ETV Bharat / city

ಸರ್ಕಾರಿ ವಾಹನ ಎಂದು ನಂಬರ್ ಪ್ಲೇಟ್ ಹಾಕಿಕೊಂಡಿದ್ದವರ ಮೇಲೆ ದಂಡ ಪ್ರಯೋಗ.. - ಕರ್ನಾಟಕ ಸರ್ಕಾರ

ಹೈಕೋರ್ಟ್ ಆದೇಶದ ಅನ್ವಯ ನಂಬರ್ ಪ್ಲೇಟ್‌ಗಳನ್ನು ಸಂಚಾರಿ ಪೊಲೀಸರು ತೆಗೆಸುತ್ತಿದ್ದಾರೆ. ಕೊರೊನಾ ಲಾಕ್​​ಡೌನ್ ಹಿನ್ನೆಲೆ ಕಾರ್ಯಾಚರಣೆ ನಡೆಸಲಾಗಿರಲಿಲ್ಲ. ಆದರೆ, ಇಂದಿನಿಂದ ಸಂಚಾರಿ ಪೊಲೀಸರು ಸ್ಪೆಷಲ್‌ ಡ್ರೈವ್ ನಡೆಸಲಿದ್ದಾರೆ..

police-fine
ದಂಡ ಪ್ರಯೋಗ
author img

By

Published : Jun 19, 2021, 7:33 PM IST

ಬೆಂಗಳೂರು : ನಗರದಲ್ಲಿ ಕೆಲ ಖಾಸಗಿ ವಾಹನಗಳಿಗೆ ಶಾಕ್ ನೀಡಿರುವ ಬೆಂಗಳೂರು ಸಂಚಾರಿ ಪೊಲೀಸರು, ಖಾಸಗಿ ವಾಹನಗಳ ಮೇಲೆ‌ ಸರ್ಕಾರಿ ವಾಹನ ಎಂದು ಅಳವಡಿಸಿಕೊಂಡ ಕಾರುಗಳ ನಂಬರ್ ಪ್ಲೇಟ್ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸ್ಪೆಷಲ್‌ ಡ್ರೈವ್ ನಡೆಸಿ 20ಕ್ಕೂ ಹೆಚ್ಚು ಕಾರುಗಳ ಮೇಲೆ ಅಳವಡಿಸಲಾಗಿದ್ದ ಕರ್ನಾಟಕ ಸರ್ಕಾರ ಎನ್ನುವ ನಂಬರ್ ಪ್ಲೇಟ್ ತೆರವುಗೊಳಿಸಿ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಅಕ್ರಮವಾಗಿ ಸರ್ಕಾರಿ ಬೋರ್ಡ್‌ಗಳನ್ನ ಹಾಕಿಕೊಂಡಿದ್ದ ವಾಹನಗಳ ಮಾಲೀಕರಿಗೆ ದಂಡ

ಓದಿ: ಇವರದ್ದು ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವಂತಾಗಿದೆ ; ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮಾಗಡಿ ರೋಡ್ ಸಂಚಾರಿ ಪೊಲೀಸರಿಂದ ತೆರವು ಕಾರ್ಯದ ವೇಳೆ ಕಾರು ಚಾಲಕರಿಗೆ 500 ರೂ. ದಂಡ ವಿಧಿಸಿ ನಂಬರ್ ಪ್ಲೇಟ್ ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ವಿಭಾಗದ ಎಲ್ಲಾ ಸಂಚಾರಿ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೈಕೋರ್ಟ್ ಆದೇಶದ ಅನ್ವಯ ನಂಬರ್ ಪ್ಲೇಟ್‌ಗಳನ್ನು ಸಂಚಾರಿ ಪೊಲೀಸರು ತೆಗೆಸುತ್ತಿದ್ದಾರೆ. ಕೊರೊನಾ ಲಾಕ್​​ಡೌನ್ ಹಿನ್ನೆಲೆ ಕಾರ್ಯಾಚರಣೆ ನಡೆಸಲಾಗಿರಲಿಲ್ಲ. ಆದರೆ, ಇಂದಿನಿಂದ ಸಂಚಾರಿ ಪೊಲೀಸರು ಸ್ಪೆಷಲ್‌ ಡ್ರೈವ್ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.