ಬೆಂಗಳೂರು : ಸೇವೆ ಖಾಯಂಗೊಳಿಸುವುದೂ ಸೇರಿ ಹಲವು ಬೇಡಿಕೆಗಳನ್ನ ಸರ್ಕಾರ ಈಡೇರಿಸದಿರುವುದರಿಂದ ಕರ್ನಾಟಕ ರಾಜ್ಯ ಗುತ್ತಿಗೆ ವೈದ್ಯಾಧಿಕಾರಿಗಳ ಸಂಘದಿಂದ ಜುಲೈ 8ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗುತ್ತಿಗೆ ವೈದ್ಯರು, ರಾಜ್ಯದಲ್ಲಿ 507 ಮಂದಿ ಗುತ್ತಿಗೆ ವೈದ್ಯರು ಕೆಲಸ ಮಾಡುತ್ತಿದ್ದೇವೆ. ಸಾಕಷ್ಟು ಬಾರಿ ಸೇವೆ ಖಾಯಂಗೊಳಿಸುವಂತೆ ಕೇಳಿಕೊಂಡ್ರೂ ಸಮಸ್ಯೆ ಬಗೆಹರಿದಿಲ್ಲ. ಇಂದು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಿದ್ದೇವೆ. ನಾಳೆ ಉಪವಾಸ ಇದ್ದುಕೊಂಡು ಕೆಲಸ ಮಾಡಲು ತಯಾರಿ ನಡೆಸಿದ್ದೇವೆ. ಸರ್ಕಾರ ಇದ್ಯಾವುದಕ್ಕೂ ಸ್ಪಂದಿಸದಿದ್ರೆ, ಬುಧವಾರದಿಂದ ಕೆಲಸ ನಿಲ್ಲಿಸಿ ಪ್ರತಿಭಟಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.