ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಹೊರ ಬೀಳುತ್ತಿರುವ ದಾಖಲೆ, ಶಾಮೀಲಾದ ವ್ಯಕ್ತಿಗಳು, ಬಂಧಿತರಾದ ವ್ಯಕ್ತಿಗಳ ಹಿನ್ನೆಲೆಯೆಲ್ಲವೂ ಕಾಂಗ್ರೆಸ್ ಪ್ರಭಾವಿ ನಾಯಕರ ನಿಕಟ ಸಂಪರ್ಕವನ್ನು ಸೂಚಿಸುತ್ತಿದೆ. ಹಗರಣದಲ್ಲಿ ಸಿಕ್ಕಿ ಬೀಳುತ್ತಿರುವ ಆರೋಪಿಗಳೆಲ್ಲರೂ ಖರ್ಗೆ ಕುಟುಂಬದ ಮನೆಯ ಸುತ್ತ ಗಿರಕಿ ಹೊಡೆಯುವವರೇ ಆಗಿದ್ದಾರೆ. ಮಹಾಂತೇಶ್ ಪಾಟೀಲ್ ಹಾಗೂ ಅವರ ಸೋದರ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಜೊತೆಗೆ ಹೊಂದಿರುವ ಸಾಂಗತ್ಯದ ಬಗ್ಗೆ ಡಿಕೆಶಿ ಅವರು ಏಕೆ ಮೌನವಾಗಿದ್ದಾರೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಪಿಎಸ್‌ಐ ನೇಮಕಾತಿ ಹಗರಣ ವಿಚಾರದಲ್ಲಿ ಕಾಂಗ್ರೆಸ್ ಇಷ್ಟು ದಿನ ʼಅಟೆನ್ಷನ್ ಡೈವರ್ಟ್ʼ ಮಾಡುವ ಕೆಲಸ ಮಾಡುತ್ತಿತ್ತು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕೆಲಸದ ಗುತ್ತಿಗೆ ಪಡೆದವರಂತೆ ವರ್ತಿಸಿದರು. ಆದರೆ, ಈಗ ಹಗರಣದ ಬಾಲ ಇವರ ಕಾಲನ್ನೇ ಸುತ್ತಿಕೊಂಡಿದೆ. ಗಮನ ಬೇರೆಡೆ ಸೆಳೆಯಲು ಮಾಡಿದ ಕಾಂಗ್ರೆಸ್ ಪ್ರಯತ್ನವೆಲ್ಲವೂ ವ್ಯರ್ಥವಾಗಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.
-
ಮಹಾಂತೇಶ್ ಪಾಟೀಲ್ ಹಾಗೂ ಅವರ ಸೋದರ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಜೊತೆಗೆ ಹೊಂದಿರುವ ಸಾಂಗತ್ಯದ ಬಗ್ಗೆ @DKShivakumar ಅವರು ಏಕೆ ಮೌನವಾಗಿದ್ದಾರೆ?
— BJP Karnataka (@BJP4Karnataka) April 25, 2022 " class="align-text-top noRightClick twitterSection" data="
ಪ್ರಿಯಾಂಕ ಖರ್ಗೆ ಹೇಳುತ್ತಿರುವ ದಿನಕ್ಕೊಂದು ಸುಳ್ಳು ಅಟೆನ್ಷನ್ ಡೈವರ್ಶನ್ ಮಾಡುವ ತಂತ್ರವಷ್ಟೇ.#CONgressPSIToolkit pic.twitter.com/j8Mha1unAk
">ಮಹಾಂತೇಶ್ ಪಾಟೀಲ್ ಹಾಗೂ ಅವರ ಸೋದರ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಜೊತೆಗೆ ಹೊಂದಿರುವ ಸಾಂಗತ್ಯದ ಬಗ್ಗೆ @DKShivakumar ಅವರು ಏಕೆ ಮೌನವಾಗಿದ್ದಾರೆ?
— BJP Karnataka (@BJP4Karnataka) April 25, 2022
ಪ್ರಿಯಾಂಕ ಖರ್ಗೆ ಹೇಳುತ್ತಿರುವ ದಿನಕ್ಕೊಂದು ಸುಳ್ಳು ಅಟೆನ್ಷನ್ ಡೈವರ್ಶನ್ ಮಾಡುವ ತಂತ್ರವಷ್ಟೇ.#CONgressPSIToolkit pic.twitter.com/j8Mha1unAkಮಹಾಂತೇಶ್ ಪಾಟೀಲ್ ಹಾಗೂ ಅವರ ಸೋದರ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಜೊತೆಗೆ ಹೊಂದಿರುವ ಸಾಂಗತ್ಯದ ಬಗ್ಗೆ @DKShivakumar ಅವರು ಏಕೆ ಮೌನವಾಗಿದ್ದಾರೆ?
— BJP Karnataka (@BJP4Karnataka) April 25, 2022
ಪ್ರಿಯಾಂಕ ಖರ್ಗೆ ಹೇಳುತ್ತಿರುವ ದಿನಕ್ಕೊಂದು ಸುಳ್ಳು ಅಟೆನ್ಷನ್ ಡೈವರ್ಶನ್ ಮಾಡುವ ತಂತ್ರವಷ್ಟೇ.#CONgressPSIToolkit pic.twitter.com/j8Mha1unAk
ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಬಳಿ ಮಾಹಿತಿ, ದಾಖಲೆ ಇದ್ದರೆ ಅದನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಲ್ಲಿಸುವುದು ಅವರ ಕರ್ತವ್ಯ. ಈ ಕಾರಣಕ್ಕಾಗಿಯೇ ಪ್ರಿಯಾಂಕ್ ಅವರಿಗೆ ಸಿಐಡಿ ನೋಟಿಸ್ ನೀಡಿದೆ. ತನಿಖೆಗೆ ಸಹಕರಿಸುವುದನ್ನು ಬಿಟ್ಟು ನೋಟಿಸ್ ನೀಡಿರುವುದನ್ನು ರಾಜಕೀಯಗೊಳಿಸುವುದು ಸರಿಯಲ್ಲ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ವಿಚಾರವನ್ನು ಮರೀಚಿಕೆಯಾಗಿಸಿದ ಕುಟುಂಬವೇ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದೆ. ಒಂದು ಬೆರಳು ಬೇರೆಯವರತ್ತ ತೋರಿದರೆ ನಾಲ್ಕು ಬೆರಳು ತಮ್ಮತ್ತ ಇರುತ್ತದೆ ಎಂಬುದಕ್ಕೆ ಪಿಎಸ್‌ಐ ನೇಮಕಾತಿ ಹಗರಣ ಜ್ವಲಂತ ಉದಾಹರಣೆಯಾಗಿದೆ. ಆರೋಪ ಮಾಡಿದವರನ್ನೇ ಹಗರಣ ಸುತ್ತಿಕೊಳ್ಳುತ್ತಿದೆ ಎಂದು ದೂರಿದೆ.
ಪಿಎಸ್ಐ ನೇಮಕಾತಿ ಹಗರಣ ಬಯಲಾಗುವ ಮುನ್ನವೇ ಇದಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ ಪ್ರಿಯಾಂಕ್ ಖರ್ಗೆ ಅವರ ಬಳಿ ಇತ್ತು. ನೇಮಕಾತಿ ಹಗರಣ ಬಯಲಾದ ಬಳಿಕ ಆಡಿಯೋ ಕ್ಲಿಪ್ ಬಿಡುಗಡೆ ಮಾಡಲು ಕಾರಣವೇನು?. ಅಕ್ರಮದ ಆರೋಪ ತಮ್ಮ ಬುಡಕ್ಕೆ ಬಂದಾಗ ವಿಷಯಾಂತರ ಮಾಡುವ ವ್ಯರ್ಥ ಪ್ರಯತ್ನವಿದು.
-
ಮಾಧ್ಯಮದವರ ಮುಂದೆ ಪತ್ರಿಕಾ ಗೋಷ್ಠಿ ನಡೆಸುವಾಗ ತನಿಖಾ ಅಧಿಕಾರಿಯಂತೆ ವರ್ತಿಸಿದ @PriyankKharge, ಪೊಲೀಸರು ತನಿಖೆಗೆ ಸಹಕರಿಸುವಂತೆ ಕೇಳಿದಾಗ ಬೆಚ್ಚಿ ಬಿದ್ದಿದ್ದಾರೆ.
— BJP Karnataka (@BJP4Karnataka) April 25, 2022 " class="align-text-top noRightClick twitterSection" data="
ಮಾಧ್ಯಮದ ಮುಂದೆ ಹೋಗುವಾಗಿದ್ದ ಸಾಕ್ಷ್ಯ, ಆಡಿಯೋ ಟೇಪ್ ಈಗೇನಾಗಿದೆ?
ನೇಮಕಾತಿ ಹಗರಣದ ತನಿಖೆ ಚುರುಕಾಗುತ್ತಿರುವಂತೆ ನಿಮ್ಮ ನೆಲ ಅಲುಗಾಡಿತೇ?#CONgressPSIToolkit pic.twitter.com/hEU3wj1thV
">ಮಾಧ್ಯಮದವರ ಮುಂದೆ ಪತ್ರಿಕಾ ಗೋಷ್ಠಿ ನಡೆಸುವಾಗ ತನಿಖಾ ಅಧಿಕಾರಿಯಂತೆ ವರ್ತಿಸಿದ @PriyankKharge, ಪೊಲೀಸರು ತನಿಖೆಗೆ ಸಹಕರಿಸುವಂತೆ ಕೇಳಿದಾಗ ಬೆಚ್ಚಿ ಬಿದ್ದಿದ್ದಾರೆ.
— BJP Karnataka (@BJP4Karnataka) April 25, 2022
ಮಾಧ್ಯಮದ ಮುಂದೆ ಹೋಗುವಾಗಿದ್ದ ಸಾಕ್ಷ್ಯ, ಆಡಿಯೋ ಟೇಪ್ ಈಗೇನಾಗಿದೆ?
ನೇಮಕಾತಿ ಹಗರಣದ ತನಿಖೆ ಚುರುಕಾಗುತ್ತಿರುವಂತೆ ನಿಮ್ಮ ನೆಲ ಅಲುಗಾಡಿತೇ?#CONgressPSIToolkit pic.twitter.com/hEU3wj1thVಮಾಧ್ಯಮದವರ ಮುಂದೆ ಪತ್ರಿಕಾ ಗೋಷ್ಠಿ ನಡೆಸುವಾಗ ತನಿಖಾ ಅಧಿಕಾರಿಯಂತೆ ವರ್ತಿಸಿದ @PriyankKharge, ಪೊಲೀಸರು ತನಿಖೆಗೆ ಸಹಕರಿಸುವಂತೆ ಕೇಳಿದಾಗ ಬೆಚ್ಚಿ ಬಿದ್ದಿದ್ದಾರೆ.
— BJP Karnataka (@BJP4Karnataka) April 25, 2022
ಮಾಧ್ಯಮದ ಮುಂದೆ ಹೋಗುವಾಗಿದ್ದ ಸಾಕ್ಷ್ಯ, ಆಡಿಯೋ ಟೇಪ್ ಈಗೇನಾಗಿದೆ?
ನೇಮಕಾತಿ ಹಗರಣದ ತನಿಖೆ ಚುರುಕಾಗುತ್ತಿರುವಂತೆ ನಿಮ್ಮ ನೆಲ ಅಲುಗಾಡಿತೇ?#CONgressPSIToolkit pic.twitter.com/hEU3wj1thV
ಮಾಧ್ಯಮದವರ ಮುಂದೆ ಪತ್ರಿಕಾಗೋಷ್ಠಿ ನಡೆಸುವಾಗ ತನಿಖಾ ಅಧಿಕಾರಿಯಂತೆ ವರ್ತಿಸಿದ ಪ್ರಿಯಾಂಕ್ ಖರ್ಗೆ ಪೊಲೀಸರು ತನಿಖೆಗೆ ಸಹಕರಿಸುವಂತೆ ಕೇಳಿದಾಗ ಬೆಚ್ಚಿ ಬಿದ್ದಿದ್ದಾರೆ. ಮಾಧ್ಯಮದ ಮುಂದೆ ಹೋಗುವಾಗ ಇದ್ದ ಸಾಕ್ಷ್ಯ, ಆಡಿಯೋ ಟೇಪ್ ಈಗೇನಾಗಿದೆ? ನೇಮಕಾತಿ ಹಗರಣದ ತನಿಖೆ ಚುರುಕಾಗುತ್ತಿದ್ದಂತೆ ನಿಮ್ಮ ನೆಲ ಅಲುಗಾಡಿತೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ತಪ್ಪಿತಸ್ಥರನ್ನು ಬಂಧಿಸೋ ಬದಲು ಆರೋಪ ಮಾಡಿದವರಿಗೆ ನೋಟಿಸ್ ನೀಡುವುದು ಎಷ್ಟು ಸರಿ: ಪ್ರಿಯಾಂಕ ಪ್ರಶ್ನೆ