ETV Bharat / city

ಚಾಲನೆ ವೇಳೆ ಅಪಘಾತ ಸಂಭವಿಸಿದರೆ ಆ ಅಧಿಕಾರಿಯೇ ನೇರ ಹೊಣೆ: ಚಾಲಕನ ನೋವಿನ‌ ಪತ್ರ ವೈರಲ್

ಚಾಲಕನ ಕೆಲಸ ಆರು ಗಂಟೆಯಾದರೂ 12ರಿಂದ 14 ಗಂಟೆವರೆಗೂ ಕೆಲಸ‌ ಮಾಡಿಸಲಾಗುತ್ತಿದೆ. ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ರಜೆ‌‌ ನೀಡದೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಪೊಲೀಸ್​ ಇಲಾಖೆಯ ಚಾಲಕ ಪತ್ರ ಬರೆದಿದ್ದು ಇದು ವೈರಲ್​ ಆಗಿದೆ.

author img

By

Published : Jun 28, 2022, 12:01 PM IST

Updated : Jun 28, 2022, 3:03 PM IST

Police has written a letter- viral
ಚಾಲಕನ ನೋವಿನ‌ ಪತ್ರ ವೈರಲ್

ಬೆಂಗಳೂರು : ಕೆಲಸದ ಅವಧಿ‌ ಮೀರಿದರೂ ಹೆಚ್ಚುವರಿ ಕೆಲಸ, ರಜೆ ನೀಡುವಲ್ಲಿ ತಾರತಮ್ಯ ಹಾಗೂ ಸರ್ಕಾರಿ ವಾಹನ ದುರ್ಬಳಕೆ ಸೇರಿದಂತೆ ವಿಧಾನಸೌಧ ಭದ್ರತಾ ವಿಭಾಗದ ಪೊಲೀಸ್ ಅಧಿಕಾರಿ ವಿರುದ್ಧ ಚಾಲಕನೋರ್ವ ನೋವಿನಿಂದ‌ ಬರೆದಿರುವ ಪತ್ರ ವೈರಲ್ ಆಗಿದೆ.

ಪೊಲೀಸ್ ಇಲಾಖೆಯನ್ನು ಶಿಸ್ತಿನ ಇಲಾಖೆ ಎಂದೇ‌ ಕರೆಯಲಾಗುತ್ತದೆ. ಆದರೆ, ಕಳೆದ‌ ಮೂರು ವರ್ಷಗಳಿಂದ ವಿಧಾನಸೌಧದ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್​ ಅಧಿಕಾರಿಯೋರ್ವರು ಚಾಲಕರ ಕೆಲಸ ಆರು ಗಂಟೆಯಾದರೂ 12 ರಿಂದ 14 ಗಂಟೆಗಳ ಕಾಲ ಕೆಲಸ‌ ಮಾಡಿಸಿಕೊಳ್ಳುತ್ತಿದ್ದಾರೆ. ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ರಜೆ‌‌ ನೀಡದೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ.‌ ಆರೋಗ್ಯ ಸಮಸ್ಯೆಯಿದ್ದರೂ ರಜೆ‌ ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಕಿರಿಕಿರಿ ಮಾಡಲಾಗುತ್ತಿದೆ.‌ ರಜೆ ವಿಚಾರದಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ತಾರತಮ್ಯ ಎಸಗಲಾಗುತ್ತಿದೆ‌ ಎಂದು ಬರೆದಿರುವ ಪತ್ರ ವೈರಲ್ ಆಗುತ್ತಿದೆ.

ಮಕ್ಕಳನ್ನು ಶಾಲೆಗೆ ಬಿಡಲು ಒಂದು ವಾಹನ, ಕರ್ತವ್ಯಕ್ಕೆ‌ ಮತ್ತೊಂದು ವಾಹನ ಬಳಸುವ‌ ಮೂಲಕ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚಾಲನೆ ವೇಳೆ‌ ಏನಾದರೂ ಅಪಘಾತ ಸಂಭವಿಸಿದರೆ ಅದಕ್ಕೆ‌‌ ನೇರ ಹೊಣೆ ಅವರೇ ಆಗಿರುತ್ತಾರೆ ಎಂದು ನಾಲ್ಕು‌ ಪುಟಗಳ‌ ಪತ್ರದಲ್ಲಿ ಚಾಲಕ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಮೈಸೂರು: ವಿಷ ಕುಡಿದು ಪೊಲೀಸ್ ಠಾಣೆಗೆ ಬಂದ ಕೊಲೆ ಆರೋಪಿ!

Last Updated : Jun 28, 2022, 3:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.