣ್ಯ ಸ್ಮರಣೆಯನ್ನಾಚರಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಈ ವರ್ಷ ಸಾಧ್ಯವಾಗಿಲ್ಲ. ಇದರಿಂದಾಗಿ ಇಂದು ಬೆಳಗ್ಗೆ 10 ಗಂಟೆಗೆ ಶೇಷಾದ್ರಿಪುರಂನಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಗೆ ಹಾರ ಹಾಕಿ ರಾಜೀವ್ ಗಾಂಧಿ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಿದರು.
ಚಾಲುಕ್ಯ ವೃತ್ತ, ಇಂಡಿಯನ್ ಎಕ್ಸ್ ಪ್ರೆಸ್ ರಸ್ತೆಯ ಮೂಲಕ ತೆಗೆದುಕೊಂಡು ತೆರಳಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೊನೆಗೊಳಿಸಿದರು. ಇದೇ ಸಂದರ್ಭ ಐಎನ್ಟಿಯುಸಿ ರಾಜ್ಯಾಧ್ಯಕ್ಷ ಎಸ್. ಎಸ್. ಪ್ರಕಾಶಂ, ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.