ETV Bharat / city

ಜೂ.13 ರಂದು ದೇಶಾದ್ಯಂತ ಜಾರಿ ನಿರ್ದೇಶನಾಲಯ ಕಚೇರಿ ಎದುರು ಕಾಂಗ್ರೆಸ್​ನಿಂದ ಪ್ರತಿಭಟನೆ

author img

By

Published : Jun 11, 2022, 3:54 PM IST

ಇಡಿ, ಸಿಬಿಐ ಮೂಲಕ ನಮ್ಮ ರಾಷ್ಟ್ರೀಯ ನಾಯಕರಿಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ. ಮುಚ್ಚಿಹೋಗಿದ್ದ ಪ್ರಕರಣವನ್ನು ಅನಗತ್ಯವಾಗಿ ತೆರೆದು ನಮ್ಮ ನಾಯಕರಿಗೆ ಕಿರುಕುಳ ಕೊಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಡಿಕೆಶಿ ದೂರಿದ್ದಾರೆ.

KPCC President D.K.Shivakumar talked to press
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು: ದೇಶಕ್ಕಾಗಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧವೇ ಕೇಂದ್ರ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ದೇಶಕ್ಕಾಗಿ ತ್ಯಾಗ ಮಾಡಿದವರು. ಇಂಥವರ ರಾಜಕೀಯದ ಮೇಲೆ ಮಸಿ ಬಳಿಯಲು ಬಿಜೆಪಿ ಸರ್ಕಾರ ಇಡಿ, ಸಿಬಿಐ ಬಳಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರದ ಮೇಲೆ ನಮ್ಮ ಇಬ್ಬರು ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಜೂ. 13 ರಂದು ರಾಹುಲ್ ಗಾಂಧಿ ಅವರು ಇಡಿ ಕಚೇರಿಗೆ ಹಾಜರ್ ಆಗ್ತಿದ್ದಾರೆ. ನಮ್ಮ ನಾಯಕರು ಹೆದರಲ್ಲ. ಜೈಲಿಗೆ ಹೋಗೋಕೂ ತಯಾರಿದ್ದಾರೆ. 13 ರಂದು ದೇಶಾದ್ಯಂತ ಕಾಂಗ್ರೆಸ್ ನಾಯಕರು ಇಡಿ ಕಚೇರಿಗಳ ಎದುರು ನಮ್ಮ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶಕ್ಕಾಗಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ, ಒಬ್ಬ ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರಿಗೆ ಆ ಸ್ಥಾನ ಬಿಟ್ಟು ಕೊಟ್ಟವರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ತ್ಯಾಗಕ್ಕೆ ಬಿಜೆಪಿ ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಇಡಿ, ಸಿಬಿಐ ಮೂಲಕ ನಮ್ಮ ರಾಷ್ಟ್ರೀಯ ನಾಯಕರಿಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ. ಮುಚ್ಚಿಹೋಗಿದ್ದ ಪ್ರಕರಣವನ್ನು ಅನಗತ್ಯವಾಗಿ ತೆರೆದು ನಮ್ಮ ನಾಯಕರಿಗೆ ಕಿರುಕುಳ ಕೊಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಇದೇ 13ಕ್ಕೆ ಲಾಲ್​ಬಾಗ್​ನಿಂದ ಇಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದೇವೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಮೆರವಣಿಗೆ ಆರಂಭವಾಗಲಿದೆ ಎಂದು ಡಿಕೆಶಿ ವಿವರಿಸಿದರು.

ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಮಾತನಾಡಿ, ಬಿಜೆಪಿ ಸರ್ಕಾರದ ಜವಾಬ್ದಾರಿ, ಶಾಂತಿ ಕಾಪಾಡಬೇಕು. ಕರ್ನಾಟಕದಲ್ಲಿ ನಾನು ಎಲ್ಲರಲ್ಲಿ ಕೈ ಜೋಡಿಸಿ ಮನವಿ ಮಾಡುತ್ತೇನೆ. ಯಾರೂ ಪ್ರಚೋದನೆಗೆ ಕಿವಿಗೊಡಬಾರದು. ಶಾಂತಿ ಕಾಪಾಡಬೇಕು. ಕರ್ನಾಟಕ ಶಾಂತಿಯ ತೋಟ. ಎಲ್ಲರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದು ಹೇಳಿದರು.

ನಮ್ಮ ಪಕ್ಷ 69 ಜನರಿಗೆ ವಿಪ್ ನೀಡಿತ್ತು. ನಮ್ಮ ವಿಪ್ ಉಲ್ಲಂಘಿಸಿ ಯಾರು ಬೇರೆ ಪಕ್ಷಗಳಿಗೆ ಅಡ್ಡ ಮತದಾನ ಮಾಡಿಲ್ಲ. ನಮಗೆ ಒಂದು ಮತ ಹೆಚ್ಚುವರಿಯಾಗಿ ಬಿದ್ದಿದೆ. ನಮ್ಮ ಪಕ್ಷದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷದ ಸಹ ಸದಸ್ಯರಾದ ಶರತ್ ಬಚ್ಚೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶ್ರೀನಿವಾಸ್ ಗೌಡ ಗುಪ್ತ ಮತದಾನ ಮಾಡುತ್ತಾರೆ ಅಂತಿದ್ದೆ, ಆದರೆ ಅವರು ನೇರವಾಗಿ ಮತ ಹಾಕಿದ್ದಾರೆ. ಕಾಂಗ್ರೆಸ್‌ನ ಯಾವುದೇ ಶಾಸಕರು ಬಿಜೆಪಿಗೆ ಎರಡನೇ ಪ್ರಾಶಸ್ತ್ಯ ಮತಗಳನ್ನು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಬಿಜೆಪಿಯ ಬಿ ಟೀಂ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ನೋವಿನಲ್ಲಿ ಹೀಗೆ ಮಾತನಾಡಿದ್ದಾರೆ. ನಮ್ಮ ಪಕ್ಷಕ್ಕೂ ಒಂದು ಸ್ವಾಭಿಮಾನ ಇದೆ. ನಾವು ಸ್ವಾಭಿಮಾನದಿಂದ ನಿರ್ಧಾರ ತೆಗೆದುಕೊಂಡಿದ್ದೆವು. ಜೆಡಿಎಸ್ ಬಿಜೆಪಿಯ ಒತ್ತಡ ಎಷ್ಟಿತ್ತು ಅಂತಾ ನನಗೆ ಗೊತ್ತು‌. ಆದರೆ ನಾವು ಜೆಡಿಎಸ್ ಶಾಸಕರಿಗೆ ಅಡ್ಡ ಮತದಾನ ಮಾಡಲು ಯಾವುದೇ ಒತ್ತಡ ಹಾಕಿಲ್ಲ. ನನ್ನ ಬಾಯಲ್ಲೇ ಹೆಸರುಗಳಿವೆ, ಜೆಡಿಎಸ್​ನ ಹಲವು ಶಾಸಕರಿದ್ದಾರೆ. ಬೇರೆ ಪಕ್ಷದವರು ಇದ್ದಾರೆ. ಆದರೆ, ಕಳೆದ ಬಾರಿ ಮಾಡಿದಂತೆ ಅಡ್ಡ ಮತದಾನವನ್ನು ನಾವು ಮಾಡಿಸಿಲ್ಲ. ಬೇಡ ಎಂದೇ ನಾವು ನಮ್ಮ ಶಾಸಕರ ಮತಗಳನ್ನು ಮಾತ್ರ ನಮಗೆ ಹಾಕಿಕೊಂಡಿದ್ದೇವೆ ಎಂದರು.

ಕಾದು ನೋಡಿ ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಇನ್ನೂ ಅನೇಕರು ಬರ್ತಾರೆ ಎಂಬ ಸಚಿವ ಅಶ್ವತ್ಥ ನಾರಾಯಣ್ ಹೇಳಿಕೆ ವಿಚಾರಕ್ಕೆ, ಗಂಡಸರು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಮಾಡ್ತಾರೆ. ಗಂಡಸರು ಮನಸ್ಸು ಮಾಡಿದ್ರೆ ಯಾರನ್ನು ಬೇಕಾದ್ರೂ ಕರೆ ತರ್ತಾರೆ. ನಾನು ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ: ಶಾಸಕ ಶ್ರೀನಿವಾಸ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.