ETV Bharat / city

ಫೋನ್ ಟ್ಯಾಪಿಂಗ್ ಪ್ರಕರಣ: ಅಲೋಕ್ ಕುಮಾರ್​ಗೆ ಮತ್ತೆ ಬುಲಾವ್ ನೀಡಿದ ಸಿಬಿಐ

ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಸಿಬಿಐ
author img

By

Published : Nov 7, 2019, 6:42 PM IST

Updated : Nov 7, 2019, 8:14 PM IST

ಬೆಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಿರಿಯ ಪೊಲೀಸ್​ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದಾರೆ. ಅಲೋಕ್ ಕುಮಾರ್ ಅವರ ಸೂಚನೆಯಂತೆ ಫೋನ್ ಟ್ಯಾಪ್​ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಸಿಬಿಐ ತನಿಖೆ ನಡೆಸಿದ್ದು, ಅಲೋಕ್ ಕುಮಾರ್ ಮನೆ, ಕಚೇರಿ ಮೇಲೆ ದಾಳಿ ಮಾಡಿ ನಂತ್ರ ವಿಚಾರಣೆ ಕೂಡ ನಡೆಸಿದ್ದರು.

ಇನ್ಸ್​ಪೆಕ್ಟರ್, ಎಸಿಪಿಗಳ ಹೇಳಿಕೆ ಆಧಾರದ‌ ಮೇಲೆ ಮತ್ತೆ ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಅವರನ್ನು ವಿಚಾರಣೆಗೆ ಕರೆದಿದ್ದಾರೆ.

ಪ್ರಕರಣದ ಹಿನ್ನೆಲೆ:

ಭಾಸ್ಕರ್ ರಾವ್ ಅವರು ನಗರ ಪೊಲೀಸ್‌ ಆಯುಕ್ತರಾಗಲು ಲಾಬಿ ನಡೆಸಿದ್ದಾರೆಂಬ ಆಡಿಯೋ ವೈರಲ್ ಆಗಿತ್ತು. ನಂತ್ರ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ತನಿಖೆ ನಡೆಸಿದಾಗ ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿರಾಜು ಅವರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ನಂತ್ರ ಪ್ರಕರಣ ಗಂಭೀರವಾದ ಕಾರಣ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ. ಈ ವೇಳೆ ಆಡಳಿತ ಹಾಗು ವಿರೋಧ ಪಕ್ಷದ ರಾಜಕಾರಣಿಗಳು ಹಾಗು ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಆಗಿರುವ ವಿಚಾರ ಬಯಲಿಗೆ ಬಂದಿತ್ತು.

Intro:ಫೋನೋ ಟ್ಯಾಫಿಂಗ್ ಪ್ರಕರಣ
ಮತ್ತೆ ಸಿಬಿಐ ನಿಂದ ಅಲೋಲ್ ಕುಮಾರ್ಗೆ ಬುಲಾವ್

ರಾಜ್ಯದ್ಯಾಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಪೊನೋ ಟ್ಯಾಫಿಂಗ್ ಪ್ರಕರಣವನ್ನ ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರನ್ನ ಸಿಬಿಐ ಅಧಿಕಾರಿಗಳು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದಾರೆ. ಅಲೋಕ್ ಕುಮಾರ್ ಅವರ ಸೂಚನೆಯಂತೆ ಪೋನ್ ಟ್ಯಾಫ್ ಮಾಡಲಾಗಿತ್ತು ಎಂಬ ಆರೋಪದ ಮೇರೆಗೆ ಸಿಬಿಐ ತನಿಖೆ ನಡೆಸಿ ಅಲೋಕ್ ಕುಮಾರ್ ಅವರ ಮನೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು .ನಂತ್ರ ವಿಚಾರಣೆಯನ್ನ ಕೂಡ ನಡೆಸಿದ್ದರು

ಸದ್ಯ ಕಳೆದೆರಡು ದಿನಗಳಿಂದ ಅಲೋಕ್ ಕುಮಾರ್ ಅವರು ನಗರ ಆಯುಕ್ತ ರಾಗಿದ್ದ ಸಂಧರ್ಭದಲ್ಲಿ ಕೆಲ ಠಾಣಾ ಇನ್ಸ್ಪೆಕ್ಟರ್ ಎಸಿಪಿಗಳು ಕೆಲ ರಾಜಾಕಾರಣಿ ಹಾಗೂ ಸ್ವಾಮೀಜಿಗಳ ಪೋನ್ ಟ್ಯಾಪ್ ಮಾಡಿರುವ ಶಂಕೆ ಮೇರೆಗೆ ಸಿಸಿಬಿ ನೊಟಿಸ್ ಜಾರಿಗೊಳಿಸಿ ವಿಚಾರಣೆ್ಗೆ ಹಾಜರಾಗುವಂತೆ ಸೂಚಿಸಿದ್ರು. ಹೀಗಾಗಿ ನಗರದ‌ ಕೆ.ಕೆ ಗೆಸ್ಟ್ ಔಸ್ಗೆ ಸಿಸಿಬಿಯ ವಿಚಾರಣೆಗೆ ಹಾಜರಾಗಿ ಕೆಲ ದಾಖಲಾತಿಗಳನ್ನ ಕೂಡ ಎಸಿಪಿ ಇನ್ಸ್ಪೆಕ್ಟರ್ ಗಳು ಸಿಬಿಐ ಅಧಿಕಾರಿಗಳಿಗೆ ನೀಡಿದ್ರು

ಇನ್ಸ್ಪೆಕ್ಟರ್ ,ಎಸಿಪಿಗಳ ಹೇಳಿಕೆ ದಾಖಲೆಗಳ ಆಧಾರದ‌ಮೇಲೆ ಮತ್ತೆ ಸಿಬಿಐ ಯ ಅಧಿಕಾರಿಗಳು ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರನ್ನ ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ಮತ್ತೆ ಅಲೋಕ್ ಕುಮಾರ್ ಅವರು ವಿಚಾರಣೆ ಎದುರಿಸುವ ಸಂಭವ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿನ್ನೆಲೆ

ಈಗಿನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಗರ ಆಯುಕ್ತರಾಗಲು ಲಾಬಿ ನಡೆಸಿದ್ದಾರೆಂಬ ಆಡಿಯೋ ವೈರಲ್ ಆಗಿತ್ತು. ನಂತ್ರ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ತನಿಖೆ ನಡೆಸಿದಾಗ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಹಿನ್ನೆಲೆ ರಾಜ್ಯಪೊಲೀಸ್ ಮಹಾನಿರ್ದೇಶಕಿ ನೀಲಮಾಣಿರಾಜು ಅವರಿಗೆ ಮಾಹಿತಿ ರವಾನೆ ಮಾಡಲಾಗಿತ್ತು.ನಂತ್ರ ಪ್ರಕರಣ ಗಂಭೀರವಾದ ಕಾರಣ ರಾಜ್ಯ ಸರಕಾರ ಪ್ರಕರಣವನ್ಮ ಸಿಬಿಐಗೆ ವಹಿಸಿದಾಗ ಹಲವಾರು ರಾಜಾಕಾರಣಿಗಳ, ಸ್ವಾಮೀಜಿಗಳ ಪೋನ್ ಟ್ಯಾಪಿಂಗ್ ಆಗಿರುವ ವಿಚಾರ ಬಯಲಿಗೆ ಬಂದಿತ್ತುBody:KN_BNG_08_CBI_7204498Conclusion:KN_BNG_08_CBI_7204498
Last Updated : Nov 7, 2019, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.