ETV Bharat / city

ಸ್ಕೂಟರ್ ಕದ್ದು ಪರಾರಿಯಾಗುವಾಗ ಅಪಘಾತ: ಸಾರ್ವಜನಿಕರಿಂದ ಕಳ್ಳನಿಗೆ ಧರ್ಮದೇಟು

ಸ್ಕೂಟರ್ ಕದ್ದು ಮುಂದಿನ 40 ನಿಮಿಷದೊಳಗೆ ಅಪಘಾತಕ್ಕೀಡಾಗಿದೆ. ಈ ವೇಳೆ ಸಾರ್ವಜನಿಕರು ಕಳ್ಳನಿಗೆ ಥಳಿಸಿದ್ದಾರೆ.

Public assault on scooter theft accused
ಸ್ಕೂಟರ್ ಕಳ್ಳತನ ಸಾರ್ವಜನಿಕರಿಂದ ಕಳ್ಳನಿಗೆ ಧರ್ಮದೇಟು
author img

By

Published : Jul 15, 2022, 1:10 PM IST

ಬೆಂಗಳೂರು: ಸ್ಕೂಟರ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನೊಬ್ಬ ಅಪಘಾತವಾಗಿ ಸಿಕ್ಕಿಬಿದ್ದು, ಜನರಿಂದ ಧರ್ಮದೇಟು ತಿಂದ ಘಟನೆ‌ ಜು.13 ರಂದು ಜಯನಗರದ 5ನೇ ಬ್ಲಾಕ್​​ನಲ್ಲಿ ನಡೆದಿದೆ. ಅಂಗಡಿ ಮುಂದೆ ನಿಲ್ಲಿಸಿದ್ದ ಹೋಂಡಾ ಆ್ಯಕ್ಟಿವಾ ಸ್ಕೂಟರ್​​ ಅನ್ನು ಹಾಡಹಗಲೇ ಚಾಲಾಕಿ ಕಳ್ಳ ಕದ್ದು ಪರಾರಿಯಾಗಲು ಯತ್ನಿಸಿದ್ದ.

ಸ್ಕೂಟರ್ ಕಳ್ಳತನ: ಸಿಸಿಟಿವಿ ದೃಶ್ಯ

ಇದನ್ನು ಗಮನಿಸಿದ ಸ್ಕೂಟರ್ ಮಾಲೀಕ ಕಳ್ಳನನ್ನು ಹಿಡಿಯಲು ಯತ್ನಿಸಿದರೂ ಕಳ್ಳ ತಪ್ಪಿಸಿಕೊಂಡಿದ್ದ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯ ಎಸಗಿದ 40 ನಿಮಿಷದೊಳಗೆ ಸ್ಕೂಟರ್ ಅಪಘಾತಕ್ಕೀಡಾಗಿದ್ದು, ಈ ವೇಳೆ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ ಎನ್ನಲಾಗ್ತಿದೆ.

ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ಚಾಲಾಕಿ ಕಳ್ಳ ಜನರಿಂದ ತಪ್ಪಿಸಿಕೊಂಡಿದ್ದಾನೆ. ಸಮೀಪದ ಸಂಚಾರಿ ಜಂಕ್ಷನ್​​ನಲ್ಲಿದ್ದ ಕಾನ್ಸ್‌ಟೇಬಲ್ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ ಅರ್ಧ ಗಂಟೆಯ ಹಿಂದೆ ಕದ್ದ ಸ್ಕೂಟರ್ ಎಂಬ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬೈಕ್ ಕಳ್ಳತನ: ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.