ETV Bharat / city

ನಿರ್ದಿಷ್ಟ ಸ್ಥಳಗಳಲ್ಲಿ‌ 24/7 ಹೋಟೆಲ್​​ ತೆರೆಯಲು ಬೆಂಗಳೂರು ಪೊಲೀಸರಿಂದ ಗ್ರೀನ್ ಸಿಗ್ನಲ್ - ರಾಜ್ಯ ಸರ್ಕಾರಕ್ಕೆ ವರದಿ

ನಿರ್ದಿಷ್ಟ ಸ್ಥಳಗಳಲ್ಲಿ‌ ಮಾತ್ರ 24/7 ಹೋಟೆಲ್​​ ನಡೆಸಲು ಅನುಮತಿ ನೀಡಬಹುದಾಗಿದೆ ಎಂದು ಸರ್ಕಾರಕ್ಕೆ ಬೆಂಗಳೂರು ನಗರ ಪೊಲೀಸರು ವರದಿ ಸಲ್ಲಿಸಿದ್ದಾರೆ.

bengaluru
ಬೆಂಗಳೂರು
author img

By

Published : Jun 29, 2022, 2:25 PM IST

ಬೆಂಗಳೂರು: ಸಿಲಿಕಾನ್ ಸಿಟಿಯ ಆಯ್ದ ಸ್ಥಳಗಳಲ್ಲಿ ಮಾತ್ರ 24 ಗಂಟೆಗಳ ಕಾಲ ಹೋಟೆಲ್​​ ತೆರೆಯಲು ‌ನಗರ ಪೊಲೀಸರು ಗ್ರೀನ್ ಸಿಗ್ನಲ್ ನೀಡಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ‌.

ನಗರದ ಪ್ರಮುಖ ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅನುಮತಿ ನೀಡಬಹುದಾಗಿದೆ‌. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ನಗರದ ಎಲ್ಲ ಕಡೆಗಳಲ್ಲಿ ಹೋಟೆಲ್​​, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲು ಕಷ್ಟವಾಗಲಿದೆ.

ಜನಸಂದಣಿ ಇಲ್ಲದ‌ ಪ್ರದೇಶಗಳಲ್ಲಿ ಹೋಟೆಲ್​​ ವಹಿವಾಟಿಗೆ ಅವಕಾಶ ಕೊಟ್ಟರೆ, ಲಾಂಡ್ ಆರ್ಡರ್​​​ಗೆ ಸಮಸ್ಯೆಯಾಗಲಿದೆ. ಸೂಕ್ತ ಸಿಬ್ಬಂದಿ ಇಲ್ಲದಿರುವುದು ಅನುಮತಿ ನಿರಾಕರಿಸಲು ಮತ್ತೊಂದು ಕಾರಣವಾಗಿದೆ‌‌‌. ಹೀಗಾಗಿ ನಿರ್ದಿಷ್ಟ ಸ್ಥಳಗಳಲ್ಲಿ‌ ಮಾತ್ರ ಹೋಟೆಲ್​​ ನಡೆಸಲು ಅನುಮತಿ ನೀಡಬಹುದಾಗಿದೆ ಎಂದು ಸರ್ಕಾರಕ್ಕೆ ನಗರ ಪೊಲೀಸರು ವರದಿ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಟೆಲ್​​ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್, ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೋಟೆಲ್​​ ತೆರೆಯಲು ಅನುಮತಿ ನೀಡಿರುವ ಬಗ್ಗೆ ಮಾಧ್ಯಮಗಳಿಂದ‌ ಮಾಹಿತಿ ಪಡೆದಿದ್ದೇನೆ.‌ ಒಂದು ವೇಳೆ ನಿಜವೇ ಆದಲ್ಲಿ ಹೋಟೆಲ್​​ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಲಿದೆ.

ನಗರದ ಎಲ್ಲಾ ಕಡೆಗಳಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್​​ ತೆರೆಯಲು ಅನುಮತಿ ನೀಡುವಂತೆ ನಗರ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದೆವು. ಆದರೆ, ಬಸ್, ರೈಲ್ವೆ ನಿಲ್ದಾಣಗಳ ಬಳಿ ಹೋಟೆಲ್​​ ನಡೆಸಲು ಸರ್ಕಾರಕ್ಕೆ ಪೊಲೀಸರು ವರದಿ ಸಲ್ಲಿಸಿರುವುದು ಸರಿಯಲ್ಲ.

ನೆರೆಯ ತಮಿಳುನಾಡು, ಆಂಧ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ 24 ಗಂಟೆಗಳ ಕಾಲ ಹೋಟೆಲ್​​ ತೆರೆಯಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಅನುಮತಿ ನೀಡಬೇಕು‌. ಅನುಮತಿ ನೀಡುವ ಕುರಿತಂತೆ ಮುಂದಿನ ವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಬೇಡಿಕೆ ಇಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚುತ್ತಿರುವ ಕೋವಿಡ್: ಆರೋಗ್ಯ ಇಲಾಖೆಯಿಂದ ಪರಿಷೃತ ಮಾರ್ಗಸೂಚಿ ಪ್ರಕಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.