ಬೆಂಗಳೂರು : ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನ ನಾಳೆ ರಾಜ್ಯಾದ್ಯಂತ ನಡೆಯಲಿದೆ. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ.
ಡಿ.22 ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆದಿದೆ. ನಾಳೆ ಎರಡನೇ ಹಂತದ ಮತದಾನ ನಡೆಯಲಿದ್ದು, ಇದಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣೆ ನಡೆಸಲು ಅಗತ್ಯ ಮುನ್ನೆಚ್ಚರಿಕೆ, ಮುಂಜಾಗ್ರತೆ ಹಾಗೂ ಅಗತ್ಯ ಸಿದ್ಧತೆಯನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ.
ಡಿಸೆಂಬರ್ 27ರಂದು ನಡೆಯುವ ಎರಡನೇ ಹಂತದ ಮತದಾನ ಒಟ್ಟು 109 ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ. 2,709 ಗ್ರಾಮ ಪಂಚಾಯತ್ನ 43,291 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. 1,47,649 ಒಟ್ಟು ನಾಮಪತ್ರಗಳು ಸಲ್ಲಿಕೆಯಾಗಿದ್ದು, 216 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿವೆ.
ಕ್ರಮಬದ್ಧವಾಗಿ ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ 1,39,546, ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳ ಸಂಖ್ಯೆ 34,115 ಮತ್ತು ಅವಿರೋಧವಾಗಿ 3697 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಚುನಾವಣೆ ನಡೆಯಲಿರುವ ಸ್ಥಾನಗಳ ಸಂಖ್ಯೆ 39, 378 ಹಾಗೂ ಅಂತಿಮವಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ 1,05,431 ಆಗಿದೆ.
ಜಿಲ್ಲಾವಾರು ಹೆಚ್ಚಿನ ಅಂಕಿ ಅಂಶಗಳ ಮಾಹಿತಿಯನ್ನು ಆಯೋಗದ ಅಧಿಕೃತ www.karsec.gov.in ನಲ್ಲಿ ಪಡೆಯಬಹುದಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ನಾಳೆ ಮತದಾನ ನಡೆಯುವ ಜಿಲ್ಲೆ:
ಬೆಂಗಳೂರು ನಗರ
* ಬೆಂಗಳೂರು ದಕ್ಷಿಣ
* ಬೆಂಗಳೂರು ಪೂರ್ವ
* ಆನೇಕಲ್
ಬೆಂಗಳೂರು ಗ್ರಾಮಾಂತರ
* ದೊಡ್ಡಬಳ್ಳಾಪುರ
* ದೇವನಹಳ್ಳಿ
ರಾಮನಗರ
* ಚನ್ನಪಟ್ಟಣ
* ಮಾಗಡಿ
ಚಿತ್ರದುರ್ಗ
* ಹಿರಿಯೂರು
* ಚಳ್ಳಕೆರೆ
* ಮೊಳಕಾಲ್ಮೂರು
ದಾವಣಗೆರೆ
* ಹರಿಹರ
* ಚನ್ನಗಿರಿ
* ನ್ಯಾಮತಿ
ಕೋಲಾರ
* ಮುಳಬಾಗಿಲು
* ಬಂಗಾರಪೇಟೆ
* ಕೆಜಿಎಫ್
ಚಿಕ್ಕಬಳ್ಳಾಪುರ
* ಗೌರಿಬಿದನೂರು
* ಗುಡಿಬಂಡೆ
ಶಿವಮೊಗ್ಗ
* ಸಾಗರ
* ಶಿಕಾರಿಪುರ
* ಸೊರಬ
* ಹೊಸನಗರ
ತುಮಕೂರು
* ಮಧುಗಿರಿ
* ಶಿರಾ
* ತಿಪಟೂರು
* ತುರುವೇಕೆರೆ
* ಚಿಕ್ಕನಾಯಕನಹಳ್ಳಿ
ಮೈಸೂರು
* ಮೈಸೂರು
* ನಂಜನಗೂಡು
* ಟಿ ನರಸೀಪುರ
ದಕ್ಷಿಣ ಕನ್ನಡ
* ಬೆಳ್ತಂಗಡಿ
* ಪುತ್ತೂರು
* ಸುಳ್ಯ
* ಕಡಬ
ಉಡುಪಿ
* ಕುಂದಾಪುರ
* ಕಾರ್ಕಳ
* ಕಾಪು
ಕೊಡಗು
* ವಿರಾಜಪೇಟೆ
ಹಾಸನ
* ಅರಸೀಕೆರೆ
* ಬೇಲೂರು
* ಆಲೂರು
* ಹೊಳೆನರಸೀಪುರ
ಮಂಡ್ಯ
* ಪಾಂಡವಪುರ
* ಶ್ರೀರಂಗಪಟ್ಟಣ
* ಕೃಷ್ಣರಾಜಪೇಟೆ
* ನಾಗಮಂಗಲ
ಚಾಮರಾಜನಗರ
* ಯಳಂದೂರು
* ಕೊಳ್ಳೇಗಾಲ
* ಹನೂರು
ಬೆಳಗಾವಿ
* ಸವದತ್ತಿ
* ರಾಮದುರ್ಗ
* ಚಿಕ್ಕೋಡಿ
* ನಿಪ್ಪಾಣಿ
* ಅಥಣಿ
* ಕಾಗವಾಡ
* ರಾಯಭಾಗ
ವಿಜಯಪುರ
* ಇಂಡಿ
* ಚಡಚಣ
* ಸಿಂದಗಿ
* ದೇವರ ಹಿಪ್ಪರಗಿ
ಬಾಗಲಕೋಟೆ
* ಬಾಗಲಕೋಟೆ
* ಹುನಗುಂದ
* ಬಾದಾಮಿ
* ಇಳಕಲ್
* ಗುಳೇದಗುಡ್ಡ
ಧಾರವಾಡ
* ಹುಬ್ಬಳ್ಳಿ
* ಕುಂದಗೋಳ
* ನವಲಗುಂದ
* ಅಣ್ಣಿಗೇರಿ
ಗದಗ
* ಮುಂಡರಗಿ
* ರೋಣ
* ಗಜೇಂದ್ರಗಡ
* ನರಗುಂದ
ಹಾವೇರಿ
* ಹಾನಗಲ್
* ಶಿಗ್ಗಾವ್
* ಸವಣೂರು
* ಬ್ಯಾಡಗಿ
ಉತ್ತರ ಕನ್ನಡ
* ಶಿರಸಿ
* ಸಿದ್ದಾಪುರ
* ಯಲ್ಲಾಪುರ
* ಮುಂಡಗೋಡ
* ಹಳಿಯಾಳ
* ದಾಂಡೇಲಿ
* ಜೋಯಿಡಾ
ಕಲಬುರಗಿ
* ಯಡ್ರಾಮಿ
* ಜೇವರ್ಗಿ
* ಚಿತ್ತಾಪುರ
* ಚಿಂಚೋಳಿ
* ಸೇಡಂ
ಬೀದರ್
* ಬೀದರ್
* ಔರಾದ್
* ಕಮಲನಗರ
ಬಳ್ಳಾರಿ
* ಸಂಡೂರು
* ಹಗರಿಬೊಮ್ಮನಹಳ್ಳಿ
* ಕೂಡ್ಲಿಗಿ
* ಕೊಟ್ಟೂರು
* ಹೂವಿನಹಡಗಲಿ
* ಹರಪನಹಳ್ಳಿ
ರಾಯಚೂರು
* ಲಿಂಗಸಗೂರು
* ಮಸ್ಕಿ
* ಸಿಂಧನೂರು
ಯಾದಗಿರಿ
* ಯಾದಗಿರಿ
* ಗುರುಮಟಕಲ್
* ವಡಗೇರಾ
ಕೊಪ್ಪಳ
* ಕುಷ್ಟಗಿ
* ಕಾರಟಗಿ
* ಕನಕಗಿರಿ ಹಾಗೂ ಗಂಗಾವತಿಯಲ್ಲಿ ನಾಳೆ ಮತದಾನ ನಡೆಯಲಿದೆ.