ETV Bharat / city

ಶ್ರೀಹರಿಕೋಟಾದಲ್ಲಿ ಡಿ.17ರಂದು ಸಿಎಮ್ಎಸ್ -01 ಸಂವಹನ ಉಪಗ್ರಹ ಉಡಾವಣೆ

author img

By

Published : Dec 11, 2020, 7:59 PM IST

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಶಾರ್‌ನ 2ನೇ ಲಾಂಚ್ ಪ್ಯಾಡ್‌ನಿಂದ ಸಂವಹನ ಉಪಗ್ರಹವನ್ನು ಇದೇ 17ರಂದು ಉಡಾವಣೆ ಮಾಡಲಾಗುತ್ತದೆ.

PSLV-C50 is scheduled to launch CMS-01 on December 17th from Sriharikota
ಸಂವಹನ ಉಪಗ್ರಹ ಉಡಾವಣೆ

ಬೆಂಗಳೂರು: ಪಿಎಸ್‌ಎಲ್‌ವಿ - ಸಿ50 ಉಡಾವಣಾ ವಾಹಕವು ಸಂವಹನ ಉಪಗ್ರಹವನ್ನು (ಸಿಎಂಎಸ್​​-01) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ) ಡಿಸೆಂಬರ್​ 17ರಂದು ಉಡಾವಣೆ ಮಾಡಲಿದೆ.

ಎಸ್‌ಡಿಎಸ್‌ಸಿಯ ಶಾರ್‌ನ 2ನೇ ಲಾಂಚ್ ಪ್ಯಾಡ್‌ನಿಂದ (ಎಸ್‌ಎಲ್‌ಪಿ) ಈ ಉಪಗ್ರಹ ಉಡಾವಣೆಗೆ ಅಂದು ಮಧ್ಯಾಹ್ನ 3:41ಕ್ಕೆ ಸಮಯ ನಿಗದಿಪಡಿಸಲಾಗಿದೆ. ಪಿಎಸ್​​​ಎಲ್​​ವಿಯ 52ನೇ ಉಪಗ್ರಹ ಇದಾಗಿದೆ. ಸಿಎಂಎಸ್​-01 ಎಂಬುದು ಭಾರತದ 42ನೇ ಸಂವಹನ ಉಪಗ್ರಹ.

ಉಪಗ್ರಹ ಕಕ್ಷೆಯ ವಿಸ್ತೃತ-ಸಿ ಬ್ಯಾಂಡ್‌ನ ವ್ಯಾಪ್ತಿಗೆ ಬರುವ ಪ್ರದೇಶಗಳಿಗೆ ತರಂಗಗಳ ಸೇವೆ ಒದಗಿಸಲು ಕಲ್ಪಿಸಲಾದ ಸಂವಹನ ಉಪಗ್ರಹವೇ ಸಿಎಂಎಸ್​-01. ಅದರ ವ್ಯಾಪ್ತಿಯಲ್ಲಿ ಭಾರತದ ಮುಖ್ಯ ಭೂ ಪ್ರದೇಶಗಳು, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳು ಬರಲಿವೆ.

ಪಿಎಸ್‌ಎಲ್‌ವಿ-ಸಿ50 ಆರು ಮೋಟಾರುಗಳೊಂದಿಗೆ ಸುಧಾರಿತ ಆವೃತ್ತಿಯ 'ಎಕ್ಸ್‌ಎಲ್' ಸಂರಚನೆ ಹೊಂದಿರುವ ಪಿಎಸ್‌ಎಲ್‌ವಿಯ 22ನೇ ಉಡಾವಣೆಯಾಗಿದೆ. ಅಲ್ಲದೇ, ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳುತ್ತಿರುವ 77ನೇ ಉಡಾವಣಾ ವಾಹಕ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.