ETV Bharat / city

7ನೇ ದಿನವೂ ಮುಂದುವರಿದ ಪಿಯು ಉಪನ್ಯಾಸಕರ ಧರಣಿ

6 ವರ್ಷಗಳು, 6 ಸಚಿವರು, 7 ದಿನಗಳ ಅಹೋರಾತ್ರಿ ಧರಣಿ ಸರ್ಕಾರದ 108 ಭರವಸೆಗಳ ಮಧ್ಯೆ ನಮಗೆ‌ ಆದೇಶ ಪ್ರತಿಗಳು ಸಿಗುವುದೆಂದು ಅಂತ ಭಿತ್ತಿ ಪತ್ರಗಳ ಪ್ರದರ್ಶನ ಮಾಡುತ್ತಿದ್ದಾರೆ ಪಿಯು ಉಪನ್ಯಾಸಕರು.

protest
protest
author img

By

Published : Oct 18, 2020, 1:39 PM IST

ಬೆಂಗಳೂರು: ಪಿಯು ಉಪನ್ಯಾಸಕರ ನೇಮಕಾತಿ ಆದೇಶ ಪತ್ರ ನೀಡುವಂತೆ ಕಳೆದ 6 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದು 7ನೇ ದಿನಕ್ಕೆ ಕಾಲಿಟ್ಟಿದ್ದು, ಆದೇಶ ಪತ್ರ ನೀಡುವಂತೆ ಪಟ್ಟು ಹಿಡಿದು ಕುಳಿತ್ತಿದ್ದಾರೆ.

ಮುಂದುವರೆದ ಪಿಯು ಉಪನ್ಯಾಸಕರ ಧರಣಿ

6 ವರ್ಷಗಳು, 6 ಸಚಿವರು, 7 ದಿನಗಳ ಅಹೋರಾತ್ರಿ ಧರಣಿ ಸರ್ಕಾರದ 108 ಭರವಸೆಗಳ ಮಧ್ಯೆ ನಮಗೆ‌ ಆದೇಶ ಪ್ರತಿಗಳು ಸಿಗುವುದೆಂದು ಭಿತ್ತಿ ಪತ್ರಗಳ ಪ್ರದರ್ಶನ ಮಾಡುತ್ತಿದ್ದಾರೆ. ಈಗಾಗಲೇ ಉಪನ್ಯಾಕರ ಪರವಾಗಿ ಸರ್ಕಾರಕ್ಕೆ ಮನವಿ ಪತ್ರಗಳು ಎಲ್ಲವನ್ನೂ ಸಲ್ಲಿಸಲಾಗಿದೆ. ಸರ್ಕಾರವೂ ನೇಮಕಾತಿ ಪತ್ರ ಕೊಡುವ ಭರವಸೆ ನೀಡಿದೆ. ಆದರೆ ಭರವಸೆಯ ಮಾತುಗಳು ಬೇಡ, ತಕ್ಷಣವೇ ನೇಮಕಾತಿ ಪತ್ರ ನೀಡಿ ಆ ಬಳಿಕ ಧರಣಿ ಕೈ ಬಿಡುವುದಾಗಿ ಹೇಳುತ್ತಿದ್ದಾರೆ.

protest
ಪಿಯು ಉಪನ್ಯಾಸಕರ ಧರಣಿಗೆ ಬೆಂಬಲಿಸಿದ ವಾಟಾಳ್ ನಾಗರಾಜ್

‌ಇವರಲ್ಲಿ ಬಹುತೇಕ ಅಭ್ಯರ್ಥಿಗಳು ಕೌನ್ಸಲಿಂಗ್​ನಲ್ಲಿ ಹಳ್ಳಿಗಳಿಗೆ ನಿಯೋಜಿಸಲ್ಪಟ್ಟಿದ್ದಾರೆ. ಇದರಿಂದಾಗಿ ಕುಗ್ರಾಮದ ವಿದ್ಯಾರ್ಥಿಗಳು ಇಂಟರ್ನೆಟ್ ಸೌಲಭ್ಯವೂ ಇಲ್ಲದೇ, ಇದೀಗ ಉಪನ್ಯಾಸಕರು ಇಲ್ಲದೇ ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಇತ್ತ ಉಪನ್ಯಾಕರು ಧರಣಿ ಕೈ ಬಿಟ್ಟರೆ ಮುಂದೆ ಚುನಾವಣೆ ಇರುವುದರಿಂದ ಮತ್ತೆ ಒಂದು ವರ್ಷ ವಿಳಂಬವಾಗುವ ಆತಂಕ ಇವರಲ್ಲಿದೆ. ಹೀಗಾಗಿ, ಏನಾದರೂ ಸರಿ ಸರ್ಕಾರ ಪತ್ರ ನೀಡುವವರೆಗೆ ನಾವು ಇಲ್ಲಿಂದ ಹೋಗೋಲ್ಲ ಅಂತಿದ್ದಾರೆ.

ಇಂದಿನ ಧರಣಿಗೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಭೇಟಿ ನೀಡಿ ಉಪನ್ಯಾಸಕರಿಗೆ ಬೆಂಬಲ ನೀಡಿದರು. ಉಪನ್ಯಾಸಕರ ಬಳಿ ಮಾಹಿತಿ ಪಡೆದು ತಾವು ಕೂಡ ಪ್ರತಿಭಟನೆಯ ಭಿತ್ತಿ ಪತ್ರವನ್ನ ಪ್ರದರ್ಶಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.