ETV Bharat / city

ಪುನೀತ್​ಗೆ ಇಂದು ಹಾಲು-ತುಪ್ಪ ಕಾರ್ಯ: ಬಿಳಿ, ಹಳದಿ ಬಣ್ಣದ ಹೂಗಳಿಂದ ಅಲಂಕಾರಗೊಂಡ ಅಪ್ಪು ಸಮಾಧಿ

ಕಂಠೀರವ ಸ್ಟುಡಿಯೋ ಆವರಣದಲ್ಲಿ ದಿ.ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಇಂದು ಹಾಲು ತುಪ್ಪ ಕಾರ್ಯ ನೆರವೇರಿಸಲಾಗುವುದು. ಹೀಗಾಗಿ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಹೂಗಳಿಂದ ಸಮಾಧಿ ಅಲಂಕರಿಸಲಾಗಿದೆ.

ಅಪ್ಪು ಸಮಾಧಿ
ಅಪ್ಪು ಸಮಾಧಿ
author img

By

Published : Nov 2, 2021, 11:39 AM IST

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಸಮಾಧಿಗೆ ಇಂದು ಬೆಳಗ್ಗೆ 11.30 ಕ್ಕೆ ಹಾಲು-ತುಪ್ಪ ವಿಧಿವಿಧಾನ ಕಾರ್ಯ ನೆರವೇರಿಸಲಾಗುವುದು. ಈ ಹಿನ್ನೆಲೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಮಾಧಿಯನ್ನ ಹೂಗಳಿಂದ ಅಲಂಕರಿಸಲಾಗಿದೆ.

ಬಿಳಿ ಮತ್ತು ಹಳದಿ ಬಣ್ಣದ ಹೂಗಳಿಂದ ಸಮಾಧಿಯನ್ನು ಮಂಟಪದ ರೀತಿ ಅಲಂಕಾರ ಮಾಡಲಾಗಿದೆ. ಜೊತೆಗೆ ಎಳೆನೀರು, ಹಣ್ಣು, ತೆಂಗಿನಕಾಯಿಯನ್ನು ನೈವೇದ್ಯಕ್ಕೆ ಇಡಲಾಗಿದೆ. ದೊಡ್ಮನೆ ಕುಟುಂಬಸ್ಥರು, ಚಿತ್ರರಂಗದ ಆಪ್ತರು, ಅಪ್ಪು ಸ್ನೇಹಿತರು ಹಾಲು-ತುಪ್ಪ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಬಿಳಿ, ಹಳದಿ ಬಣ್ಣದ ಹೂಗಳಿಂದ ಅಲಂಕಾರಗೊಂಡ ಅಪ್ಪು ಸಮಾಧಿ

ಈಗಾಗಲೇ ಕಾರ್ಯಕ್ರಮಕ್ಕೆ ಸಚಿವ ಗೋಪಾಲಯ್ಯ ಆಗಮಿಸಿದ್ದು, ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.