ETV Bharat / city

ಕಳ್ಳ ಸಂಬಂಧ ಆಕೆಯ ಬಲಿ ಪಡೆಯಿತು.. ಕೊಲೆ ಪ್ರಕರಣ ಬೇಧಿಸಲು CCTV ವಿಡಿಯೋ ಖಾಕಿಗೆ ನೆರವಾಯ್ತು! - ರಾಜಗೋಪಾಲ ನಗರ ಕೊಲೆ ಪ್ರಕರಣ

ನಗರದ ರಾಜಗೋಪಾಲನಗರದಲ್ಲಿ ನಡೆದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಸಿಲಿಕಾನ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

rajagopalanagar-murder-case-breaks-down
ರಾಜಗೋಪಾಲನಗರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
author img

By

Published : Feb 11, 2020, 11:44 PM IST

ಬೆಂಗಳೂರು : ಕೆಲ ದಿನಗಳ ಹಿಂದೆ ನಗರದ ರಾಜಗೋಪಾಲನಗರದಲ್ಲಿ ನಡೆದ ಕೊಲೆ ಪ್ರಕರಣವನ್ನು ಬೆನ್ನಟ್ಟಿದ್ದ ಪೊಲೀಸರು ಕೊನೆಗೆ ಹತ್ಯೆಗೆ ಕಾರಣ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಗೋಪಾಲನಗರ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು..

ಬಾಡಿಗೆದಾರ ಸೇರಿ ಕುಟುಂಬವೊಂದರ ಹತ್ಯೆ ಬೇಧಿಸಲು ಹೊರಟ ಪೊಲೀಸರಿಗೆ ಮೊದಲು ಹಂತಕ ಯಾರು ಮತ್ತು ಘಟನೆಗೆ ನಿಖರ ಕಾರಣ ಏನು ಅನ್ನುವುದು ಗೊತ್ತಾಗಿರುವುದಿಲ್ಲ. ನಂತರ ತನಿಖೆ ತೀರ್ವ ಗೊಳಿಸಿದಾಗ ಅವರಿಗೆ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗುತ್ತೆ. ಅದರಲ್ಲಿ ತಡರಾತ್ರಿ 12 ಗಂಟೆಗೆ ಲಕ್ಷ್ಮಿ, ರಂಗದಾಮಯ್ಯನ ಮನೆಗೆ ಹೋಗೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರಿಗೆ ಪ್ರಕರಣ ಬೇಧಿಸಲು ಸಹಾಯಕಾರಿಯಾಗುತ್ತದೆ.

ಘಟನೆ ವಿವಿರ: ಕೊಲೆಯಾಗಿದ್ದ ಲಕ್ಷ್ಮಿ ಮತ್ತು ಬಾಡಿಗೆದಾರ ರಂಗದಾಮಯ್ಯನ ನಡುವೆ ಅಕ್ರಮ ಸಂಬಂಧವಿತ್ತು. ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಲಕ್ಷ್ಮಿಮನೆಗೆ ರಂಗದಾಮಯ್ಯ ಹೋಗಿದ್ದ. ಇಬ್ಬರು ಒಟ್ಟಿಗೆ ಇರುವುದನ್ನು ಲಕ್ಷ್ಮಿ ಪತಿ ಶಿವರಾಜ್ ನೋಡಿದ್ದ. ಇದೇ ವಿಚಾರಕ್ಕೆ ಮೂವರ ನಡುವೆ ಗಲಾಟೆ ಶುರುವಾಗಿತ್ತು.

ಅದೇ ಸಮಯಕ್ಕೆ ಗಲಾಟೆಯ ಶಬ್ದ ಕೇಳಿ ಲಕ್ಷ್ಮಿ ಮಗಳು ಚೈತ್ರ ಕೂಡ ಅಲ್ಲಿಗೆ ಬಂದಿದ್ದಾಳೆ. ಜಗಳ ತೀವ್ರ ಸ್ವರೂಪ ಪಡೆದಾಗ ಲಕ್ಷ್ಮಿಯ ತಲೆ ಒಡೆದು ಕೊಲೆ ಮಾಡಿದ ರಂಗದಾಮಯ್ಯ. ನಂತರ ಗಂಡ ಶಿವರಾಜ್ ಮತ್ತು ‌ಮಗಳು ಚೈತ್ರಳಿಗೆ ಚಾಕು ಇರಿದಿದ್ದ. ಇದರಿಂದ ಭಯಗೊಂಡ ಬಾಡಿಗೆದಾರ ರಂಗದಾಮಯ್ಯ ಮೂವರು ಸತ್ತಿದ್ದಾರೆ ಅಂತಾ ತಿಳಿದು ತಾನೂ ಕೂಡ ಚಾಕು ಇರಿದುಕೊಂಡು ನೇಣಿಗೆ ಶರಣಾಗಿರೋದು ತನಿಖೆಯಲ್ಲಿ ಬಹಿರಂಗವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.