ETV Bharat / city

ದೇವನಹಳ್ಳಿ: ಲ್ಯಾಂಡಿಂಗ್ ವೇಳೆ ವಿಮಾನದ ಟಯರ್​ ಸ್ಫೋಟ, ತಪ್ಪಿದ ಅನಾಹುತ - plane tyre burst

ಲ್ಯಾಂಡಿಂಗ್ ವೇಳೆ ವಿಮಾನದ ಟೈಯರ್ ಬ್ಲಾಸ್ಟ್‌ ಆಗಿರುವ ಘಟನೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಅನಾಹುತ ತಪ್ಪಿದೆ.

plane tyre burst in devanahalli airport
plane tyre burst in devanahalli airport
author img

By

Published : Apr 27, 2022, 5:48 PM IST

Updated : Apr 27, 2022, 5:55 PM IST

ದೇವನಹಳ್ಳಿ: ಲ್ಯಾಂಡಿಂಗ್ ವೇಳೆ ವಿಮಾನದ ಹಿಂಬದಿಯ ಟೈಯರ್ ಸ್ಫೋಟಗೊಂಡಿರುವ ಘಟನೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಾತ್ರಿ 11:30ರ ಸಮಯದಲ್ಲಿ ಈ ಘಟನೆ ನಡೆಯಿತು.

ಬ್ಯಾಂಕಾಕ್​ನಿಂದ ಟೆಕ್ ಆಫ್ ಆಗಿದ್ದ ಥಾಯ್ ಏರ್ ವೇಸ್‌ ಸಂಸ್ಥೆಯ ವಿಮಾನ ಕೆಐಎಎಲ್​ನಲ್ಲಿ ಲ್ಯಾಂಡಿಂಗ್​ ಆಗುವ ವೇಳೆ ಹಿಂಭಾಗದ ಟೈಯರ್ ಸ್ಫೋಟಗೊಂಡಿದೆ. ವಿಮಾನ ನಿಲ್ದಾಣದ ಸಿಬ್ಬಂದಿ ಪೈಲೆಟ್​ಗೆ ತಕ್ಷಣ ಎಚ್ಚರಿಕೆ ನೀಡಿದ್ದಾರೆ. ಈ ಮಾಹಿತಿ ಅರಿತ ಪೈಲೆಟ್‌ ಜಾಗರೂಕತೆಯಿಂದ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ವಿಮಾನ ಲ್ಯಾಂಡಿಂಗ್​ ಆದ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ತಾಂತ್ರಿಕ ಸಿಬ್ಬಂದಿ ತಪಾಸಣೆ ನಡೆಸಿದರು.

Last Updated : Apr 27, 2022, 5:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.