ETV Bharat / city

ಬಿಡಿಎ ಸೇವೆಗಳು ಶೀಘ್ರವೇ 'ಜನಸೇವಕ' ವ್ಯಾಪ್ತಿಗೆ : ಸಚಿವ ಅಶ್ವತ್ಥ್‌ ನಾರಾಯಣ - ಜನಸೇವಕದಲ್ಲಿ ಬಿಡಿಎ ಸೇವೆಗಳು

'ಜನಸೇವಕ' ಯೋಜನೆ ವ್ಯಾಪ್ತಿಗೆ ಸದ್ಯದಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸೇವೆಗಳನ್ನೂ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ ಹೇಳಿದರು..

Program on Janasewaka in bangalore
ಜನಸೇವಕ’ ಕುರಿತಾದ ಕಾರ್ಯಕ್ರಮ
author img

By

Published : Dec 11, 2021, 5:44 PM IST

ಬೆಂಗಳೂರು : ಆಧಾರ್ ಕಾರ್ಡ್​ನಿಂದ ಹಿಡಿದು ಭೂ ಹಿಡುವಳಿ ಪ್ರಮಾಣ ಪತ್ರದವರೆಗೆ 79 ಅಗತ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ 'ಜನಸೇವಕ' ಯೋಜನೆ ವ್ಯಾಪ್ತಿಗೆ ಸದ್ಯದಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸೇವೆಗಳನ್ನೂ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ ಹೇಳಿದರು.

'ಜನಸೇವಕ’ ಕುರಿತಾದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್‌ ನಾರಾಯಣ ಮಾತನಾಡಿರುವುದು..

ಸುಬ್ರಹ್ಮಣ್ಯನಗರ ವಾರ್ಡ್ ವ್ಯಾಪ್ತಿಯ ಸಂಗೊಳ್ಳಿ ರಾಯಣ್ಣ ಉದ್ಯಾನದಲ್ಲಿ 'ಜನಸೇವಕ’ ಸಂಬಂಧ ಜನರಿಗೆ ಸಾಂಕೇತಿಕವಾಗಿ ಸೇವೆಗಳನ್ನು ಒದಗಿಸುವ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.

ಬಿಡಿಎ ಸೇವೆಗಳನ್ನೂ ಕೂಡ ಇದರ ವ್ಯಾಪ್ತಿಗೆ ತರಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದ್ದಕ್ಕೆ ಅವರು ಉತ್ತರ ನೀಡಿದರು. ಈ ಸಂಬಂಧ ಮುಖ್ಯಮಂತ್ರಿ ಜೊತೆಗೂ ಚರ್ಚಿಸಲಾಗುವುದು ಎಂದರು.

'ಜನಸೇವಕ’ ಕಾರ್ಯಕ್ರಮದ ಬಗ್ಗೆ ಜನಜಾಗೃತಿ ಮೂಡಿಸಲು ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೂ ಜನಸೇವಕ ಕೈಪಿಡಿಯನ್ನು ವಿತರಿಸಲಾಗುವುದು. ಇದರ ಮೂಲಕ ಜನರು ತಮಗೆ ಅಗತ್ಯವಿರುವ ಸೇವೆಗಳನ್ನು ನಿಗದಿತ ಶುಲ್ಕ ಭರಿಸಿ, ಮನೆ ಬಾಗಿಲಲ್ಲೇ ಪಡೆದುಕೊಳ್ಳಬಹುದು ಎಂದು ಹೇಳಿದರು.

ಮನೆ ಬಾಗಿಲಿಗೆ ಸೇವೆ : ಜನರು ಯಾವ ಸೇವೆ ತಮಗೆ ಅಗತ್ಯವಿದೆ ಎಂದು ತಿಳಿಸಿದರೆ ನುರಿತ 'ಜನಸೇವಕ’ ಸ್ವಯಂ ಸೇವಕರು ಮನೆ ಬಾಗಿಲಿಗೆ ಬಂದು, ಆಯಾ ಸೇವೆಗೆ ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಂಡು ನಿಗದಿತ ದಿನಗಳಲ್ಲಿ ಆ ಸೇವೆಗಳನ್ನು ತಲುಪಿಸಲಿದ್ದಾರೆ.

ಇದರಿಂದ ಜನರು ಅನಗತ್ಯವಾಗಿ ಕಚೇರಿಗೆ ಅಲೆಯುವುದು, ಮಧ್ಯವರ್ತಿಗಳಿಂದ ವಂಚನೆಗೆ ಒಳಗಾಗುವುದು ಮತ್ತು ಲಂಚ ಕೊಡುವುದು ತಪ್ಪುತ್ತದೆ ಎಂದು ತಿಳಿಸಿದರು. 'ಜನಸೇವಕ’ ಮೂಲಕ ಪಡೆಯುವ ಸೇವೆಗಳಿಗೆ ಜನರು ನಿಗದಿತ ಸರ್ಕಾರಿ ಶುಲ್ಕ ಮತ್ತು ಜನಸೇವಕ ಶುಲ್ಕಗಳನ್ನು ನಿಗದಿತ ಖಾತೆಗಳಿಗೆ ಡಿಜಿಟಲ್ ಪಾವತಿ ಮಾಡಿದರೆ ಸಾಕು ಎಂದು ಸಚಿವರು ವಿವರಿಸಿದರು.

ಜನಸೇವಕ ಕೈಪಿಡಿ ವಿತರಣೆ : ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮನೆ ಮನೆಗೂ ಕ್ಷೇತ್ರದ ಶಾಸಕ ಮತ್ತು ಸಚಿವರಾದ ಅಶ್ವತ್ಥ್‌ ನಾರಾಯಣ ಅವರ ಕಚೇರಿಯಿಂದ ಜನಸೇವಕ ಸಮಗ್ರ ಮಾಹಿತಿ ಕೈಪಿಡಿಯನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಇಂದು ಇದಕ್ಕೂ ಚಾಲನೆ ನೀಡಲಾಯಿತು.

ಈ ಕೈಪಿಡಿಯಲ್ಲಿ ಸೇವೆಗಳ ವಿವರಗಳು, ಅವುಗಳಿಗೆ ಸರ್ಕಾರ ನಿಗದಿ ಪಡಿಸಿರುವ ಶುಲ್ಕ, ಜನಸೇವಕ ಶುಲ್ಕ, ಸೇವೆಗೆ ಬೇಕಾಗುವ ದಾಖಲಾತಿಗಳ ವಿವರ, ಎಷ್ಟು ದಿನಗಳಲ್ಲಿ ಸೇವೆ ಒದಗಿಸಲಾಗುವುದು ಮತ್ತು ಸಂಬಂಧಿಸಿದ ಜನಸೇವಕರ/ಅಧಿಕಾರಿಗಳ ದೂರವಾಣಿ ಸಂಖ್ಯೆ ಎಲ್ಲವನ್ನೂ ನೀಡಲಾಗಿದೆ.

ಈ ಸೇವೆಗಳಲ್ಲಿ ಆಧಾರ್ ಕಾರ್ಡ್ ಸಂಬಂಧಿತ ಸೇವೆಗಳು, ಆರೋಗ್ಯ ಹೆಲ್ತ್ ಕಾರ್ಡ್, ಬಯೋಮೆಟ್ರಿಕ್ ಪರಿಷ್ಕರಣೆ, ಆದಾಯ ಮತ್ತು ಜಾತಿ ಪ್ರಮಾಣಪತ್ರ, ಭೂ ಹಿಡುವಳಿ ಪ್ರಮಾಣಪತ್ರ ಮತ್ತು ಬೋನಾಫೈಡ್ ಪ್ರಮಾಣಪತ್ರ ಮುಂತಾದವು ಸೇರಿವೆ. ಈ ಸೇವೆಗಳನ್ನೆಲ್ಲ ಕನಿಷ್ಠ ಒಂದು ದಿನದಿಂದ ಹಿಡಿದು ಗರಿಷ್ಠ 21 ದಿನಗಳಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.

79 ಸೇವೆಗಳಿಗೆ 79 ಬೂತ್ ಸ್ಥಾಪನೆ : ಸಂಗೊಳ್ಳಿ ರಾಯಣ್ಣ ಉದ್ಯಾನದಲ್ಲಿ 'ಜನಸೇವಕ' ಉಪಕ್ರಮದಡಿ ಒದಗಿಸಲಾಗುವ ಎಲ್ಲ 79 ಸೇವೆಗಳಿಗೆ ಸಂಬಂಧಿಸಿದಂತೆಯೂ ತಲಾ ಒಂದೊಂದು ಬೂತ್ ತೆರೆಯಲಾಗಿತ್ತು. ಇವುಗಳ ಮುಂದೆ ನೂರಾರು ಜನರು ಸರದಿಯಲ್ಲಿ ನಿಂತು ತಮಗೆ ಬೇಕಾದ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಚಿವರು 30 ನಾಗರಿಕರಿಗೆ ಹಲವು ಸೇವೆಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಇದೇ ಮಾದರಿಯನ್ನು ಕ್ಷೇತ್ರದ ಎಲ್ಲಾ ವಾರ್ಡುಗಳಲ್ಲೂ ಅನುಸರಿಸಲಾಗುತ್ತಿದೆ ಎಂದು ಅಶ್ವತ್ಥ್‌ ನಾರಾಯಣ ತಿಳಿಸಿದರು.

ಇದನ್ನೂ ಓದಿ: ಮನೆಗಳ್ಳತನ ಮಾಡಿದ್ದ ಸೆಕ್ಯುರಿಟಿ ಗಾರ್ಡ್‌ ಬಂಧನ : 9 ಲಕ್ಷ ಮೌಲ್ಯದ ಚಿನ್ನಾಭರಣ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.