ಬೆಂಗಳೂರು: ನಾಳೆ ನಡೆಯುತ್ತಿರುವ ಎಂಬಿಎ, ಎಂಆರ್ಕ್, ಎಂಟೆಕ್, ಎಂಸಿಎ ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ಸೆಕ್ಷನ್ 144 ನಿಷೇಧಾಜ್ಞೆಯನ್ನು ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
![prohibition-around-exams-centers-city-police-commissioner-pant-ordered](https://etvbharatimages.akamaized.net/etvbharat/prod-images/kn-bng-04-144seconmbaexam-72045473_12102020191928_1210f_1602510568_379.jpg)
13-10-2020 ರಿಂದ 14-10-2020ರವರೆಗೆ ನಗರದ ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿಯ ಜೊತೆಗೆ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ಫೋಟೋ ಕಾಪಿ ಅಂಗಡಿ ಸೈಬರ್ ಕೆಫೆಗಳನ್ನ ಮುಚ್ಚಲು ಆದೇಶ ಮಾಡಲಾಗಿದೆ.
ಶಾಂತಿಯುತವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಈ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಆಯುಕ್ತ ಪಂತ್ ಆದೇಶ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.