ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜನವರಿ 16ರ ರಾತ್ರಿ ಸಂಜಯ ನಗರದ ಕಾಝಿನ್ಸ್ ಹುಕ್ಕಾ ಬಾರ್ಗೆ ತೆರಳಿ ಮದ್ಯ ಸೇವಿಸಿದ ಎರಡು ಗುಂಪಿನ ಯುವಕರು, ಬಾರ್ನ ಲಿಫ್ಟ್ ಬಳಿ ಬಂದಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಜಗಳ ವಿಕೋಪಕ್ಕೆ ಹೋಗಿದೆ. ಗುಂಪಿನಲ್ಲಿದ್ದ ಓರ್ವ ಯುವಕ ಮತ್ತೊಂದು ಗ್ಯಾಂಗ್ನ ಯುವಕನಿಗೆ ಹೊಡೆಯಲು ಮುಂದಾಗುತ್ತಿದ್ದಂತೆ, ಕ್ಷಣಾರ್ಧದಲ್ಲಿ ಎರಡು ಗುಂಪಿನ ಸದಸ್ಯರು ಹೊಡೆದಾಡಿಕೊಂಡಿದ್ದಾರೆ.
ಯುವಕರ ಘರ್ಷಣೆ ನಡುವೆ ಯುವತಿ ಮಧ್ಯೆದಲ್ಲಿ ಸಿಲುಕಿಕೊಂಡಿದ್ದಾಳೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಅಲ್ಲೇ ಇದ್ದ ಕೆಲ ಯುವಕರು, ಯುವತಿಯನ್ನು ರಕ್ಷಿಸಿ ಕರೆದೊಯ್ದದ್ದಾರೆ. ಗುದ್ದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ‘ಓ ಅಪ್ಪಾ ನಾವು ಮಾಡಿದ ತಪ್ಪೇನು?’ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಪಾಪಿ ತಂದೆಯಿಂದ ನಿರಂತರ ಅತ್ಯಾಚಾರ
ದೊಮ್ಮಸಂದ್ರ ಹಾಗು ಎಂ.ಎಸ್. ರಾಮಯ್ಯ ಲೇಔಟ್ ಯುವಕರ ನಡುವೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಸಂಜಯ ನಗರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.