ETV Bharat / city

ರಾಷ್ಟ್ರಪತಿ ಚುನಾವಣೆ: ಕರ್ನಾಟಕ ಶಾಸಕನ ಮತ ಮೌಲ್ಯ 131; ಲೆಕ್ಕಾಚಾರ ಹೀಗಿದೆ.. - ರಾಷ್ಟ್ರಪತಿ ಚುನಾವಣೆ ಮತ ಲೆಕ್ಕಾಚಾರ

ರಾಷ್ಟ್ರಪತಿ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಚುನಾವಣೆಯ ಸ್ವಾರಸ್ಯಕರ ಮತ ಲೆಕ್ಕಾಚಾರದ ಮಾಹಿತಿ ಇಲ್ಲಿದೆ.

Rashtrapati Bhavan
ರಾಷ್ಟ್ರಪತಿ ಭವನ
author img

By

Published : Jul 3, 2022, 6:54 AM IST

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯ ಕಣದಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಪ್ರಮುಖರು. ಜುಲೈ 18ರಂದು ನಡೆಯಲಿರುವ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಮತಗಳ ಬಲಾಬಲ ನೋಡಿದರೆ ಎನ್​ಡಿಎ ಅಭ್ಯರ್ಥಿ ಗೆಲುವು ಬಹುತೇಕ ಖಚಿತ.

ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಯನ್ನು ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಸದಸ್ಯರು ಮತದಾನ ಮಾಡಿ ಆಯ್ಕೆ ಮಾಡುವರು. ವಿಧಾನಪರಿಷತ್ ಸದಸ್ಯರು ಹಾಗು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ. ರಹಸ್ಯ ಮತದಾನ ನಡೆಯುತ್ತದೆ. ಈ ಚುನಾವಣೆಯಲ್ಲಿ ಮತ ಚಲಾಯಿಸುವ ಶಾಸಕರ ಮತಗಳ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನ. ಆದರೆ ಸಂಸದರ ಮತಗಳು ಮೌಲ್ಯ ಸಮಾನವಾಗಿರುತ್ತದೆ. ಆಯಾ ರಾಜ್ಯದ ಜನಸಂಖ್ಯೆಯ ಆಧಾರದಲ್ಲಿ ಆಯಾ ರಾಜ್ಯಗಳ ಶಾಸಕರ ಮತ ಮೌಲ್ಯ ನಿಗದಿಯಾಗುತ್ತದೆ.

ಕರ್ನಾಟಕದ ಶಾಸಕನ ಮತಮೌಲ್ಯ 131: ರಾಜ್ಯದಲ್ಲಿ 224 ಶಾಸಕರಿದ್ದಾರೆ. ಒಟ್ಟು ಮತಮೌಲ್ಯ 29,344. 1971ರ ಜನಗಣತಿಯ ಆಧಾರದಂತೆ ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಮತಮೌಲ್ಯ ಸಿಗುತ್ತದೆ. ಅದರಂತೆ, ರಾಜ್ಯ ಶಾಸಕರ ಮತಮೌಲ್ಯ 131 ಎಂದು ಕರ್ನಾಟಕ ರಾಜ್ಯದ ಚುನಾವಣಾಧಿಕಾರಿ ವಿಶಾಲಾಕ್ಷಿ ತಿಳಿಸಿದರು.

ಸಂಸದರ ಮತಮೌಲ್ಯ 700: ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಪ್ರಸ್ತುತ 776 ಸಂಸದರಿದ್ದಾರೆ. ಪ್ರತಿ ಸಂಸದರ ಮತಮೌಲ್ಯ 700. ಈ ಮತಮೌಲ್ಯ ರಾಜ್ಯದ ಎಲ್ಲಾ ಸಂಸದರಿಗೆ ಸಮಾನ. ಕಳೆದ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಮತ ಮೌಲ್ಯ 708 ಆಗಿತ್ತು. ಈ ಬಾರಿ ಅದು 700ಕ್ಕೆ ಇಳಿಕೆಯಾಗಿದೆ. ಸಂಸದರ ಮತಮೌಲ್ಯವನ್ನೂ ಜನಸಂಖ್ಯೆಯ ಆಧಾರದಲ್ಲಿಯೇ ಲೆಕ್ಕ ಹಾಕಲಾಗುತ್ತದೆ.

ರಾಷ್ಟ್ರಪತಿ ಚುನಾವಣೆಯ ಒಟ್ಟು ಮತಮೌಲ್ಯ: ಒಟ್ಟು ಸಂಸದರ ಸಂಖ್ಯೆ 776 (ಲೋಕಸಭೆ ಸಂಸದರು 543+ರಾಜ್ಯಸಭೆ ಸಂಸದರು 233). ಅದರಂತೆ ಒಟ್ಟು ಸಂಸದರ ಮತಮೌಲ್ಯ 700X776= 5,43,200. ಒಟ್ಟು ಮತದಾರರ ಸಂಖ್ಯೆ ಶಾಸಕರು 4033 + ಸಂಸದರು 776 = 4809 ಆಗಿದೆ. ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿನ ಒಟ್ಟು ಮತದಾರರ ಮತಮೌಲ್ಯ 10,86,431 ಆಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಯಶವಂತ ಸಿನ್ಹಾ.. ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.