ಬೆಂಗಳೂರು: ಪೊಲೀಸ್ ತರಬೇತಿಗೂ ಕೊರೊನಾ ಬಿಸಿ ತಟ್ಟಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ತರಬೇತಿಯನ್ನು ಮಾ.31ರವರೆಗೂ ರದ್ದುಗೊಳಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ತರಬೇತಿ ಇಲಾಖೆ ಐಜಿಪಿ ಪಿ.ಹರಿಶೇಖರನ್ ಆದೇಶ ಹೊರಡಿಸಿದ್ದಾರೆ.
![order copy](https://etvbharatimages.akamaized.net/etvbharat/prod-images/kn-bng-03-police-trining-cancel-script-7202806_18032020182524_1803f_1584536124_550.jpg)
ರಾಜ್ಯದ ಹಲವು ಭಾಗಗಳಲ್ಲಿ ಪೊಲೀಸ್ ತರಬೇತಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಭೀತಿ ದಿನೇ ದಿನೆ ಏರತೊಡಗುತ್ತಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ತರಬೇತಿಯನ್ನು ಮಾ.31ರವರೆಗೂ ಸ್ಥಗಿತಗೊಳಿಸಲಾಗಿದೆ. ಕೊರೊನಾ ಕುರಿತು ಆರೋಗ್ಯ ಇಲಾಖೆ ಕೈಗೊಳ್ಳುವ ನಿರ್ದೇಶನಗಳನ್ನು ಅನುಸರಿಸುವಂತೆ ಆದೇಶಿಸಿದ್ದಾರೆ.