ETV Bharat / city

ಉಪವಾಸ ಸತ್ಯಾಗ್ರಹ ಕೈಬಿಟ್ಟ ಪ್ರಸನ್ನ, ಹಳ್ಳಿಗಳಲ್ಲಿ ಹೋರಾಟ ಚುರುಕುಗೊಳಿಸಲು ತೀರ್ಮಾನ

ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಹಾಗೂ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ.

prasanna-abandoned-fasting
author img

By

Published : Oct 11, 2019, 11:33 PM IST

ಬೆಂಗಳೂರು: ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ಅಕ್ಟೋಬರ್ 5ರಿಂದ ಸಾಮಾಜಿಕ ಹೋರಾಟಗಾರ ಹಾಗೂ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ಇಂದು ಅಂತ್ಯಗೊಳಿಸಿದ್ದಾರೆ.

ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಹುಟ್ಟುಹಬ್ಬ ಆಚರಿಸಿ ಎಳನೀರು ಸೇವಿಸುವ ಮೂಲಕ ಉಪವಾಸ ಕೈಬಿಟ್ಟರು.

ಉಪವಾಸ ಸತ್ಯಾಗ್ರಹ ಕೈಬಿಟ್ಟ ಪ್ರಸನ್ನ

ನಿನ್ನೆ (ಗುರುವಾರ) ಸಂಜೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಕೇಂದ್ರ ಸರ್ಕಾರದ ವರಿಷ್ಠರೊಂದಿಗೆ ಸಭೆ ಕರೆಯುವ ಆಶ್ವಾಸನೆ ನೀಡಿದ್ದರು. ಈ ಕುರಿತು ಗ್ರಾಮ ಸೇವಾ ಸಂಘದ ಸದಸ್ಯರೊಂದಿಗೆ ಚರ್ಚಿಸಿ ಹೋರಾಟದ ಮುಂದಿನ ರೂಪುರೇಷೆಗಳನ್ನು ಸಿದ್ದಪಡಿಸಿದ್ದೇನೆ. ಪ್ರಸ್ತುತ ಉಪವಾಸವನ್ನು ಕೈಬಿಟ್ಟಿದ್ದೇನೆ. ಆದರೆ ಸತ್ಯಾಗ್ರಹವನ್ನು ಸಂಘವು ಮುಂದಿನ ದಿನಗಳಲ್ಲಿ ಚುರುಕುಗೊಳಿಸಲಾಗುವುದು ಎಂದು ಪ್ರಸನ್ನ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಸನ್ನ ಅವರು ದೇಶದ ಗಮನ ಸೆಳೆದಿದ್ದಾರೆ. ಅವರು ಜೀವಕ್ಕೆ ಬೆಲೆ ಕೊಡುವವರಲ್ಲ. ತತ್ವಕ್ಕೆ ಬೆಲೆ ಕೊಡುವವರು. ಕೇಂದ್ರ ಹಾಗೂ ರಾಜ್ಯ ಸಚಿವರು ಬೇರೆಡೆ ಕೊಟ್ಟಂತೆ ಇಲ್ಲಿ ಸುಳ್ಳು ಆಶ್ವಾಸನೆ ಕೊಡಬಾರದು. ತಮ್ಮ ಸ್ವಾರ್ಥಕ್ಕಲ್ಲದೆ ಸಮಾಜಕ್ಕಾಗಿ ಉಪವಾಸ ಕೈಗೊಂಡ ಈ ಸತ್ಯಾಗ್ರಹದ ಬೇಡಿಕೆಯನ್ನು ತಿಂಗಳಲ್ಲ, ವಾರದೊಳಗೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡ ವೈಎಸ್​ವಿ ದತ್ತಾ ಮಾತನಾಡಿ, ಉಪವಾಸ ಕುಳಿತು ನಾಲ್ಕು ದಿನಗಳಾದರೂ ಸರ್ಕಾರಿ ವೈದ್ಯರು ಪ್ರಸನ್ನ ಅವರ ಬಿಪಿ, ಶುಗರ್ ಪರೀಕ್ಷಿಸಲು ಬಂದಿಲ್ಲ. ಇದು ರಾಜ್ಯ ಸರ್ಕಾರದ ನಡೆಯನ್ನು ತೋರಿಸುತ್ತದೆ ಎಂದರು.

Intro:ಉಪವಾಸ ಸತ್ಯಾಗ್ರಹ ಕೈಬಿಟ್ಟ ಪ್ರಸನ್ನ - ಹಳ್ಳಿಹಳ್ಳಿಗಳಲ್ಲಿ ಹೋರಾಟ ಚುರುಕುಗೊಳಿಸಲು ತೀರ್ಮಾನ

ಬೆಂಗಳೂರು- ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ, ಅಕ್ಟೋಬರ್ ಐದನೇ ತಾರೀಕಿನಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಗ್ರಾಮ ಸೇವಾ ಸಂಘದ ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡು ಉಪವಾಸವನ್ನು ಅಂತ್ಯಗೊಳಿಸಿದ್ದಾರೆ.
ಗಾಂಧೀ ಭವನದ ಬಳಿ ಇಂದು ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಹುಟ್ಟುಹಬ್ಬ ಆಚರಿಸಿ
ಸರ್ವೋದಯ ಕಾರ್ಯಕರ್ತರಾದ ಸರೋಜಮ್ಮ ಎಂ.ಚಂದ್ರಶೇಖರ್ ಅವರ ಕೈಯಿಂದ ಎಳನೀರು ಸೇವಿಸುವ ಮೂಲಕ ಉಪವಾಸ ಕೈಬಿಟ್ಟರು.
ನಿನ್ನೆ ಸಂಜೆ ಕೇಂದ್ರ ಸಚಿವರಾ ಡಿ ವಿ ಸದಾನಂದ ಗೌಡ, ಕೇಂದ್ರ ಸರ್ಕಾರದ ವರಿಷ್ಠರೊಂದಿಗೆ ಸಭೆ ಕರೆಯುವ ಆಶ್ವಾಸನೆ ನೀಡಿದ್ದರು. ಈ ಕುರಿತು ಗ್ರಾಮ ಸೇವಾ ಸಂಘದ ಸದಸ್ಯರು ಚರ್ಚೆ ಮಾಡಿ ಹೋರಾಟದ ಮುಂದಿನ ರೂಪುರೇಷೆ ಗಳನ್ನು ನಿರ್ಧಾರ ಮಾಡಿದ್ದಾರೆ. ಉಪವಾಸವನ್ನು ಕೈಬಿಡಲಿದ್ದಾರೆ, ಆದರೆ ಸತ್ಯಾಗ್ರಹವನ್ನು ಸಂಘವು ಮುಂದಿನ ದಿನಗಳಲ್ಲಿ ಚುರುಕುಗೊಳಿಸಲಾಗುವುದು ಎಂದು ಪ್ರಸನ್ನ ಹೆಗ್ಗೋಡು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸ್ಪೀಕರ್ ಬಸವರಾಜ ಹೊರಟ್ಟಿಯವರು ಮಾತನಾಡಿ, ಪ್ರಸನ್ನ ಅವರು ಇಡೀ ದೇಶದ ಗಮನ ಸೆಳೆದಿದ್ದಾರೆ. ಪ್ರಸನ್ನ ಅವರು ಜೀವಕ್ಕೆ ಬೆಲೆ ಕೊಡುವವರಲ್ಲ, ತತ್ವಕ್ಕೆ ಬೆಲೆ ಕೊಡುವವರು. ಕೇಂದ್ರ ಹಾಗೂ, ರಾಜ್ಯ ಸಚಿವರು ಬೇರೆ ಎಲ್ಲೆಡೆ ಕೊಟ್ಟ ಆಶ್ವಾಸನೆಯಂತೆ ಇಲ್ಲಿ ಕೊಡಬಾರದು. ಸ್ವಾರ್ಥಕ್ಕಲ್ಲದೆ, ಇಡೀ ಸಮಾಜಕ್ಕಾಗಿ ಉಪವಾಸ ಕೈಗೊಂಡ ಈ ಸತ್ಯಾಗ್ರಹದ ಬೇಡಿಕೆಯನ್ನು ಒಂದು ತಿಂಗಳಲ್ಲ, ಒಂದು ವಾರದೊಳಗೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ, ಪ್ರಸನ್ನ ಅವರು ಉಪವಾಸ ಕುಳಿತು ನಾಲ್ಕು ದಿನಗಳಾದರೂ ಸರ್ಕಾರಿ ಡಾಕ್ಟರ್, ಪ್ರಸನ್ನ ಅವರ ಬಿಪಿ , ಶುಗರ್ ಪರೀಕ್ಷಿಸಲು ಬಂದಿಲ್ಲವೆಂದರೆ ರಾಜ್ಯ ಸರ್ಕಾರದ ನಡೆ ಬಗ್ಗೆ ಬೇಸರ ಮೂಡಿಸಿದೆ.ಇದು ಬಹಳ ನೋವಿನ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ವಿಧಾನ ಪರಿಷತ್ ಮಾಜಿ ಸ್ಪೀಕರ್ ಬಸವರಾಜ್ ಹೊರಟ್ಟಿ, ಜೆಡಿಯು ನಾಡಗೌಡ, ವೀರಸಂಗಯ್ಯ, ಬಿ ಎಲ್ ಶಂಕರ್, ಕಪ್ಪಣ್ಣ, ಡಾ. ವಿಜಯಮ್ಮ, ಆರ್ಥಿಕ ತಜ್ಞ ವಿನೋದ್ ವ್ಯಾಸಲು ಭಾಗಿಯಾಗಿದ್ದರು.

ಸೌಮ್ಯಶ್ರೀ
Kn_bng_04_Prasanna_hunger_strike_7202707Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.