ETV Bharat / city

ಸಿಎಂ ಭೇಟಿಗೆ ದೇವರಿಗೂ ಸಿಗದ ಅವಕಾಶ: ಬೊಮ್ಮಾಯಿ ನಿವಾಸದ ಮುಂದೆ ಪ್ರಹಸನ!

ಪುರೋಹಿತರು ಸಿಎಂ ಭೇಟಿಗೆ ಜನರು ಅನುಮತಿ ಪಡೆದುಕೊಂಡು ಬರಬೇಕು ಆದರೆ ದೇವರು ಯಾಕೆ ಅನುಮತಿ ಪಡೆಯಬೇಕು, ದೇವರ ಅಪ್ಪಣೆಯಂತೆ ವಿಗ್ರಹದೊಂದಿಗೆ ಬಂದಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಸಿಎಂ ಭೇಟಿಗೆ ದೇವಿ ವಿಗ್ರಹದ ಜೊತೆ ಬಂದ ಪುರೋಹಿತರು

author img

By

Published : Aug 25, 2021, 4:22 AM IST

ಬೆಂಗಳೂರು: ಸಿಎಂ ಮನೆಗೆ ಹೋಗಬೇಕು ಎಂದು ದೇವಿ ಸೂಚನೆಯಾಗಿದೆ ಎಂದು ದೇವರ ವಿಗ್ರಹದೊಂದಿಗೆ ಪುರೋಹಿತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ್ದರು. ಆದ್ರೆ ಸಿಎಂ ನಿವಾಸದೊಳಗೆ ಬಿಡದ ಹಿನ್ನೆಲೆ ಬೀದಿಯಲ್ಲೇ ದೇವರ ವಿಗ್ರಹದೊಂದಿಗೆ ಪುರೋಹಿತರು ಕಾದು ಕಾದು ಸಾಕಾಗಿ ವಾಪಸ್ಸಾಗುವಂತಾಯಿತು.

ಕೆಂಗೇರಿ ಬಳಿಯ ಹೆಚ್.ಗೊಲ್ಲಹಳ್ಳಿಯ ಕನಕದುರ್ಗಾಪರಮೇಶ್ವರಿ ದೇವಸ್ಥಾನದಿಂದ ಆರ್.ಟಿ ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಪುರೋಹಿತರು ಆಗಮಿಸಿದರು. ಸಿಎಂ ಮನೆಗೆ ಬರಬೇಕೇಂದು ದೇವಿ ಸೂಚಿಸಿದ್ದು, ಅದರಂತೆ ಕನಕದುರ್ಗಾಪರಮೇಶ್ವರಿ ವಿಗ್ರಹವನ್ನು ದೇವಸ್ಥಾನ ಆಡಳಿತ ಮಂಡಳಿ ಪುರೋಹಿತರು ತಂದಿದ್ದರು. ದೇವಿ ಆದೇಶದಂತೆ ಬಂದಿದ್ದೇವೆ ಎಂದ ಪುರೋಹಿತರು, ಸಿಎಂ ಬೊಮ್ಮಾಯಿಗೆ ದೇವಿ ವಿಗ್ರಹ ನೀಡಲು ಬಂದಿದ್ದೇವೆ. ನಮ್ಮನ್ನು ಒಳಬಿಡಿ ಎಂದು ಸಿಎಂ ನಿವಾಸದ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿದರು.

ಸಿಎಂ ಭೇಟಿಗೆ ದೇವರಿಗೂ ಸಿಗದ ಅವಕಾಶ: ಬೊಮ್ಮಾಯಿ ನಿವಾಸದ ಮುಂದೆ ಪ್ರಹಸನ!
ಆದರೆ ಇದಕ್ಕೆ ಸಿಎಂ ನಿವಾಸದ ಸಿಬ್ಬಂದಿ ಅವಕಾಶ ನೀಡಲಿಲ್ಲ, ಪೂರ್ವಾನುಮತಿ ಇಲ್ಲದೆ ಬಂದಿದ್ದೀರಿ ಹಾಗಾಗಿ ಒಳಬಿಡಲು ಸಾಧ್ಯವಿಲ್ಲ ಎಂದು ಸಿಎಂ ನಿವಾಸ ಪ್ರವೇಶಕ್ಕೆ ಅನುಮತಿ ನಿರಾಕರಿಸಿದರು. ಸಿಎಂ ಬೊಮ್ಮಾಯಿ ಅವರು ಯಾವುದೇ ವಿಗ್ರಹ ಸ್ವೀಕಾರಕ್ಕೆ ಸಮ್ಮತಿಸಿಲ್ಲ ಎಂದು ಸ್ಪಷ್ಟಪಡಿಸಿ ನಿವಾಸದ ಗೇಟ್ ಬಳಿಯಲ್ಲೇ ತಡೆದು ನಿಲ್ಲಿಸಿದರು. ಇದರಿಂದಾಗಿ ರಸ್ತೆಯಲ್ಲೇ ದೇವರ ವಿಗ್ರಹ ಹಿಡಿದು ನಿಂತ ಆಡಳಿತ ಮಂಡಳಿ ಸದಸ್ಯರು ಸಿಎಂ ಭೇಟಿಗೆ ಅವಕಾಶ ಕೇಳಿ ಕೇಳಿ ಕಡೆಗೆ ಅನುಮತಿ ಸಿಗದೆ ನಿರಾಶರಾಗಿ ವಾಪಸ್ಸು ತೆರಳಿದರು‌.ದೇವರು ಅನುಮತಿ ಪಡಿಬೇಕಾ?:ಸಿಎಂಗೆ ಮಾಹಿತಿ ನೀಡಿ ಬಂದಿದ್ದೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪುರೋಹಿತರು ಸಿಎಂ ಭೇಟಿಗೆ ಜನರು ಅನುಮತಿ ಪಡೆದುಕೊಂಡು ಬರಬೇಕು ಆದರೆ ದೇವರು ಯಾಕೆ ಅನುಮತಿ ಪಡೆಯಬೇಕು, ದೇವರ ಅಪ್ಪಣೆಯಂತೆ ವಿಗ್ರಹದೊಂದಿಗೆ ಬಂದಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.