ETV Bharat / city

ನಕಲಿ ಬ್ರಾಂಡೆಡ್ ಬಟ್ಟೆಗಳ ಗೋಡೌನ್​ ಮೇಲೆ ಪೊಲೀಸರ ದಾಳಿ, ಓರ್ವನ ಸೆರೆ

ಬ್ರಾಂಡ್​ಗಳ ಹೆಸರು, ಲೋಗೋ ಬಳಸಿ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

police-raid-on-fake-branded-clothing-warehouse
ನಕಲಿ ಬ್ರಾಂಡೆಡ್ ಬಟ್ಟೆಗಳ ಗೋಡೌನ್​ ಮೇಲೆ ಪೊಲೀಸರ ದಾಳಿ, ಓರ್ವನ ಸೆರೆ
author img

By

Published : Oct 24, 2021, 12:53 AM IST

ಬೆಂಗಳೂರು: ನಕಲಿ ಬ್ರಾಂಡೆಡ್ ಶರ್ಟ್ ಉಗ್ರಾಣದ ಮೇಲೆ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಆರೋಪಿಯು ಬ್ರಾಂಡ್​ಗಳ ಹೆಸರು, ಲೋಗೋವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದನು.

ಪೋಲೊ, ರಾಲ್ಫ್ ಲಾರೆನ್ ಮತ್ತು ಲಕೋಸ್ಟ್ ಉತ್ಪನ್ನಗಳ ಹೆಸರಲ್ಲಿರುವ ಬಟ್ಟೆಗಳ ಬ್ರ್ಯಾಂಡ್ ಹೆಸರು, ಲೋಗೊ, ಡಿಸೈನ್‌ನ ಹಕ್ಕನ್ನು ರಾಹುಲ್ ಕುಮಾರ್ ಅಂಚಲಿಯಾ(38) ಎಂಬ ಆರೋಪ ದುರುಪಯೋಗಪಡಿಸಿಕೊಳ್ಳುತ್ತಿದ್ದನು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

https://etvbharatimages.akamaized.net/etvbharat/prod-images/kn-bng-08-fake-shirt-apperals-godown-raid-city-police-ka10032_23102021214514_2310f_1635005714_688.jpg
ಬ್ರಾಂಡ್​ನ ಲೋಗೋಗಳು

ಲೋಗೋಗಳನ್ನು ಬಳಸಿ ಶರ್ಟ್​ಗಳನ್ನು ಬ್ರಾಂಡೆಡ್​​ ಎಂದು ನಂಬಿಸಿ ಅತ್ಯಂತ ಕಡಿಮೆ ಬೆಲೆಗೆ ಮಾರುತ್ತಿದ್ದ ಎಂದು ತಿಳಿದುಬಂದಿದೆ. ಯುನೈಟೆಡ್ ಓವರ್‌ಸೀಸ್ ಟ್ರೇಡ್ ಮಾರ್ಕ್​​ ಕಂಪನಿ ವಕೀಲ ವಿಭೋರ್ ಸೇಥಿ ನೀಡಿದ ದೂರಿನ ಆಧಾರದ ಮೇಲೆ ನಾಯಂಡಹಳ್ಳಿಯಲ್ಲಿದ್ದ ಗೋಡೋನ್ ಮೇಲೆ ಪಶ್ಚಿಮ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

police raid on fake branded clothing warehouse
ಉಗ್ರಾಣದಲ್ಲಿ ಪತ್ತೆಯಾದ ನಕಲಿ ಬ್ರಾಂಡ್​​ನ ಸರಕುಗಳು

ಇದನ್ನೂ ಓದಿ: ಬಾರ್ಡರ್​ಗಳನ್ನು ಸೀಲ್​ ಮಾಡಿ.. ಹೊರಗಿನಿಂದ ಬರುವವರ ಮೇಲೆ ನಿಗಾ ಇಡಿ: ಬಿಪಿನ್ ರಾವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.