ಬೆಂಗಳೂರು: ಪಿಎಸ್ಐ ಪರೀಕ್ಷೆ ಅಕ್ರಮ ವಿಚಾರವಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅಕ್ರಮದ ಬಗ್ಗೆ ಪ್ರಭು ಚವ್ಹಾಣ್ ಪತ್ರ ಬರೆದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ?. ಸುಶೀಲ್ ನಮೋಶಿ ಧ್ವನಿ ಎತ್ತಿದ್ರು, ಆಗ ಏಕೆ ಕ್ರಮ ಜರುಗಿಸಲಿಲ್ಲ?. ಪರಿಷತ್ ಸದಸ್ಯ ಸಂಕನೂರು ಪತ್ರ ಬರೆದ್ರೂ ಯಾಕೆ ತನಿಖೆ ಮಾಡಲಿಲ್ಲ?. ಅಲಿಬಾಬಾ ಚಾಲೀಸ್ ಚೋರ್ ಸಮರ್ಥನೆ ಮಾಡಬೇಕಲ್ವಾ? ಅದಕ್ಕೆ ಸಮರ್ಥನೆ ಮಾಡಿಕೊಳ್ತಿದ್ದಾರೆ ಎಂದು ಕಿಡಿ ಕಾರಿದರು.
ಸಿಐಡಿಗೆ ಇಂದು ಉತ್ತರ ಕೊಡ್ತೇನೆ. ಆ ನಂತರ ಏನು, ಎತ್ತ ಅಂತ ಹೇಳ್ತೇನೆ. ಮಧ್ಯವರ್ತಿಗಳು ಯಾರ ಪರ ಕೆಲಸ ಮಾಡಿದ್ರು?. 80-90 ಕೋಟಿ ಕಲೆಕ್ಷನ್ ಆಗುತ್ತಿತ್ತು. ಈ ಹಣ ಎಲ್ಲಿಗೆ ಮುಟ್ಟುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಕೇಂದ್ರ ಸರ್ಕಾರ ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೆಚ್ಚು ಜನ ಕೋವಿಡ್ ಪರಿಹಾರಕ್ಕಾಗಿ ಅರ್ಜಿ ಹಾಕಿದ್ದರು. ಸರ್ಕಾರ ಎಷ್ಟು ಪರಿಹಾರ ಕೊಟ್ಟಿದೆ?. ಗಂಗಾ ನದಿಯಲ್ಲಿ ಹೆಣಗಳು ತೇಲಿದ್ವು. ಯುಪಿ, ಬಿಹಾರದಲ್ಲಿ ಸರಿಯಾದ ಸಾವಿನ ಸಂಖ್ಯೆ ಕೊಡಲಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಡಬ್ಲ್ಯುಹೆಚ್ ಒ ವರದಿ ಸುಳ್ಳು ಅಂತ ಹೇಳ್ತಾರೆ. ನಾವು ಸಂಸತ್ತಿನಲ್ಲೂ ಪ್ರಸ್ತಾಪಿಸಿದೆವು. ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆವು. ಕೊರೊನಾ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ತಪ್ಪಿತಸ್ಥರು ಮುಟ್ಟಿ ನೋಡ್ಕೋಬೇಕು, ಹಾಗೆ ಮಾಡ್ತೀವಿ: ಸಚಿವ ಆರಗ ಜ್ಞಾನೇಂದ್ರ